ಚಾಮರಾಜನಗರ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿ ಏನಾಗಬಲ್ಲರು? ಎಂಬ ಚರ್ಚೆಪ್ರಸಾದ್ ಗೆದ್ದರೆ ಕೇಂದ್ರ ಮಂತ್ರಿಯಾಗುವ ಸಾಧ್ಯತೆ, ಧ್ರುವ ಗೆದ್ದರೆ ಹ್ಯಾಟ್ರಿಕ್ ಸಾಧನೆ
ಚಾಮರಾಜನಗರ

ಚಾಮರಾಜನಗರ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿ ಏನಾಗಬಲ್ಲರು? ಎಂಬ ಚರ್ಚೆಪ್ರಸಾದ್ ಗೆದ್ದರೆ ಕೇಂದ್ರ ಮಂತ್ರಿಯಾಗುವ ಸಾಧ್ಯತೆ, ಧ್ರುವ ಗೆದ್ದರೆ ಹ್ಯಾಟ್ರಿಕ್ ಸಾಧನೆ

April 23, 2019

ಚಾಮರಾಜನಗರ: ಇತ್ತೀಚೆಗೆ ಚಾಮರಾಜನಗರ ಮೀಸಲು ಲೋಕ ಸಭಾ ಕ್ಷೇತ್ರಕ್ಕೆ ಚುನಾವಣೆ ನಡೆದು ಅಭ್ಯರ್ಥಿಗಳ ರಾಜಕೀಯ ಭವಿಷ್ಯ ವಿದ್ಯುನ್ಮಾನ ಮತಯಂತ್ರದಲ್ಲಿ ಭದ್ರವಾಗಿದ್ದು, ಫಲಿತಾಂಶ ಹೊರಬೀಳಲು ಇನ್ನೂ (ಮೇ 23) 31ದಿನಗಳು ಬಾಕಿ ಇದೆ. ಹೀಗಿರುವಾಗ ಗೆಲ್ಲುವ ಅಭ್ಯರ್ಥಿ ಏನಾಗಬಲ್ಲರು ಎಂಬ ಬಗ್ಗೆ ಕ್ಷೇತ್ರ ದ್ಯಾಂತ ಚರ್ಚೆ ನಡೆಯುತ್ತಿದೆ.

ಚಾ.ನಗರ ಲೋಕಸಭಾ ಕ್ಷೇತ್ರದಿಂದ ಆಯ್ಕೆ ಬಯಸಿ 10 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಈ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿ ನಡೆ ದರೂ, ಕಾಂಗ್ರೆಸ್ ಅಭ್ಯರ್ಥಿ ಆರ್. ಧ್ರುವನಾರಾಯಣ್ ಹಾಗೂ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್ ನಡುವೆ ನೇರ ಹಣಾಹಣಿ ನಡೆದಿದ್ದು, ಇವರಿ ಬ್ಬರಲ್ಲಿ ಗೆಲುವು ಸಾಧಿಸುವವರು ನಾನಾ ಕಾರಣಗಳಿಂದ ಮತ್ತಷ್ಟು ಮುಂಚೂ ಣಿಗೆ ಬರಲಿದ್ದಾರೆ. ಇದು ರಾಜಕೀಯ ಆಸಕ್ತರು ಹಾಗೂ ಮುಖಂಡರಲ್ಲಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ವಿ.ಶ್ರೀನಿವಾಸಪ್ರಸಾದ್ ಗೆದ್ದರೆ: ಈ ಕ್ಷೇತ್ರದಿಂದ ಎರಡು ದಶಕದ ಬಳಿಕ ಸ್ಪರ್ಧಿಸಿರುವ (1999ರ ಚುನಾವಣೆ ಕೊನೆ ಸ್ಪರ್ಧೆ) ವಿ.ಶ್ರೀನಿವಾಸಪ್ರಸಾದ್ ಗೆಲುವು ಸಾಧಿಸಿದರೆ ಕ್ಷೇತ್ರದಿಂದ ಆರನೇ ಬಾರಿಗೆ ಗೆಲುವು ಸಾಧಿಸಿದ ಕೀರ್ತಿಗೆ ಪಾತ್ರರಾಗಲಿ ದ್ದಾರೆ. ಇದುವರೆಗೆ ಯಾರೊಬ್ಬರೂ ಸಹ ಈ ಕ್ಷೇತ್ರದಿಂದ ಆರು ಬಾರಿ ಗೆಲುವು ಸಾಧಿಸಿಲ್ಲ ಎಂಬುದು ವಿಶೇಷ.

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಇದು 15ನೇ ಚುನಾವಣೆ. ಕ್ಷೇತ್ರದಲ್ಲಿ ಒಮ್ಮೆಯೂ ಬಿಜೆಪಿ ಗೆಲುವು ಸಾಧಿಸಿಲ್ಲದಿ ರುವುದರಿಂದ ಕ್ಷೇತ್ರದಲ್ಲಿ ಮೊದಲ ಬಾರಿಗೆ ‘ಕಮಲ’ವನ್ನು ಅರಳಿಸಿದ ಶ್ರೇಯಕ್ಕೆ ಶ್ರೀನಿವಾಸ ಪ್ರಸಾದ್ ಪಾತ್ರರಾಗಲಿದ್ದಾರೆ. ಇದಲ್ಲದೇ ನಾನೊಬ್ಬ ‘ಪ್ರಭಾವಿ’ ದಲಿತ ನಾಯಕ. ಇನ್ನೂ ಸಹ ವರ್ಚಸ್ಸು ಉಳಿಸಿ ಕೊಂಡಿದ್ದೇನೆ ಎಂಬುದನ್ನು ವಿ. ಶ್ರೀನಿವಾಸಪ್ರಸಾದ್ ಸಾಬೀತು ಪಡಿಸಿದಂತೆ ಆಗುತ್ತದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಹಿರಿತನ ಹಾಗೂ ರಾಜ್ಯದ ದಲಿತ ಕೋಟಾದಡಿ ಸಚಿವರಾಗಲಿ ದ್ದಾರೆ ಎಂಬ ಮಾತುಗಳು ಹಾಗೂ ಲೆಕ್ಕಾ ಚಾರಗಳು ಕ್ಷೇತ್ರಾದ್ಯಂತ ನಡೆಯುತ್ತಿದೆ.

ತಾವು ಈ ಹಿಂದೆ ಇದ್ದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿದಂತೆ ಆಗುತ್ತದೆ. ಅಭ್ಯರ್ಥಿ ಆರ್. ಧ್ರುವನಾರಾಯಣ್ ಅವರ ಗೆಲುವಿಗೆ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸೇಡು ತೀರಿಸಿಕೊಂಡಂತೆ ಆಗುತ್ತದೆ ಎಂಬ ರಾಜಕೀಯದ ಲೆಕ್ಕಾ ಚಾರದ ಮಾತುಗಳು ಕೇಳಿ ಬರುತ್ತಿದೆ.

ಧ್ರುವನಾರಾಯಣ್ ಗೆದ್ದರೆ: ಕ್ಷೇತ್ರದಿಂದ ಕಳೆದ 2009 ಮತ್ತು 2014ರ ಚುನಾವಣೆ ಯಲ್ಲಿ ಗೆಲುವು ಸಾಧಿಸಿದ್ದ ಆರ್. ಧ್ರುವ ನಾರಾಯಣ್ ಈ ಬಾರಿಯೂ ಜಯಗಳಿ ಸಿದರೆ ‘ಹ್ಯಾಟ್ರಿಕ್’ ಜಯದ ಕೀರ್ತಿಗೆ ಭಾಜನರಾಗಲಿದ್ದಾರೆ. ಕ್ಷೇತ್ರದಿಂದ ಇದುವರೆ ವಿಗೆ ಹ್ಯಾಟ್ರಿಕ್ ಜಯಗಳಿಸಿರುವ ಎಸ್.ಎಂ. ಸಿದ್ದಯ್ಯ ಮತ್ತು ವಿ.ಶ್ರೀನಿವಾಸಪ್ರಸಾದ್ ಅವರ ಸಾಲಿಗೆ ಧ್ರುವನಾರಾಯಣ್ ಸೇರ್ಪಡೆಯಾಗಲಿದ್ದಾರೆ.

ಕೇಂದ್ರದ ಮಾಜಿ ಸಚಿವರನ್ನು ಪ್ರಭಾವಿ ದಲಿತ ನಾಯಕನನ್ನು ಹಾಗೂ ಈ ಕ್ಷೇತ್ರದಿಂದ 5 ಬಾರಿ ಗೆಲುವು ಸಾಧಿಸಿದ್ದ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಸೋಲಿ ಸಿದ ಹೆಗ್ಗಳಿಕೆ ಧ್ರುವನಾರಾಯಣ್ ಅವರಿಗೆ ಸಲ್ಲಲಿದೆ. ಈ ಮೂಲಕ ಪ್ರಭಾವಿ ದಲಿತ ನಾಯಕ ಹಾಗೂ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಾಗಿ ಹೊರಹೊಮ್ಮಲಿದ್ದಾರೆ.

ಕ್ಷೇತ್ರದಲ್ಲಿ ಇದುವರೆವಿಗೆ ನಡೆದಿರುವ 14 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 10 ಬಾರಿ ಗೆಲುವು ಸಾಧಿಸಿದೆ. 11ನೇ ಬಾರಿಗೆ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿರುವುದ ರಿಂದ ಕ್ಷೇತ್ರ ಕಾಂಗ್ರೆಸ್ ‘ಭದ್ರಕೋಟೆ’ ಎಂಬುದು ಸಾಬೀತಾಗಲಿದೆ. ಈ ಮೂಲಕ ಬಿಜೆಪಿಯ ‘ಕಮಲ’ ಇಲ್ಲಿ ಅರಳಲು ಅವಕಾಶ ಇಲ್ಲ ಎಂಬುದನ್ನು ಆ ಪಕ್ಷದ ನಾಯಕ ರಿಗೆ ಮತ್ತೊಮ್ಮೆ ಸಾಕ್ಷ್ಯಾಧಾರಗಳ ಸಹಿತ ಬಹಿರಂಗವಾಗಿ ಹೇಳಿದಂತೆ ಆಗುತ್ತದೆ.

ಜಿಲ್ಲೆಯಲ್ಲಿ ಶಿಸ್ತಿನ ಸಿಪಾಯಿಯಂತೆ ಇದ್ದು ಕಾಂಗ್ರೆಸ್ ಪಕ್ಷ ‘ಕಿಂಗ್’ ಆಗಿದ್ದ ಹೆಚ್.ಎಸ್.ಮಹದೇವಪ್ರಸಾದ್ 5 ವಿಧಾನಸಭಾ ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸಿದ್ದರು. ಧ್ರುವನಾರಾಯಣ್ ಸಹ 2 ವಿಧಾನಸಭೆ ಹಾಗೂ 3 ಲೋಕ ಸಭಾ ಚುನಾವಣೆ (ಒಟ್ಟು 5 ಚುನಾವಣೆ) ಯಲ್ಲಿ ಸತತವಾಗಿ ಗೆಲುವು ಸಾಧಿಸಿದ ಶ್ರೇಯಕ್ಕೆ ಪಾತ್ರರಾಗಲಿದ್ದಾರೆ. ಕ್ಷೇತ್ರದಲ್ಲಿ ಕೈ ಪಾಳಯದ ಧ್ರುವನಾರಾಯಣ್ ಗೆದ್ದು ತನ್ನ ಅಸ್ತಿತ್ವದ ಸಾಮ್ರಾಜ್ಯವನ್ನು ಸಾಬೀತು ಪಡಿಸುವರೋ ಅಥವಾ ಕಮಲದ ಶ್ರೀನಿವಾಸಪ್ರಸಾದ್ ಜಯಸಾಧಿಸುತ್ತಾರೋ ಎಂಬುದನ್ನು ತಿಳಿಯಲು ಮೇ 23ರ ಮತ ಎಣಿಕೆ ದಿನದವರೆಗೆ ಕಾಯಬೇಕಾಗಿದೆ.

– ಸಿದ್ದಲಿಂಗಸ್ವಾಮಿ

Translate »