ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಸಿ.ಎನ್. ಮಂಜುನಾಥ್
ಮೈಸೂರು,ಜು.21(ಎಂಟಿವೈ)- ಅಧಿಕ ರಕ್ತದೊತ್ತಡ ಸಮಸ್ಯೆಗೆ ತುತ್ತಾಗಿರುವವರು ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಪಾಶ್ರ್ವ ವಾಯು, ಮಧುಮೇಹ, ಕಿಡಿ ವೈಫಲ್ಯ, ಹೃದಯ ಶಕ್ತಿ ಹೀನತೆ ಸೇರಿದಂತೆ ಇನ್ನಿ ತರೆ ಆರೋಗ್ಯ ಸಮಸ್ಯೆಗೆ ಸಿಲುಕುವ ಆತಂಕವಿದೆ ಎಂದು ಜಯದೇವ ಹೃದ್ರೋಗ ಮತ್ತು ವಿe್ಞÁನ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ವಿಷಾದಿಸಿದ್ದಾರೆ.
ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಜೈಡಸ್ ಕಂಪನಿ ಸಹಯೋಗದಲ್ಲಿ ನಡೆದ ಮುಂದುವರೆದ ವೈದ್ಯಕೀಯ ಶಿP್ಷÀಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಶೇ.50ರಷ್ಟು ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು, ಉಪ್ಪು, ಮದ್ಯಪಾನ, ಧೂಮಪಾನ, ಒತ್ತಡ, ಸೋಮಾರಿತನವನ್ನು ನಿಯಂತ್ರಿಸಿದರೆ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡ ಬಹುದು. ಅಧಿಕ ರಕ್ತದೊತ್ತಡವುಳ್ಳವರು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿಯೂ ಚಿಕಿತ್ಸೆ ಪಡೆಯಲು ನಿರ್ಲಕ್ಷಿಸಬಾರದು. ನಿರ್ಲಕ್ಷ್ಯದ ಧೋರಣೆ ಇರಬಾರದು. ಸಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು. ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಈಗಾಗಲೇ 202 ಜನರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಪ್ರತಿದಿನ 40 ಮಂದಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗುತ್ತಿದ್ದು, ಗುಣಮಟ್ಟದ ಚಿಕಿತ್ಸೆ ನೀಡುತ್ತಿz್ದÉೀವೆ. ವೃತ್ತಿ ಧರ್ಮಕ್ಕೆ ಅನು ಗುಣವಾಗಿ ಎಲ್ಲರೂ ನಮ್ಮದೇ ಆಸ್ಪತ್ರೆ ಎಂದು ಕೆಲಸ ಮಾಡುತ್ತಿz್ದÉೀವೆ. ವೈದ್ಯರು ಕೂಡ ಒತ್ತಡದಿಂದ ಕೆಲಸ ಮಾಡಬೇಕಾ ಗಿರುವುದರಿಂದ ಅವರ ಆರೋಗ್ಯದ ಕಡೆಯೂ ಹೆಚ್ಚು ಗಮನ ನೀಡಬೇಕು ಎಂದ ಅವರು, ಇಂತಹ ಕಾರ್ಯಗಾರ ಗಳು ಆಗಾಗ್ಗೆ ನಡೆಯುತ್ತಿರಬೇಕು ಎಂದರು.
ಈ ಸಂದರ್ಭದಲ್ಲಿ ಡಾ.ರವೀಂದ್ರನಾಥ್, ಡಾ.ಸದಾನಂದ್, ಡಾ.ವಿ.ಕೇಶವಮೂರ್ತಿ, ಡಾ.ಪಾಂಡುರಂಗಯ್ಯ, ಡಾ.ಸಂತೋಷ್, ಡಾ.ಹೇಮಾರವೀಶ್, ಡಾ.ಹರ್ಷ ಬಸಪ್ಪ, ಡಾ.ರಾಜೀತ್, ಡಾ.ಭಾರತಿ, ಡಾ.ಚೈತ್ರಾ, ಡಾ.ದೇವರಾಜ್, ಡಾ.ವಿಶ್ವನಾಥ್, ನರ್ಸಿಂಗ್ ಅಧೀP್ಷÀಕ ಹರೀಶ್ಕುಮಾರ್, ಪಿಆರ್ಒ ವಾಣಿ ಮೋಹನ್ ಇದ್ದರು.