ಸಿಎಂ ಕಾರ್ಯಕ್ರಮದಲ್ಲಿ ಪತ್ರಕರ್ತರ ಪ್ರತಿಭಟನೆ
ಚಾಮರಾಜನಗರ

ಸಿಎಂ ಕಾರ್ಯಕ್ರಮದಲ್ಲಿ ಪತ್ರಕರ್ತರ ಪ್ರತಿಭಟನೆ

May 8, 2018

ಕೊಳ್ಳೇಗಾಲ: ಪಟ್ಟಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಪ್ರಚಾರದಲ್ಲಿ ಪತ್ರಕರ್ತರಿಗೆ ಸ್ಥಳಾವಕಾಶ ಕಲ್ಪಿಸದ ಕಾರಣ ಪತ್ರಕರ್ತರು ಸುಮಾರು ಅರ್ಧ ಗಂಟೆಗಳ ಕಾಲ ಪ್ರತಿಭಟಿಸಿ ಕಾರ್ಯಕ್ರಮದಿಂದ ಹೊರ ನಡೆದ ಘಟನೆ ಜರುಗಿತು.

ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ಸ್ಥಳಾವಕಾಶ ಕಲ್ಪಿಸಿ ಎಂದು ಬ್ಲಾಕ್ ಅಧ್ಯಕ್ಷ ತೋಟೇಶ್ ಅವರಲ್ಲಿ ಕೆಲ ಪತ್ರಕರ್ತರು ಮನವಿ ಮಾಡಿದರೂ ಸಹಾ ಉದ್ದಟತನ ವರ್ತನೆ ತೋರಿದ ಹಿನ್ನೆಲೆ ವೇದಿಕೆಯ ಹಿಂಭಾಗದ ಗುರುಭವನದಲ್ಲಿ ನಿಂತು ಪತ್ರಕರ್ತರು ಪ್ರತಿಭಟಿಸಿದರು.

ನಂತರ ಪತ್ರಕರ್ತರು ಸಂಸದ ಆರ್. ಧ್ರುವನಾರಾಯಣ್ ಅವರಿಗೆ ವಿಚಾರ ಮುಟ್ಟಿಸುತ್ತಿದ್ದಂತೆ ಅವರು ಸ್ಥಳಕ್ಕೆ ಆಗ ಮಿಸಿ ಪತ್ರಕರ್ತರ ಮನವೊಲಿಸಿ ವೇದಿಕೆಯ ಬಳಿ ಕರೆತಂದರು.
ವೇದಿಕೆಯ ಮುಂಭಾಗ ಸಹಾ ಕುರ್ಚಿ ಇಲ್ಲದ ಕಾರಣ ಸುಮಾರು ಇಪ್ಪತ್ತು ನಿಮಿಷಗಳು ಕಾಲ ಶಾಸಕ ಜಯಣ್ಣ, ಸಂಸದ ಧ್ರುವನಾರಾಯಣ್ ಅವರು ಮಾತನಾಡುವ ತನಕ ನೆಲದಲ್ಲೇ ಕುಳಿತು ಪತ್ರಕರ್ತರು ಪ್ರತಿಭಟಿಸಿದರು. ನಮ್ಮೊಡನೆ ಉದ್ದಟತನ ವರ್ತನೆ ತೋರಿ ಅಗೌರವದಿಂದ ಕಂಡ ಬ್ಲಾಕ್ ಅಧ್ಯಕ್ಷರು ಎಲ್ಲಾ ಪತ್ರಕರ್ತರ ಮುಂದೆ ಕ್ಷಮೆ ಕೇಳಬೇಕು. ಕಾಂಗ್ರೆಸ್ ಮುಖಂಡ ನಟರಾಜಮಾಳಿಗೆ ಅವರನ್ನು ನಿಂದಿಸಿದ್ದಕ್ಕೂ ಕ್ಷಮೆ ಕೋರಬೇಕು ಎಂಬ ಬೇಡಿಕೆ ಇಡಲಾಯಿತು.

ಪತ್ರಕರ್ತರ ಮನವಿಗೆ ಕೊನೆಗೂ ಮಣ ದ ಬ್ಲಾಕ್ ಅಧ್ಯಕ್ಷ ತೋಟೇಶ್ ನನ್ನಿಂದ ತಪ್ಪಾ ಯಿತು ಕ್ಷಮಿಸಿ ಎಂದು ಪತ್ರಕರ್ತರೆ ಲ್ಲರಿಗೂ ಹಾಗೂ ನಟರಾಜಮಾಳಿಗೆ ಅವರಿಗೆ ಕೈಮುಗಿದು ಕ್ಷಮೆ ಕೋರಿದ ಬಳಿಕ ಪತ್ರಕರ್ತರು ಪ್ರತಿಭಟನೆ ಕೈಬಿಟ್ಟರು.

Translate »