ಚುನಾವಣೆ ಬಹಿಷ್ಕರಿಸಲು ಮುಸಲ್ಮಾನ ಬಾಂಧವರ ನಿರ್ಧಾರ
ಹಾಸನ

ಚುನಾವಣೆ ಬಹಿಷ್ಕರಿಸಲು ಮುಸಲ್ಮಾನ ಬಾಂಧವರ ನಿರ್ಧಾರ

May 8, 2018

ರಾಮನಾಥಪುರ:  ವಿಧಾನಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಮುಸ್ಲಿಂ ಬಾಂಧವರು ಎಚ್ಚರಿದ್ದಾರೆ.

ಸುಮಾರು 85 ಒಕ್ಕಲು ಮುಸಲ್ಮಾನ ಜನಾಂಗದವರು ಮುಸ್ಲಿಂ ಜಾಮಿಯಾ ಮಸೀದಿ ಪ್ರಧಾನ ಕಾರ್ಯದರ್ಶಿ ಸಾಧಿಕ್‍ಸಾಬ್ ನೇತೃತ್ವದಲ್ಲಿ ಮುಂತಾದವರು ಸಭೆ ಸೇರಿ ಚರ್ಚಿಸಿದರಲ್ಲದೆ, ಕಪ್ಪು ಬಾವುಟ ಪ್ರದರ್ಶಿಸಿ, ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಧಿಕ್ಕಾರ ಕೂಗಿ ಪ್ರತಿಭಟಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಜಾಮಿಯಾ ಮಸೀದಿ ಪ್ರಧಾನ ಕಾರ್ಯದರ್ಶಿ ಸಾಧಿಕ್‍ಸಾಬ್ ಮಾತನಾಡಿ, ಪಟ್ಟಣದಲ್ಲಿ ಮುಸಲ್ಮಾನ ಜನಾಂಗದ ಸುಮಾರು 85 ವಕ್ಕಲು ಅನಾಧಿಕಾಲದಿಂದಲೂ ವಾಸವಾಗಿದ್ದು, ಹತ್ತಾರು ವರ್ಷ ಗಳಿಂದ ಶವ ಸಂಸ್ಕಾರ ಮಾಡಲು ಸ್ಥಳವಿಲ್ಲದೇ ರಾಮನಾಥಪುರ ದಿಂದ ಹಾಸನ, ಕೊಣನೂರು. ಕಟ್ಟೇಪುರ ಮುಂತಾದ ಕಡೆಗಳಿಗೆ ಶವ ತೆಗೆದುಕೊಂಡು ಹೋಗಿ ಶವಸಂಸ್ಕಾರ ಮಾಡುವಂತ ಅನಿ ವಾರ್ಯತೆ ಎದುರಾಗಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಜನಪ್ರತಿನಿಧಿಗಳು ಅಶ್ವಾಸನೆ ನೀಡುತ್ತಾ ಬಂದಿದ್ದು, ನಮ್ಮ ಸಮಾಜ ವನ್ನು ತಾತ್ಸಾರವಾಗಿ ನೋಡುತ್ತಿದ್ದಾರೆ. ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ತಹಶೀಲ್ದಾರಿಗೆ ಮನವಿ ಮಾಡಿದರೂ ಪ್ರಯೋ ಜನವಾಗಿಲ್ಲ ಎಂದು ದೂರಿದರಲ್ಲದೇ ಸ್ಥಳೀಯ ನಾಡಕಚೇರಿಯ ಮುಂದೆ ಸಹ ಶವವನ್ನು ಇಟ್ಟು ಅನೇಕ ಬಾರಿ ಪ್ರತಿಭಟಿಸಿದರೂ ಗಮನಹರಿಸುತ್ತಿಲ್ಲ ಎಂದು ಅವಲತ್ತುಕೊಂಡರು.

10 ವರ್ಷದಿಂದ ಸತ್ತವರನ್ನು ದಫನ್ ಮಾಡಲು ಸರ್ಕಾರಕ್ಕೆ, ಜನಪ್ರತಿ ನಿಧಿಗಳಿಗೆ, ಸ್ಮಶಾನದ ಜಾಗಕ್ಕಾಗಿ ನೂರಾರು ಮನವಿಗಳನ್ನು ಕೊಟ್ಟರೂ ಇಲ್ಲಿಯವರೆಗೆ ಜಾಗ ನೀಡಿಲ್ಲ. ಕೂಡಲೇ ಶವ ಸಂಸ್ಕಾರ ಮಾಡಲು ಕ್ರಮ ಕೈಗೊಳ್ಳದಿದರೆ ಮೇ. 12ರಂದು ನಡೆಯಲಿರುವ ವಿಧಾನಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದರು.
ಜಾಮಿಯಾ ಮಸೀದಿ ಖಜಾಂಚಿ ಫಿರ್‍ಸಾಬ್, ಖಲೀಲ್, ಮಹಮದ್, ಅಮಾನುಲ್ಲಾ, ಅಶ್ವಾಕ್, ತನ್ನ್‍ವೀರ್, ಜಮೀರ್, ನಜೀರ್ ಇತರರು ಹಾಜರಿದ್ದರು.

Translate »