ಲೋಪವಿಲ್ಲದೇ ಸಿಇಟಿ ಪರೀಕ್ಷಾ ಕಾರ್ಯ ನಿರ್ವಹಿಸಿಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಸೂಚನೆ
ಚಾಮರಾಜನಗರ

ಲೋಪವಿಲ್ಲದೇ ಸಿಇಟಿ ಪರೀಕ್ಷಾ ಕಾರ್ಯ ನಿರ್ವಹಿಸಿಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಸೂಚನೆ

April 23, 2019

ಚಾಮರಾಜನಗರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ 2019) ಪ್ರಕ್ರಿಯೆಯನ್ನು ಯಾವುದೇ ಲೋಪವಿಲ್ಲದೆ ಸಮರ್ಪಕವಾಗಿ ನಿರ್ವಹಿಸು ವಂತೆ ಡಿಸಿ ಬಿ.ಬಿ.ಕಾವೇರಿ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಸೋಮವಾರ ಸಾಮಾನ್ಯ ಪ್ರವೇಶ ಪರೀಕ್ಷೆ ಸಿದ್ಧತೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಇದೇ ತಿಂಗಳ 29 ಮತ್ತು 30ರಂದು ನಡೆಯುವ ಸಿಇಟಿ ಪರೀಕ್ಷಾ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸ ಬೇಕು. ಈಗಾಗಲೇ ನೇಮಕವಾಗಿರುವ ಅಧಿಕಾರಿಗಳು, ಪರೀಕ್ಷಾ ವೀಕ್ಷಕರು, ಮೂವರು ಸದಸ್ಯ ಸಮಿತಿ ಪರೀಕ್ಷಾ ಕೇಂದ್ರ ಮುಖ್ಯಸ್ಥರು, ವಿಶೇಷ ಜಾಗೃತ ದಳದ ಸದಸ್ಯರು ಇತರರು ನಿಯಮಾನುಸಾರವಾಗಿ ಪಾಲಿಸ ಬೇಕಿರುವ ಸೂಚನೆಗಳನ್ನು ತಿಳಿದುಕೊಳ್ಳಬೇಕು ಎಂದರು.

ಪರೀಕ್ಷೆ ವೇಳೆ ಸಂಬಂಧಪಟ್ಟ ಅಧಿಕಾರಿ ಗಳು ಎಚ್ಚರಿಕೆ ವಹಿಸಿ ಕಾರ್ಯ ನಿರ್ವಹಿಸ ಬೇಕು. ಎಂದಿನಂತೆ ಸಿಇಟಿ ಪರೀಕ್ಷೆಯು ಯಶಸ್ವಿಯಾಗಿ, ದೋಷ ರಹಿತವಾಗಿ ನಡೆಯಬೇಕು. ಪರೀಕ್ಷಾ ಸಮಯದಲ್ಲಿ ಅಳವ ಡಿಸಿರುವ ಎಲ್ಲಾ ನಿಯಮಗಳು ಉಲ್ಲಂಘನೆ ಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವಿ.ಆರ್.ಶ್ಯಾಮಲ ಮಾತನಾಡಿ, ಚಾಮರಾಜನಗರದ ಜೆಎಸ್‍ಎಸ್ ಮಹಿಳಾ ಕಾಲೇಜಿನಿಂದ 391 ವಿದ್ಯಾರ್ಥಿಗಳು, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಿಂದ 260 ವಿದ್ಯಾರ್ಥಿಗಳು, ಕೊಳ್ಳೇ ಗಾಲ ಪಟ್ಟಣದ ಸರ್ಕಾರಿ ಎಸ್‍ವಿಕೆ ಬಾಲಕಿ ಯರ ಪದವಿ ಪೂರ್ವ ಕಾಲೇಜಿನಿಂದ 344 ವಿದ್ಯಾರ್ಥಿಗಳು ಹಾಗೂ ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜಿನಿಂದ 320 ವಿದ್ಯಾರ್ಥಿಗಳು ಸೇರಿ ಒಟ್ಟು 1315 ವಿದ್ಯಾರ್ಥಿಗಳು ಈ ಬಾರಿ ಸಾಮಾನ್ಯ ಸಿಇಟಿ ಪರೀಕ್ಷೆಯನ್ನು ಬರೆಯಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಭೆ ಆರಂಭದಲ್ಲಿ ಚುನಾವಣಾ ಕರ್ತವ್ಯ ನಿರ್ವಹಣೆ ವೇಳೆ ಮೃತಪಟ್ಟ ಹನೂರು ಕಾಲೇಜಿನ ಉಪನ್ಯಾಸಕ ಶಾಂತಮೂರ್ತಿ ಅವರ ಗೌರವಾರ್ಥ 2 ನಿಮಿಷಗಳ ಕಾಲ ಮೌನ ಆಚರಿಸುವ ಮೂಲಕ ಸಂತಾಪ ಸೂಚಿಸಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುಳ, ಕೊಳ್ಳೇಗಾಲ ತಾಲೂಕಿನ ತಹಶೀಲ್ದಾರ್ ಆನಂದಯ್ಯ, ತಾಪಂ ಇಓ ರಮೇಶ್, ಮತ್ತಿತರ ಅಧಿಕಾರಿಗಳು ಸಭೆಯಲ್ಲಿದ್ದರು.

Translate »