ಹೆಚ್.ಡಿ.ಕೋಟೆ: ಬೋರ್‍ವೆಲ್ ಲಾರಿಯೊಂದು ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ಸಾವಿಗೀಡಾದ ಘಟನೆ ತಾಲೂಕು ಚಿಕ್ಕೆರೆಯೂರು ಗ್ರಾಮದ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ.
ಅವಿನಾಶ್ (22) ಮತ್ತು ಶರವಣ (22) ಎಂಬುವರೇ ಮೃತಪಟ್ಟ ದುರ್ದೈ ವಿಗಳು. ಚಿಕ್ಕೆರೆಯೂರು ಗ್ರಾಮದಲ್ಲಿ ಬೋರ್‍ವೆಲ್ ನಿರ್ಮಾಣಕ್ಕೆ ಪೈಪ್ ತುಂಬಿ ಕೊಂಡು ಬರುತ್ತಿದ್ದಾಗ ಲಾರಿ (ಕೆಎ-01-ಎಜಿ-5069) ಗ್ರಾಮದ ಕೆರೆ ಏರಿ ಮೇಲೆ ಬಂದಾಗ ಪಲ್ಟಿ ಹೊಡೆದು ಈ ದುರಂತ ಸಂಭವಿಸಿದೆ. ಚಾಲಕ ಹಾಗೂ ಇನ್ನಿಬ್ಬರಿಗೆ ತೀವ್ರ ಗಾಯಗಳಾಗಿ ಮೈಸೂ ರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಮೃತದೇಹಗಳನ್ನು ಕೆ.ಆರ್. ಆಸ್ಪತ್ರೆ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಗಿದೆ. ಲಾರಿ ಚಾಲಕ ತಮಿಳುನಾಡಿನ ವರಾಗಿದ್ದು, ಉಳಿದ ನಾಲ್ವರು ಕೂಲಿ ಕಾರ್ಮಿಕ ರಾಗಿ ಛತ್ತೀಸ್ ಘಡದಿಂದ ಬಂದವರು.
ಕೋಟೆ ಸರ್ಕಲ್ ಇನ್ಸ್‍ಪೆಕ್ಟರ್ ಹರೀಶ್, ಎಸ್‍ಐ ಅಶೋಕ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.