ಶಿರೂರು ಶ್ರೀ ಕೋಣೆಯಲ್ಲಿ ವಿದೇಶಿ ಮದ್ಯ, ಕಾಂಡೋಮ್, ಸ್ಯಾನಿಟರಿ ಪ್ಯಾಡ್!
ಮೈಸೂರು

ಶಿರೂರು ಶ್ರೀ ಕೋಣೆಯಲ್ಲಿ ವಿದೇಶಿ ಮದ್ಯ, ಕಾಂಡೋಮ್, ಸ್ಯಾನಿಟರಿ ಪ್ಯಾಡ್!

July 25, 2018

ಉಡುಪಿ: ಶಿರೂರು ಸ್ವಾಮೀಜಿಗಳ ನಿಗೂಢ ಸಾವಿನ ಹಿನ್ನೆಲೆಯಲ್ಲಿ ಪೊಲೀಸರು ಶಿರೂರು ಮಠವನ್ನು ತಪಾಸಣೆ ಮಾಡಿದ್ದಾರೆ. ಈ ಸಂದರ್ಭ ಪೊಲೀಸರು ಶಾಕ್‍ಗೆ ಒಳಗಾಗಿದ್ದಾರೆ.

ಶಿರೂರು ಮಠದ ಸ್ವಾಮೀಜಿ ಗಳ ಆಪ್ತರ ಕೋಣೆಯಲ್ಲಿ ಮದ್ಯ ಬಾಟಲಿಗಳು ಸಿಕ್ಕಿವೆ. ಅವುಗಳ ಮೌಲ್ಯ ಬರೋಬ್ಬರಿ 6 ಲಕ್ಷ ರೂ. ಇದ್ದು, ವಿದೇಶದ ದುಬಾರಿ ಮದ್ಯವಾಗಿದೆ. ಕಾಂಡೋಮ್, ಸ್ಯಾನಿಟರಿ ಪ್ಯಾಡ್, ಮಹಿಳೆಯರ ಬಟ್ಟೆಗಳೂ ಪತ್ತೆಯಾಗಿದೆ. ಸ್ವಾಮೀಜಿ ಚಾರಿತ್ರ್ಯ ಕುರಿತು ಬಹಳ ಹಿಂದೆಯೇ ಚರ್ಚೆಗಳು ನಡೆಯುತ್ತಿತ್ತು. ಆದರೆ ಸ್ವಾಮೀಜಿ ಬದುಕಿದ್ದಾಗ ಈ ಬಗ್ಗೆ ಗೊತ್ತಿರುವವರೂ ಚಕಾರ ಎತ್ತುತ್ತಿರಲಿಲ್ಲ. ಏಳು ಮಠದ ಯತಿಗಳಿಗೆ ತಗಾದೆ ಇದ್ದರೂ ಏನೂ ಮಾಡಲಾಗದೆ ಸುಮ್ಮನಿದ್ದರು. ಇದೀಗ ಎಲ್ಲವೂ ಬೆಳಕಿಗೆ ಬಂದಿದೆ ಎಂದು ಕೃಷ್ಣಮಠದ ಭಕ್ತ ಬಾಲಾಜಿ ರಾಘವೇಂದ್ರರು ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ರಮ್ಯಾ ಶೆಟ್ಟಿ ಬಂಧನ ಆಗಿಲ್ಲ. ಕೆಲವು ಮಾಧ್ಯಮಗಳಲ್ಲಿ ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಹೀಗೆ ಬಿಂಬಿಸಿ ಜನರ, ನ್ಯಾಯಾಲಯದ ದಿಕ್ಕು ತಪ್ಪಿಸಬೇಡಿ ಎಂದು ಎಸ್‍ಪಿ ಲಕ್ಷ್ಮಣ ನಿಂಬರ್ಗಿ ಮಾಧ್ಯಮಗಳಿಗೆ ವಿನಂತಿಸಿಕೊಂಡರು.

ಶಿರೂರು ಸ್ವಾಮೀಜಿಗೆ ಇಬ್ಬರು ಮಹಿಳೆಯರ ಸಂಪರ್ಕವಿತ್ತು. ಹೀಗಾಗಿ ಮೊದಲ ಮಹಿಳೆಯ ಪುತ್ರನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಆತನು ಮಹತ್ವದ ಮಾಹಿತಿಯನ್ನು ನೀಡಿದ್ದಾನೆ ಎನ್ನಲಾಗಿದೆ. ಡಿವಿಆರ್ ನಾಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಆತನ ಜೊತೆಗೆ ಇನ್ನು ಇಬ್ಬರು ಯುವಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಮೂವರನ್ನು ನಿನ್ನೆ ಬೆಳಗ್ಗೆಯಿಂದ ಸಂಜೆಯವರೆಗೆ ತನಿಖೆ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Translate »