ಹಾಸನದ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ 3ನೇ ಸ್ಥಾನ
ಹಾಸನ

ಹಾಸನದ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ 3ನೇ ಸ್ಥಾನ

May 8, 2018

ಹಾಸನ: ಟ್ಯೂಷನ್‍ಗೆ ಹೋಗದೇ ನಗರದ ವಿಜಯ ಆಂಗ್ಲ ಮಾಧ್ಯಮ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಇಂದು ರಾಜ್ಯಕ್ಕೆ 3ನೇ ಸ್ಥಾನ ಪಡೆ ಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ನಗರದ ವಿಜಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಪಡೆದು ಅತ್ಯುನ್ನತ ಶ್ರೇಣ ಪಡೆದಿರುವ ಆದರ್ಶನಗರ ವಾಸಿ ಕಾಫಿ ಬೋರ್ಡ್‍ನಲ್ಲಿ ನೌಕರ ಬಸವರಾಜು ನಳಿನಿ ದಂಪತಿ ಬಿ.ಹಿಮಾ ಹಾಗೂ ಶಂಕರೀಪುರಂನಲ್ಲಿ ವಾಸಿ ಲಕ್ಷ್ಮಿ ಕಾಫಿ ಕ್ಯೂರಿಂಗ್ ಮಾರ್ಕೇಟಿಂಗ್ ಮ್ಯಾನೇಜರ್ ಎಂ.ಬಿ.ಕಾಳಪ್ಪ ಪವಿತ್ರ ದಂಪತಿ ಪುತ್ರ ಕಾವೇರಿಯಪ್ಪ 625 ಅಂಕ ಗಳಿಗೆ 623 ಅಂಕವನ್ನು ಪಡೆಯವ ಮೂಲಕ ರಾಜ್ಯಕ್ಕೆ 3ನೇ ಸ್ಥಾನ ಪಡೆದಿದ್ದಾರೆ.

ಫಲಿತಾಂಶ ತಿಳಿಯುತ್ತಿದ್ದಂತೆ ತಾವು ಓದಿದ ಶಾಲೆಗೆ ಆಗಮಿಸಿದ ಇಬ್ಬರೂ ವಿದ್ಯಾರ್ಥಿಗಳು ಸಿಹಿ ಹಂಚಿದರು. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕಳೆದ ಬಾರಿ 31ನೇ ಸ್ಥಾನ ಪಡೆದಿದ್ದ ಜಿಲ್ಲೆ, ಈ ಬಾರಿ ಉತ್ತಮ ಫಲಿತಾಂಶದೊಂದಿಗೆ 7ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ಬಿ.ಹಿಮಾ ನಾನು 625ಕ್ಕೆ 625 ಅಂಕ ನಿರೀಕ್ಷೆ ಮಾಡಿದ್ದೆ . ಆದರೆ 2 ಅಂಕ ಕಡಿಮೆಯಾಗಿದ್ದು, ಮತ್ತೇ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕುತ್ತೇನೆ. ಹಾಗೆಯೇ ಮುಂದೆ ಐಎಎಸ್ ಮಾಡುವ ಆಸೆ ಇದೆ.

ವಿದ್ಯಾರ್ಥಿ ಕಾವೇರಿಯಪ್ಪ ಪ್ರತಿಕ್ರಿಯಿಸಿ, ಇಂಗ್ಲಿಷ್ ನಲ್ಲಿ 100ಕ್ಕೆ 98 ಅಂಕ ಪಡೆದು, ಊಳಿದೆಲ್ಲಾ ವಿಷಯ ಗಳಲ್ಲಿ ನಿಗದಿತ ಅಂಕಕ್ಕೆ ಅಷ್ಟೇ ಅಂಕ ಬಂದಿದೆ. ಭವಿಷ್ಯದಲ್ಲಿ ಥಿಯಾಟಿಕಲ್ ಫಿಸಿಕ್ಸ್ ನಲ್ಲಿ ಹೆಚ್ಚಿನ ವ್ಯಾಸಂಗ ಮಾಡುವ ಗುರಿ ಇದೆ ಎಂದು ತಮ್ಮ ಅಭಿಲಾಷೆ ಹಂಚಿಕೊಂಡರು. ವಿದ್ಯಾರ್ಥಿಗಳು ಪೋಷಕರು, ಶಾಲೆ ಸಿಬ್ಬಂದಿ ಅಭಿನಂದಿಸಿದ್ದಾರೆ.

Translate »