ಮೈಸೂರು: ಕಾಡೇ ಪ್ರಪಂಚ ಎಂದು ತಿಳಿದಿದ್ದ ನಮಗೆ ಹಿಮಾಲಯ ಏರುವ ಅವಕಾಶ ಒದಗಿ ಬಂದಿ ರುವುದು ಸುದೈವ. ಕನಸಲ್ಲೂ ಅಲ್ಲಿಗೆ ಹೋಗುತ್ತೇವೆ ಎಂದೆನಿಸಿರಲಿಲ್ಲ. ಇದೀಗ ಛಲ ಮುಂದಿದೆ, ಯಾವುದೇ ಸವಾಲು ಎದುರಾದರೂ ಶಿಖರವನ್ನು ಏರಿ ಬರುತ್ತೇವೆ..!
ಹೆಚ್.ಡಿ.ಕೋಟೆ ತಾಲೂಕಿನ ವಿವಿಧ ಹಾಡಿಗಳ 12 ಬಾಲಕಿಯರನ್ನು ಹಿಮಾ ಚಲ ಪ್ರದೇಶದ ಧೌಲಾರ್ಧ ರೇಂಜ್‍ನ 14,000 ಅಡಿ ಎತ್ತರದ ಸೌರ್ಕುಂಡ ಪಾಸ್ ಶಿಖರ ಚಾರಣಕ್ಕೆ ಟೈಗರ್ ಅಡ್ವೆಂಚರ್ ಫೌಂಡೇಶನ್ ಕರೆದೊ ಯ್ಯುತ್ತಿದ್ದು, ಇದೇ ಮೊದಲ ಬಾರಿಗೆ ಹಿಮದ ಲೋಕ ಸ್ಪರ್ಶಿಸುವ ತವಕದ ಲ್ಲಿರುವ ಬುಡಕಟ್ಟು ಸಮುದಾಯದ ವಿದ್ಯಾರ್ಥಿ ಗಳಲ್ಲಿ ಸಂಭ್ರಮ ಮನೆ ಮಾಡಿದೆ.
ಯಾರ್ಯಾರು: ಹಿಮಾಲಯ ಚಾರಣ ಕೈಗೊಂಡಿ ರುವ 26 ಸದಸ್ಯರ ತಂಡದಲ್ಲಿ 12 ಮಂದಿ ಪ್ರೌಢಶಾಲಾ ವಿದ್ಯಾರ್ಥಿನಿಯರು ಬುಡಕಟ್ಟು ಸಮುದಾಯಕ್ಕೆ ಸೇರಿರುವುದು ಅತೀ ವಿಶೇಷ. ಕೆಬ್ಬೇಪುರ ಹಾಡಿಯ ಸೋನಾ, ನವ್ಯ, ಅಂಕಣ ಪುರದ ಅಂಜನಾ, ಆನೆಮಾಳ ಹಾಡಿಯ ಪ್ರಮೀಳ, ಹೊಸಹಳ್ಳಿ ಜ್ಯೋತಿ, ಗಂಡೆತ್ತೂರು ಸುಮಿತ್ರ, ಶಿಲ್ಪಾ, ಬಳೇ ಹಾಡಿ ರಕ್ಷಿತಾ, ಬಸಾಪುರ ಸುಶ್ಮಿತಾ, ಮಾಲಾ ದಾಡಿಯ ಐಶ್ವರ್ಯ, ಕಾಂತನಹಾಡಿ ಕಾವ್ಯ, ಎನ್.ಬೇಗೂರು ನಿವಾಸಿ ಅಶ್ವಿನಿ ಚಾರಣಕ್ಕೆ ಆಯ್ಕೆ ಯಾದವರು. ಈ ಎಲ್ಲಾ ವಿದ್ಯಾರ್ಥಿನಿಯರು ಹೆಚ್.ಡಿ.ಕೋಟೆ ತಾಲೂಕಿನ ಹೊಸಹಳ್ಳಿಯ ವಿವೇಕ ಬುಡಕಟ್ಟು ಕಲಿಕಾ ಕೇಂದ್ರದ ವಸತಿ ಶಾಲೆ ಯಲ್ಲಿ 8 ಹಾಗೂ 9ನೇ ತರಗತಿ ಓದುತ್ತಿದ್ದಾರೆ. ಈಗಾಗಲೇ ಚಾರಣಕ್ಕೆ ತರಬೇತಿ ನೀಡಲಾಗಿದೆ. ಚಾಮುಂಡಿಬೆಟ್ಟ, ಕುಂತಿಬೆಟ್ಟ, ಹೊಸಹಳ್ಳಿ ಹಾಗೂ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಕಳೆದ ನಾಲ್ಕು ತಿಂಗಳಿಂದ ವಿಶೇಷ ತರಬೇತಿ ಕೊಡಲಾಗಿದೆ.
ಪ್ರಯಾಣ: ಮೇ 2ರಂದು ಈ ತಂಡ ಮೈಸೂ ರಿಂದ ಪ್ರಯಾಣ ಬೆಳೆಸಲಿದೆ. ಮೇ 13ರಂದು ಸೌರ್ಕುಂಡ್ ಪಾಸ್ ಶಿಖರ ಏರಲಿದೆ. ಅದಕ್ಕೂ ಮುನ್ನ ಸರ್ಸಾಯï, ಬೇಸ್ ಕ್ಯಾಂಪ್, ಸೆಗ್ಲಿ, ಹೊರಾದಂತ, ಮಾಯಾಲೀ, ಧೋರಾ, ಲೋಂಗ ದಟ್ಟ ಮತ್ತು ಲೆಖನಿ ಮುಂತಾದ ಕಡೆಗಳಲ್ಲಿ ಕ್ಯಾಂಪ್ ಮಾಡಲಿದೆ. ಬಾಲಕಿಯರು ವಿವಿಧ ಬಗೆಯ ಸಾಹಸ ಚಟು ವಟಿಕೆಗಳಾದ ರಾಫಲಿಂಗ್, ರಿವರ್ ಕ್ರಾಸಿಂಗ್ ಹಾಗೂ ಪ್ಯಾರಾ ಸ್ಲೈಡಿಂಗ್‍ನಲ್ಲಿ ಭಾಗವಹಿಸಲಿದ್ದಾರೆ.
‘ಆಶಾ 2019’ ತಂಡವನ್ನು 9 ಬಾರಿ ಹಿಮಾಲಯ ಚಾರಣ ಮಾಡಿ ಅನುಭವ ಹೊಂದಿರುವ 9ನೇ ತರಗತಿ ವಿದ್ಯಾರ್ಥಿನಿ ರಿಯಾ ಸೋಲಂಕಿ ಮುನ್ನಡೆಸ ಲಿದ್ದಾರೆ. ಮಧ್ಯಪ್ರದೇಶದ ಖಾನ ಹುಲಿ ಅಭಯಾ ರಣ್ಯದಲ್ಲಿ ನ್ಯಾಚುರಲಿಸ್ಟ್ ಎಂ.ಮೋಹನ್ ಕುಮಾರ್ ಹಾಗೂ ಟೈಗರ್ ಅಡ್ವೆಂಚರ್ ಫೌಂಡೇಶನ್ ಕಾರ್ಯಾ ಧ್ಯಕ್ಷ ಸುಮಾ ಮಹೇಶ್ ಅವರು ರಿಯಾ ಸೋಲಂಕಿ ಅವರಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಹೆರಿಟೇಜ್ ಭೇಟಿ: ಈ ಪ್ರವಾಸದಲ್ಲಿ ಪಾರ್ಲಿ ಮೆಂಟ್ ಹೌಸ್, ರಾಷ್ಟ್ರಪತಿ ಭವನ, ಮ್ಯೂಸಿಯಂ, ಅP್ಷÀರ ಧಾಮ ದೇವಸ್ಥಾನ, ಇಂಡಿಯಾ ಗೇಟ್, ತಾಜ್ ಮಹಲï, ಆಗ್ರಾದಲ್ಲಿನ ಕೋಟೆ ಮತ್ತು ಮಥು ರಾದ ಶ್ರೀ ಕೃಷ್ಣ ದೇವಾಲಯ, ಗೋಲ್ಡನ್ ಟೆಂಪಲï, ಜಲಿಯನ್ ವಾಲಾಬಾಗ್, ಅಮೃತಸರಕ್ಕೆ ಭೇಟಿ ನೀಡಲಿದ್ದಾರೆ.
ಎಂ.ಟಿ.ಯೋಗೇಶ್ ಕುಮಾರ್