ಕೆ.ಆರ್.ಪೇಟೆ: ಸಾಲದ ಬಾಧೆ ತಾಳಲಾರದೆ ವ್ಯಕ್ತಿ ಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಪಟ್ಟಣದ ನಡೆದಿದೆ.
ಮೂಲತಃ ಬೆಡದಹಳ್ಳಿ ಗ್ರಾಮದ ಟೈಲರ್ ದೇವರಾಜು (50) ಆತ್ಮಹತ್ಯೆ ಮಾಡಿಕೊಂಡವರು. ಇವರು ಹಲವು ವರ್ಷಗಳಿಂದ ಪಟ್ಟಣದ ಹಳೆ ವಿಜಯಬ್ಯಾಂಕ್ ರಸ್ತೆ ಯಲ್ಲಿ ಟೈಲರ್ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸು ತ್ತಿದ್ದರು. ತಮ್ಮ ಬೆಡದಹಳ್ಳಿ ಊರಿನಲ್ಲಿ ಜಮೀನು ಹೊಂದಿರುವ ದೇವರಾಜು ಅವರು ಬೇಸಾಯಕ್ಕೆ ವಿಜಯಬ್ಯಾಂಕಿನಲ್ಲಿ ಬೇಸಾಯ ಸಾಲ ಹಾಗೂ ಟೈಲರ್ ವೃತ್ತಿಗಾಗಿ ಖಾಸಗಿ ವ್ಯಕ್ತಿಗಳಿಂದ ಲಕ್ಷಾಂತರ ರೂ. ಕೈ ಸಾಲ ಮಾಡಿಕೊಂಡಿದ್ದರು. ಸಾಲಗಾರರ ಒತ್ತಡ ತಾಳಲಾಗದೇ ಬುಧವಾರ ಬೆಳಿಗ್ಗೆ ವಾಯು ವಿಹಾರಕ್ಕೆಂದು ಮನೆಯಿಂದ ಹೊರಗಡೆ ಹೋದ ದೇವರಾಜು ಅವರು ತಮ್ಮ ಟೈಲರ್ ಅಂಗಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿ ದ್ದಾರೆ. ಮೃತರಿಗೆ ಪತ್ನಿ ಇಬ್ಬರು ಪುತ್ರಿಯರು ಇದ್ದಾರೆ. ಘಟನಾ ಸ್ಥಳಕ್ಕೆ ಪಟ್ಟಣ ಪೊಲೀಸರು ಆಗಮಿಸಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.