ಎಡಮುರಿ ಪ್ರವಾಸಿ ತಾಣದಲ್ಲಿ ಇಬ್ಬರು ಯುವತಿಯರು ನೀರು ಪಾಲು
ಮೈಸೂರು

ಎಡಮುರಿ ಪ್ರವಾಸಿ ತಾಣದಲ್ಲಿ ಇಬ್ಬರು ಯುವತಿಯರು ನೀರು ಪಾಲು

July 1, 2019

ಮಂಡ್ಯ/ಶ್ರೀರಂಗಪಟ್ಟಣ, ಜೂ.30 (ನಾಗಯ್ಯ, ವಿನಯ್ ಕಾರೇಕುರ)-ಮೈಸೂರಿನ ಖಾಸಗಿ ಕಂಪನಿ ಮಹಿಳಾ ಉದ್ಯೋಗಿಗಳಿಬ್ಬರು ನೀರು ಪಾಲಾದ ಘಟನೆ ಶ್ರೀರಂಗಪಟ್ಟಣ ತಾಲೂಕು ಎಡಮುರಿ ಪ್ರವಾಸಿ ತಾಣದಲ್ಲಿ ಇಂದು ಸಂಜೆ ಸಂಭವಿಸಿದ್ದು, ನೀರಿನಲ್ಲಿ ಮುಳು ಗಿದ್ದ ಮತ್ತೋರ್ವ ಯುವತಿ ಅಸ್ವಸ್ಥ ಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾರೆ. ಮೈಸೂರಿನ ಹೆಬ್ಬಾಳ್ ಕೈಗಾ ರಿಕಾ ಪ್ರದೇಶದಲ್ಲಿರುವ ಎಸ್.ಎಸ್. ಎಲೆಕ್ಟ್ರಾನಿಕ್ ಕಂಪನಿಯ ಉದ್ಯೋಗಿ ಗಳಾದ ಬನ್ನೂರಿನ ಪ್ರತಿಮಾ (22) ಮತ್ತು ಮಳವಳ್ಳಿಯ ದಿವ್ಯಶ್ರೀ (24) ನೀರು ಪಾಲಾದವರಾಗಿದ್ದು, ಮತ್ತೋರ್ವ ಉದ್ಯೋಗಿ ಗೀತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಸ್.ಎಸ್.ಎಲೆಕ್ಟ್ರಾನಿಕ್ ಕಂಪನಿಯ 50 ಉದ್ಯೋಗಿಗಳು ಇಂದು ಎಡಮುರಿ ಪ್ರವಾಸಿತಾಣಕ್ಕೆ ಪ್ರವಾಸ ಬಂದಿದ್ದರು. ಸಂಜೆ 5 ಗಂಟೆ ಸುಮಾರಿನಲ್ಲಿ ನೀರಿನಲ್ಲಿ ಆಟವಾಡುತ್ತಿದ್ದ ಓರ್ವ ಯುವತಿ ನೀರಿನಲ್ಲಿ ಮುಳುಗಿದ್ದಾಗ ಆಕೆಯ ರಕ್ಷಣೆಗೆ ಹೋದ ಮತ್ತಿಬ್ಬರು ಯುವತಿಯರೂ ಕೂಡ ಮುಳುಗಿದ್ದಾರೆ. ತಕ್ಷಣವೇ ಇತರರು ರಕ್ಷಣೆಗೆ ಧಾವಿಸಿದ್ದು, ಅದಾಗಲೇ ಪ್ರತಿಮಾ ಸಾವನ್ನಪ್ಪಿದ್ದು, ತೀವ್ರವಾಗಿ ಅಸ್ವಸ್ಥಗೊಂಡಿದ್ದ ದಿವ್ಯಶ್ರೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಅಸ್ವಸ್ಥಗೊಂಡಿರುವ ಗೀತಾ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಕೆಆರ್‍ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »