ಕೆ.ಆರ್.ಕ್ಷೇತ್ರದ ಮತದಾರರು, ನನ್ನ ಸಂಬಂಧ  ರಾಜಕೀಯವಾದುದಲ್ಲ, ಭಾವನಾತ್ಮಕವಾದುದು
ಮೈಸೂರು

ಕೆ.ಆರ್.ಕ್ಷೇತ್ರದ ಮತದಾರರು, ನನ್ನ ಸಂಬಂಧ  ರಾಜಕೀಯವಾದುದಲ್ಲ, ಭಾವನಾತ್ಮಕವಾದುದು

May 7, 2018

ಮೈಸೂರು:  ನನ್ನ ಮತ್ತು ಜನರ ನಡುವೆ ಒಂದು ರಾಜಕೀಯ ಪಕ್ಷದ ಅಭ್ಯರ್ಥಿ ಹಾಗೂ ಮತದಾರರ ನಡುವಿನ ಸಂಬಂಧವಷ್ಟೇ ಅಲ್ಲ, ಭಾವ ನಾತ್ಮಕ ಸಂಬಂಧವಿದೆ. ನನಗೆ 5 ವರ್ಷ ರಜೆ ಕೊಟ್ಟಿದ್ದರು ಅಷ್ಟೇ. ಈ ಬಾರಿ ಅವರ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆ ಯಾಗುತ್ತೇನೆ. 2008ರ ಚುನಾವಣೆಗಿಂತಲೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಬರು ತ್ತೇನೆ ಎಂದು ಮಾಜಿ ಸಚಿವ, ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಎ. ರಾಮ ದಾಸ್, ಅತೀವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರದ 6ನೇ ವಾರ್ಡ್‍ನಲ್ಲಿ ಪಾದ ಯಾತ್ರೆ ಮೂಲಕ, ಮತಯಾಚಿಸುತ್ತಿದ್ದ ಸಂದರ್ಭದಲ್ಲಿ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಜನ ನನ್ನನ್ನು ರಾಜಕಾರಣ ಯಾಗಿ ನೋಡುವುದ ಕ್ಕಿಂತ, ತಮ್ಮ ಮನೆಯ ಮಗನೇ ಚುನಾ ವಣೆಗೆ ಸ್ಪರ್ಧಿಸಿರುವಂತೆ ಕಾಣುತ್ತಿದ್ದಾರೆ. ಮತಯಾಚನೆಗೆ ಹೋದಾಗ ಮನೆಯೊಳಗೆ ಕರೆದು, ಪೂಜೆಯ ಪ್ರಸಾದ, ಹಾಲು, ಹಣ್ಣು ನೀಡಿ ವಿಶ್ವಾಸ ತೋರು ತ್ತಾರೆ. 87 ವರ್ಷದ ಶಾಂತಮ್ಮ ಅವರು, ಮಗನನ್ನು ಕಳೆದುಕೊಂಡ ನನ್ನಂತ ಎಷ್ಟೋ ತಾಯಂ ದಿರು, ನಿನ್ನನ್ನೇ ಮಗನೆಂದು ತಿಳಿದಿದ್ದಾರೆ. ನಿನ್ನಿಂದ ನಾನು ಸಹಾಯ ಪಡೆದಿದ್ದೇನೆ. ಆದರೆ ನಿನಗೆ ನನ್ನ ಪರಿಚಯವಿಲ್ಲ ಅಷ್ಟೆ. ಯಾವ ಕಾರಣಕ್ಕೂ ದುಡುಕಬೇಡ ಎಂದು ತಿಳಿಹೇಳಿ, ಆಶೀರ್ವದಿಸಿದರು. 108 ವರ್ಷದ ಸಂಪತ್ ಅಯ್ಯಂಗಾರ್ ಅವರು, ಮುಂದೆ ಸಾಗಿದ್ದ ನನ್ನನ್ನು ವಾಪಸ್ಸು ಕರೆಸಿಕೊಂಡು, ನನ್ನ ಆರೋಗ್ಯ ಕ್ಷೀಣ ಸಿದೆ. ನಿನಗೆ ಮತ ನೀಡಿ ಮತ್ತೊಮ್ಮೆ ಉನ್ನತ ಸ್ಥಾನದಲ್ಲಿ ನೋಡಬೇಕೆಂದು ಹೇಳಿ ಹರಸಿ ದರು. ಶಾಲಾ ಮಕ್ಕಳು ಹತ್ತನೇ ತರಗತಿ ಗೈಡ್ ವಿತರಣೆ ಮಾಡಿ, ಸಹಾಯ ವಾಗು ತ್ತದೆ ಎಂದು ಕೇಳಿಕೊಂಡರು. ಪೆÇೀಷಕರು, ಶಿಕ್ಷಣ ಸಂಸ್ಥೆಗಳ ಶುಲ್ಕ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ ಎಂದರು. ಹೀಗೆ ಯಾವುದೇ ಬಿಗುಮಾನವಿಲ್ಲದೆ, ಮನೆಯ ಸದಸ್ಯನಂತೆ ನನ್ನನ್ನು ಕಂಡು ಅಹವಾಲುಗಳನ್ನು ಮಂಡಿ ಸುತ್ತಾರೆ. ಅವರ ಪ್ರೀತಿ, ಅಭಿಮಾನದಿಂದ ಹೃದಯ ತುಂಬಿ ಬರುತ್ತದೆ ಎಂದು ಹೇಳಿದರು.

ನಾನು ಸಚಿವನಾಗಿ, ಕ್ಷೇತ್ರದ ಶಾಸಕ ನಾಗಿ ಮಾಡಿರುವ ಕೆಲಸಗಳನ್ನು ಜನ ಸ್ಮರಿಸಿ ಕೊಳ್ಳುತ್ತಾರೆ. ಜೆನರಿಕ್ ಔಷಧ ಕೇಂದ್ರ, ಬೋರ್ ವೆಲ್ ರಹಿತ ಕ್ಷೇತ್ರ ಯೋಜನೆ ಯಡಿ, ವಿವೇಕಾನಂದನಗರ, ರಾಮಕೃಷ್ಣ ನಗರ, ಕುವೆಂಪುನಗರ ಇನ್ನಿತರ ಬಡಾವಣೆ ಗಳಿಗೆ ಕಬಿನಿ ನೀರು ಕಲ್ಪಿಸಿದ್ದು. ಬಹುತೇಕ ಕಡೆ 24×7 ಕುಡಿಯುವ ನೀರಿನ ವ್ಯವಸ್ಥೆ ಯಾಗಿದ್ದು, 8600 ಆಶ್ರಯ ಮನೆಗಳನ್ನು ವಿತರಿಸಿದ್ದು, ಹೀಗೆ ಯಾವುದನ್ನೂ ಜನ ಮರೆತಿಲ್ಲ. ಅಲ್ಲದೆ ಮೈಸೂರಿನಲ್ಲಿ ಆಗಿರುವ ಬಹುತೇಕ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಆಡಳಿತವಿದ್ದಾಗ ನೀಡಿದ್ದ ಕೊಡುಗೆಗಳಾ ಗಿವೆ. ಚಾಮರಾಜ ಜೋಡಿ ರಸ್ತೆ ಕಾಂಕ್ರೀಟ್ ಕಾಮಗಾರಿ, ಅರಮನೆ ಸುತ್ತಲಿನ ರಸ್ತೆ, ಕಾಂತರಾಜ ರಸ್ತೆ, ಜೆಎಲ್‍ಬಿ ರಸ್ತೆ ಅಭಿವೃದ್ಧಿ, ಜಯದೇವ ಆಸ್ಪತ್ರೆ, ಕಿದ್ವಾಯಿ ಘಟಕ, ಟ್ರಾಮಾ ಸೆಂಟರ್, ಆಯುರ್ವೇದ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ, ಅಂಬೇಡ್ಕರ್ ಭವನ, ಬಾಬು ಜಗಜೀವನರಾಂ, ವಾಲ್ಮಿಕಿ ಭವನ ಎಲ್ಲವೂ ಬಿಜೆಪಿ ಕಾಲದಲ್ಲಿ ಮಂಜೂರಾ ಗಿದ್ದು. ಜಿಲ್ಲಾಧಿಕಾರಿಗಳ ಕಚೇರಿ ನೂತನ ಕಟ್ಟಡ ನಿರ್ಮಾಣಕ್ಕೂ ಜರ್ಮನ್ ಪ್ರೆಸ್ ಆವರಣ ದಲ್ಲಿ ಕೇಂದ್ರದಿಂದ ಜಾಗ ಕೊಡಲಾ ಗಿದೆ ಎಂದು ರಾಮದಾಸ್ ತಿಳಿಸಿದರು.

ನಾನು ಕ್ಷೇತ್ರದ ಮತದಾರನಾಗಿ ಬಹಳಷ್ಟು ನಿರೀಕ್ಷೆಗಳಿದ್ದವು. ಸೋಮಶೇಖರ್ ಅವರು ಶಾಸಕರಾದ ಮೇಲೆ 5 ಬಾರಿ ಕಾರ್ಯಕ್ರಮಕ್ಕೆ ಆಹ್ವಾನಿಸಿ, ಜನರ ಆಶೀರ್ವಾದದಿಂದ ಆಯ್ಕೆಯಾಗಿದ್ದೀರಿ, ಕ್ಷೇತ್ರದ ಅಭಿವೃದ್ಧಿ ಹಾಳು ಮಾಡಬೇಡಿ ಎಂದು ಕೇಳಿಕೊಂಡು, ಆಗ ಬೇಕಿರುವ ಕೆಲಸಗಳ ಬಗ್ಗೆ ತಿಳಿಸಿದ್ದೆವು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವ ರಿಂದ ಯಾವ ಕೆಲಸ ಬೇಕಿದ್ದರೂ ಮಾಡಿಸಿ ಕೊಳ್ಳಬಹುದಿತ್ತು. ಆದರೆ ಅವರು ಏನೂ ಮಾಡಲಿಲ್ಲ. ಕ್ಷೇತ್ರದ ಜನ ನನ್ನ ಅವಧಿ ಯಲ್ಲಿ ಏನಾಗಿತ್ತು, ಕಳೆದ 5 ವರ್ಷಗಳಲ್ಲಿ ಏನಾ ಗಿದೆ ಎಂದು ಚೆನ್ನಾಗಿ ತಿಳಿದು ಕೊಂಡಿ ದ್ದಾರೆ ಎಂದು ವಿವರಿಸಿದರು.

5 ವರ್ಷ ರಜೆ ನೀಡಿದ್ದರು: ಕ್ಷೇತ್ರದ ಜನ ನನಗೆ 5 ವರ್ಷ ರಜೆ ನೀಡಿದ್ದರು. ಈ ಸಮಯದಲ್ಲಿ ರಾಜಕೀಯ ಹೊರತಾಗಿಯೂ ಸಾಕಷ್ಟು ಕೆಲಸದಲ್ಲಿ ತೊಡಗಿದ್ದೆ. ಪ್ರಮುಖ ವಾಗಿ ಭಾರತ್ ಇನ್ಫಾ ರ್ಮಲ್ ವರ್ಕರ್ಸ್ ಇನ್ಷಿಯೇಟಿವ್ ಅಡಿಯಲ್ಲಿ, ಅಸಂಘಟಿತ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಶ್ರಮಿಸಿ ದ್ದೇನೆ. ಎಸ್‍ಎಸ್‍ಎಲ್‍ಸಿ ಉತ್ತೀರ್ಣವಾಗಿಲ್ಲ ಎಂದು ದೇಶದಲ್ಲಿ ಆಟೋ, ಇನ್ನಿತರ ವಾಹನ ಚಾಲನೆ ಮಾಡುವ ಸುಮಾರು 67 ಲಕ್ಷ ಮಂದಿಗೆ ಡಿಎಲ್ ನೀಡಿಲ್ಲ. ಇವ ರಿಗೆ ಡಿಎಲ್ ಕೊಡಿಸುವ ಪ್ರಯತ್ನ ಮಾಡಿ ದ್ದೇವೆ. ರಾಷ್ಟ್ರಪತಿಗಳ ಅಂಕಿತವಾದರೆ ಕೇಂದ್ರ ಸರ್ಕಾರದಿಂದ ಉಚಿತವಾಗಿಯೇ ಡಿಎಲ್ ವಿತರಿಸುವ ಕಾರ್ಯವಾಗುತ್ತದೆ. ಇನ್ನು ಬಡವರ ಆರೋಗ್ಯ ಸಮಸ್ಯೆಗಳ ಸಂಬಂಧ ಕೇಂದ್ರಕ್ಕೆ ವರದಿ ನೀಡಿದ್ದೆವು. ಸುಮಾರು 10 ಕೋಟಿ ಕುಟುಂಬದ 50 ಕೋಟಿ ಸದ ಸ್ಯರ ಆರೋಗ್ಯ ರಕ್ಷಣೆಗೆ ಹೆಲ್ತ್ ಕಾರ್ಡ್ ನೀಡಲಾಗುತ್ತಿದೆ. ಚುನಾವಣೆ ನಂತರ ರಾಜ್ಯದಲ್ಲೂ ವಿತರಣೆಯಾಗಲಿದೆ. ಅದರ ಮೂಲಕ 5 ಲಕ್ಷ ರೂ.ವರೆಗೆ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಈ ಕಾರ್ಯಕ್ಕಾಗಿ ಪ್ರಧಾನಿ ಮೋದಿ ಅವ ರಿಗೆ ಧನ್ಯವಾದ ಸಲ್ಲಿಸುತ್ತೇನೆ. ಸುಮಾರು 200 ಹೆಚ್ ಐವಿ ಸೋಂಕಿತ ಮಕ್ಕಳನ್ನು ದತ್ತು ತೆಗೆದುಕೊಂಡು ಜರ್ಮನ್ ಸರ್ಕಾರ ಹಾಗೂ ಕೆಲ ಸಂಸ್ಥೆಗಳ ಸಹಕಾರದಿಂದ ಸಂಶೋಧನಾ ಕೇಂದ್ರ ಆರಂಭಿಸಿ, ಭಾರ ತೀಯ ವೈದ್ಯ ಪದ್ಧತಿಯಲ್ಲಿ ಚಿಕಿತ್ಸೆ ನೀಡ ಲಾಗುತ್ತಿದೆ. ಮಕ್ಕಳಲ್ಲಿದ್ದ ಸೋಂಕಿನ ಪ್ರಮಾಣ ಗಣನೀಯವಾಗಿ ಕ್ಷೀಣ ಸಿದೆ. ಆ ಮಕ್ಕಳು ನನ್ನನ್ನು ಅಪ್ಪಾ ಎಂದು ತಬ್ಬಿದಾಗ ಸಿಗುವ ಸಂತೋಷ ಬೇರೆಲ್ಲೂ ಪಡೆಯಲಾಗದು. ಹಾಗಾಗಿ ಈ 5 ವರ್ಷಗಳ ಅಂತರ ಅನುಭವಕ್ಕೆ ಬರು ತ್ತಿಲ್ಲ ಎಂದು ರಾಮದಾಸ್ ಸ್ಮರಿಸಿಕೊಂಡರು.

ಈ ಕ್ಷೇತ್ರದಲ್ಲಿ ಒಮ್ಮೆ ಶಾಸಕರಾದವರು ಮತ್ತೊಮ್ಮೆ ಆಯ್ಕೆಯಾಗುವುದಿಲ್ಲ ಎಂಬ ಮಾತಿತ್ತು. ಆದರೆ ನನ್ನನ್ನು 3 ಬಾರಿ ಶಾಸಕ ನಾಗಿ ಆಯ್ಕೆ ಮಾಡಿದ್ದು, ಇದು 4ನೇ ಅವಕಾಶವಾಗಿದೆ. ಈ ಕ್ಷೇತ್ರದಿಂದ ಯಾರೂ ಸಚಿವರಾಗಿಲ್ಲ ಎನ್ನಲಾಗುತ್ತಿತ್ತು ಆದರೆ ಜನರ ಆಶೀರ್ವಾದದಿಂದ ಆ ದಾಖಲೆಯೂ ನಿರ್ಮಾಣವಾಯಿತು. ಸಿದ್ದರಾಮಯ್ಯನವರು ವಿರೋಧ ಪಕ್ಷದಲ್ಲಿದ್ದಾಗ, ವಿಧಾನಸಭೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾಗ ಗಲಾಟೆಯಾಗಿತ್ತು. ಆಗ ಅವರೇ ಹೇಳಿ ದ್ದರು. ನಾನು ಎಲ್ಲರನ್ನೂ ಭ್ರಷ್ಟರು ಎಂದಿದ್ದೀನಾ, ಸುರೇಶ್‍ಕುಮಾರ್, ರಾಮದಾಸ್ ರಂತ ಹವರನ್ನೂ ಹಾಗೆ ಅನ್ನಲು ಸಾಧ್ಯವಾ… ಎಂದಿ ದ್ದರು. ಅದೆಲ್ಲಾ ನನಗೆ ಹೆಮ್ಮೆ ಎನಿಸುತ್ತದೆ. ಒಟ್ಟಾರೆ ಈ ಬಾರಿ ಜನರ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆಯಾಗುತ್ತೇನೆಂಬ ವಿಶ್ವಾಸ ವಿದೆ ಎಂದು ರಾಮದಾಸ್ ಹೇಳಿದ್ದಾರೆ.

Translate »