ಎಸ್‍ಎಸ್‍ಎಲ್‍ಸಿ: ಜಿಲ್ಲೆಗೆ 24ನೇ ಸ್ಥಾನ
ಚಾಮರಾಜನಗರ

ಎಸ್‍ಎಸ್‍ಎಲ್‍ಸಿ: ಜಿಲ್ಲೆಗೆ 24ನೇ ಸ್ಥಾನ

May 8, 2018

ಚಾಮರಾಜನಗರ: ಮಾರ್ಚ್‍ನಲ್ಲಿ ನಡೆದಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆ ಶೇ.74.47 ಫಲಿತಾಂಶ ಪಡೆದು ರಾಜ್ಯದಲ್ಲಿ 24ನೇ ಸ್ಥಾನ ಪಡೆದಿದೆ. ಕಳೆದ ವರ್ಷ(2017) ಶೇ.75.66 ಫಲಿತಾಂಶ ಪಡೆದು ರಾಜ್ಯದಲ್ಲಿ 12ನೇ ಸ್ಥಾನ ಪಡೆದಿತ್ತು. ಈ ಬಾರಿ 24ನೇ ಸ್ಥಾನ ಪಡೆಯುವ ಮೂಲಕ 12 ಸ್ಥಾನಗಳ ಕುಸಿತ ಕಂಡಿದೆ. ಇದು ಜಿಲ್ಲೆಯ ಶೈಕ್ಷಣ ಕ ಪ್ರಗತಿಗೆ ತೀವ್ರ ಹಿನ್ನಡೆ ಆದಂತಾಗಿದೆ. ಜಿಲ್ಲೆಯಲ್ಲಿ ಒಟ್ಟು 9898 ವಿದ್ಯಾರ್ಥಿಗಳು ಪರೀಕ್ಷೆ ಬರೆದಿ ದ್ದರು. ಇದರಲ್ಲಿ 7370 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಪರೀಕ್ಷೆ ಬರೆದಿದ್ದ 4961 ಬಾಲಕರ ಪೈಕಿ 3486 ಮಂದಿ ಉತ್ತೀರ್ಣರಾಗುವ ಮೂಲಕ ಶೇ.73.53 ಫಲಿತಾಂಶ ಬಂದಿದೆ. ಅದೇ ರೀತಿ ಪರೀಕ್ಷೆ ಬರೆದಿದ್ದ 4937 ಬಾಲಕಿಯರಲ್ಲಿ 3884 ಮಂದಿ ತೇರ್ಗಡೆ ಆಗುವ ಮೂಲಕ ಶೇ.78.67 ಫಲಿತಾಂಶ ದೊರಕಿದೆ.

Translate »