ಹೊಳೆನರಸೀಪುರ: ಕಾಂಗ್ರೆಸ್, ಬಿಜೆಪಿ ಸರ್ಕಾರಗಳು ಜನ ಸಾಮಾನ್ಯರ ಸಮಸ್ಯೆಗಳನ್ನು ಮರೆತು ಹಗರಣದಲ್ಲಿ ಭಾಗಿಯಾಗಿದ್ದರೂ ಸಹ ದಾರಿ ತಪ್ಪಿಸಲು ಸುಳ್ಳು ಭರವಸೆಗಳನ್ನು ನೀಡು ತ್ತಿವೆ ಎಂದು ಜೆಡಿಎಸ್ ಅಭ್ಯರ್ಥಿ, ಮಾಜಿ ಸಚಿವÀ ಹೆಚ್.ಡಿ.ರೇವಣ್ಣ ಆರೋಪಿಸಿದರು.
ಪಟ್ಟಣದಲ್ಲಿನ ಅವರ ನಿವಾಸದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಈ ಕ್ಷೇತ್ರದ ಶಾಸಕನಾದ ಮೇಲೆ ಹತ್ತು ವರ್ಷ ನಮ್ಮ ಸರ್ಕಾರ ಇಲ್ಲದಿದ್ದರೂ ಸಹ ವಿರೋಧ ಪಕ್ಷದವರು ಒಪ್ಪುವ ರೀತಿಯಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನಾನು ಮತ್ತು ನಮ್ಮ ತಂದೆ ಯವರ ಜೊತೆಗೂಡಿ ಕೇಂದ್ರ ಸಚಿವ ನಿತಿನ್ ಗಟ್ಕರಿ ಭೇಟಿ ಮಾಡಿ ಚಿಕ್ಕಮಗಳೂರು ಬಿಳಿ ಕೆರೆ ದ್ವೀಪದ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿಸಲು ಅನುದಾನ ತಂದಿದ್ದು, ಶೀಘ್ರÀದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಕೇಂದ್ರ ರೈಲ್ವೆ ಸಚಿವರನ್ನು ಸಹ ಭೇಟಿ ಮಾಡಿ ಚರ್ಚಿಸಿದ್ದು, ಹಾಸನ ಮತ್ತು ಹೊಳೆನರಸೀಪುರದ ಮೇಲ್ಸೇತುವೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರದಲ್ಲೇ ಕೆಲಸ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದ ಅವರು, ಹಂಗರಹಳ್ಳಿಯ ರೈಲ್ವೆ ಮೇಲ್ಸೇತುವೆ ಕಾಮ ಗಾರಿ ಮುಗಿಯುವ ಹಂತಕ್ಕೆ ತಲುಪಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ನೇಕಾರರ ಕ್ಷೇಮಾಭಿವೃದ್ಧಿಗೆ ಯಾವುದೇ ಹಣ ಬಿಡು ಗಡೆ ಮಾಡದೆ ಚುನಾವಣಾ ಸಂದರ್ಭದಲ್ಲಿ ಅವರ ನೆನಪು ಮಾಡಿಕೊಳ್ಳುತ್ತಿದೆ ಎಂದು ಆಪಾದಿಸಿದರು.
ಹೊಳೆನರಸೀಪುರ ಕ್ಷೇತ್ರದಲ್ಲಿ ಆರ್‍ಟಿಓ ಅಧಿಕಾರಿ ಗಳು ತಮ್ಮ ವಾಹನಗಳಲ್ಲಿ ಸಾರಾಯಿಯನ್ನು ಯಥೇಚ್ಚ ವಾಗಿ ಗ್ರಾಮಾಂತರ ಪ್ರದೇಶದಲ್ಲಿ ಹಂಚುತ್ತಿದ್ದರೂ ಸಹ ಅಬಕಾರಿ ಇಲಾಖೆಯವರು ಕಣ್ಣು ಮುಚ್ಚಿ ಕುಳಿತಿದ್ದಾರೆ. ಇಲ್ಲಿಯವರೆಗೆ ಯಾವುದೇ ವಾಹನವನ್ನು ಜಪ್ತಿ ಮಾಡಿಲ್ಲ ಎಂದು ಅಬಕಾರಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಕ್ಷೇತ್ರಕ್ಕೆ ಆಮದು ಅಭ್ಯರ್ಥಿಯಾಗಿ ಬಂದು ಸ್ಪರ್ಧಿಸಿ ಹಣವನ್ನು ಹಾಡ ಹಗಲಲ್ಲೇ ಹಂಚುತ್ತಿದ್ದು, ಚುನಾವಣಾ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಇದು ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆಯಲ್ಲವೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳ ಆರ್ಥಿಕ ನೀತಿ ಯಿಂದಾಗಿ ಬ್ಯಾಂಕ್‍ಗಳು ಇಂದು ದಿವಾಳಿ ಅಂಚಿನತ್ತ ತಲುಪುತ್ತಿದ್ದು ಸಾರ್ವಜನಿಕರು ತೊಂದರೆ ಅನುಭವಿಸು ವಂತಾಗಿದೆ. ಹಾಸನ ಜಿಲ್ಲೆ ರೈತರ ಬದುಕಿನ ಆಸರೆಯಾ ಗಿರುವ ಗೋರೂರು ಹೇಮಾವತಿ ಜಲಾಶಯ, ಯಗಚಿ ಜಲಾಶಯ ನೀರಿನ ಶೇಖರಣೆ ಸಂಪೂರ್ಣ ವಾಗಿ ಕುಸಿದ ಪರಿಣಾಮ ಆ ಭಾಗದ ಅಚ್ಚುಕಟ್ಟು ರೈತರಿಗೆ ಆತಂಕದ ಪರಿಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರ ತಂದೊಡ್ಡಿದೆ ಎಂದು ಕಿಡಿಕಾರಿದರು.
ಜಿಲ್ಲೆಯ ರೈತರ ಜೀವನಾಧಾರವಾದ ತೆಂಗು, ಅಡಿಕೆ ಮರಗಳು ಮಳೆ ಇಲ್ಲದೆ ಹಾಳಾಗಿದ್ದು, ಇದಕ್ಕೆ ರೈತರಿಗೆ ಒಂದು ಪೈಸೆಯನ್ನು ಸರ್ಕಾರ ಬಿಡುಗಡೆ ಮಾಡಲಿಲ್ಲ. ಕಳೆದ 10 ವರ್ಷದಲ್ಲಿ ನನ್ನ ಪರಿಶ್ರಮ ದಿಂದ ಎಲ್ಲಾ ಗ್ರಾಮಗಳಿಗೂ ಸಮು ದಾಯ ಭನವ, ದೇವಸ್ಥಾನಗಳ ಜೀರ್ಣೋ ದ್ಧಾರ, ಹಳ್ಳಿಗಳಿಗೆ ಕಾಂಕ್ರಿಟ್ ರಸ್ತೆ, ಸರ್ಕಾರಿ ಶಾಲೆಗಳ ದುರಸ್ತಿ, ಕಾಲೇಜುಗಳ ಹೆಚ್ಚುವರಿ ಕಟ್ಟಡ, ಐಟಿಐ ಕಾಲೇಜುಗಳ ನಿರ್ಮಾಣ, ಗ್ರಾಮೀಣ ಪ್ರದೇಶ ದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ವಸತಿ ನಿಲಯಗಳನ್ನು ನಿರ್ಮಾಣ ಮಾಡಲು ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಹೊಳೆನರಸೀಪುರ ಕ್ರೀಡಾ ಪಟುಗಳಿಗೆ ಈಜುಕೊಳ, ಒಳಾಂಗಣ ಕ್ರೀಡಾಂಗಣ, ಜಿಮ್ ನಿರ್ಮಾಣ ಕಾಮಗಾರಿಗಳು ಚುನಾವಣೆ ನಂತರ ಕೆಲಸ ಪ್ರಾರಂಭವಾಗಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ನನ್ನ ಅಧಿಕಾರ ಅವಧಿ ಯಲ್ಲಿ ಈ ಕ್ಷೇತ್ರದಲ್ಲಿ ಯಾವುದೇ ಕೋಮು ಗಲಭೆಗೆ ಆಸ್ಪದ ನೀಡದೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಚುನಾವಣೆಯನ್ನು ಎದುರಿಸುತ್ತ್ತಿದ್ದು, ಕಳೆದ ಬಾರಿ ಗಿಂತ ಅತ್ಯಧಿಕ ಮತವನ್ನು ಈ ಕ್ಷೇತ್ರದ ಜನರು ನನಗೆ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.