ವಿರಾಜಪೇಟೆ ಪಪಂ ಸಾಮಾನ್ಯ ಸಭೆ
ಕೊಡಗು

ವಿರಾಜಪೇಟೆ ಪಪಂ ಸಾಮಾನ್ಯ ಸಭೆ

June 23, 2018

ವಿರಾಜಪೇಟೆ:  ವಿರಾಜ ಪೇಟೆ ಪಟ್ಟಣದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಅದರೊಂದಿಗೆ ಧನಗಳನ್ನು ಸಾಕಿದವರು ಕೊಟ್ಟಿಗೆಯಲ್ಲಿ ಕಟ್ಟದೆ ಬೀದಿ ಯಲ್ಲಿ ಬಿಡುವುದರಿಂದ ವಾಹನ ಸಂಚಾ ರಕ್ಕೆ ಮತ್ತು ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ರಚನ್ ಮೇದಪ್ಪ ಹೇಳಿದಾಗ ಇದರ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳು ವಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಪೆರುಂಬಾಡಿ ಘನತ್ಯಾಜ್ಯ ನಿರ್ವಾಹಣೆ ಘಟಕದಲ್ಲಿ ಘನತ್ಯಾಜ್ಯ ನಿರ್ವಾಹಣೆಯ ಕಾಮಾಗಾರಿಯನ್ನು ಪ್ರಾರಂಭಿಸುವ ಬಗ್ಗೆ ಟೆಂಡರ್ ತೆಗೆದುಕೊಂಡು ಕಾರ್ಯ ನಿರ್ವ ಹಿಸದ ಗುತ್ತಿಗೆದಾರ ಶಿವಾದಾಸ್ ಅವರ ಗುತ್ತಿಗೆಯನ್ನು ರದ್ದು ಗೊಳಿಸಿ ಕಪ್ಪು ಪಟ್ಟಿಗೆ ಸೇರಿಸುವಂತೆ ಹಾಗೂ ಇನ್ನು ಮುಂದೆ ಯಾವುದೇ ಕಾಮಗಾರಿಯನ್ನು ನೀಡ ದಂತೆಯೂ ಈಗ ಆಗಿರುವ ನಷ್ಟವನ್ನು ಮುಟ್ಟುಗೋಲು ಹಾಕಿಕೊಂಡು ಉಳಿದ ಹಣವನ್ನು ಕಾನೂನಿನಂತೆ ವಸೂಲಿ ಮಾಡುವಂತೆ ಹಿರಿಯ ಸದಸ್ಯ ಎಸ್.ಹೆಚ್. ಮೈನೂದ್ಧಿನ್ ಹೇಳಿದಾಗ ಸಭೆ ಕ್ರಮ ಕೈಗೊಳ್ಳುವುದಾಗಿ ತೀರ್ಮಾನಿಸಲಾಯಿತು.

ಸದಸ್ಯ ವಿಶ್ವನಾಥ್ ಮಾತನಾಡಿ, ಖಾಸಗಿ ಬಸ್ಸು ನಿಲ್ದಾಣದಲ್ಲಿರುವ ಹ್ಯೆಟೆಕ್ ಶೌಚಾ ಲಯವನ್ನು 30 ವರ್ಷಕ್ಕೆ ಗುತ್ತಿಗೆ ನೀಡ ಲಾಗಿದ್ದು, ಸಾರ್ವಜನಿಕರಿಂದ ದುಬಾರಿ ಹಣ ವಸೂಲಿ ಮಾಡುತ್ತಿದ್ದಾರೆ. ಪಂಚಾ ಯಿತಿಯಿಂದ ನಿರ್ಮಾಣ ಮಾಡಿದ ಶೌಚಾಲಯವನ್ನು ಟೆಂಡರ್ ನಡೆಸಿ ನಿರ್ವಹಣೆ ಸರಿಇಲ್ಲದಿದ್ದರೆ ಟೆಂಡರ್ ಗುತ್ತಿಗೆಯನ್ನು ರದ್ದುಗೊಳಿಸಲು ಪಂಚಾ ಯಿತಿಗೆ ಅವಕಾಶ ಇದೆ. ಟೆಂಡರ್ ಪ್ರಕ್ರಿಯೆ ನಡೆಸುವಂತೆ ಸೂಚಿಸಿದಾಗ ಸಭೆಯಲ್ಲಿ ಒಪ್ಪಿಗೆ ಸೂಚಿಸಿತು.

ಸದಸ್ಯೆ ನಾಗಮ್ಮ ಮಾತನಾಡಿ, ಕಳೆದ 6 ತಿಂಗಳಿಂದ ಪೌರ ಕಾರ್ಮಿಕರಿಗೆ ಸಂಬಳ ನೀಡುತ್ತಿಲ್ಲ ಎಂದು ಸಭೆಗೆ ತಿಳಿಸಿದಾಗ ಉತ್ತ ರಿಸಿದ ಅಧ್ಯಕ್ಷ ಇ.ಸಿ.ಜೀವನ್ ಸರ್ಕಾರ 700 ಜನರಿಗೆ ಒಬ್ಬರಂತೆ ಪೌರ ಕಾರ್ಮಿ ಕರನ್ನು ನೇಮಿಸಿದೆ. ನಮ್ಮಲ್ಲಿ 44 ಜನರು ಇದ್ದರು. ಸರ್ಕಾರದ ಸುತ್ತೋಲೆಯಂತೆ 28 ಜನರನ್ನು ತೆಗೆಯಲಾಗಿದೆ. ಮುಂದೆ ಕೆಲಸ ಸಿಗುವ ಭರವಸೆಯಿಂದ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾ ರದ ಮಟ್ಟದಲ್ಲಿ ವ್ಯವಹಾರ ನಡೆಸಬೇಕು ಎಂದು ಸಭೆಗೆ ತಿಳಿಸಿದರು. ಈ ಸಂದರ್ಭ ಮುಖ್ಯಾಧಿಕಾರಿ ಹೇಮಕುಮಾರ್ ಮಾತ ನಾಡಿ, ಕೆಲಸ ಕಳೆದುಕೊಂಡವರು ಮುಖ್ಯಾ ಧಿಕಾರಿಗಳ ಮೇಲೆ ಕೇಸ್ ಹಾಕಿದ್ದಾರೆ. ನೌಕರರನ್ನು ಕೆಲಸದಿಂದ ತೆಗೆಯಬೇಡಿ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದಿಂದ ಪತ್ರ ಬರೆದಿದ್ದಾರೆ. ಸಂಬಳ ಕೊಡಿ ಎಂದು ಪತ್ರದಲ್ಲಿ ತಿಳಿಸಿಲ್ಲ ಎಂದರು.

ಸಭೆಯ ಮೊದಲಿಗೆ ವಿರಾಜಪೇಟೆ ಪಂಚಾಯಿತಿ ವತಿಯಿಂದ ಶಾಸಕ ಕೆ.ಜಿ. ಬೋಪಯ್ಯ ಅವರನ್ನು ಸನ್ಮಾನಿಸಲಾ ಯಿತು. ಸನ್ಮಾನ ಸ್ವೀಕರಿಸಿದ ಶಾಸಕ ಬೋಪಯ್ಯ ಅವರು ಜನರ ಸಹಕಾರ ದಿಂದ ನಾಲ್ಕನೇ ಭಾರಿಗೆ ಜನರ ಸೇವೆ ಮಾಡಲು ಅವಕಾಶ ದೊರಕಿದೆ. ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಚುಕ್ಕಿ ಬಾರದ ಹಾಗೆ ಅಭಿವೃದ್ಧಿ ಕೆಲಸ ಮಾಡುತ್ತೇನೆ. ರಾಜ್ಯದ ಇತರ ಪಂಚಾಯಿತಿಗಳಿಗೆ ಹೋಲಿಕೆ ಮಾಡಿದರೆ ವಿರಾಜಪೇಟೆ ಪಟ್ಟಣ ಪಂಚಾಯಿತಿ ಮುಂದೆಯು ಮಾದರಿ ಪಟ್ಟಣ ಪಂಚಾಯಿತಿ ಆಗಬೇಕು. ಚುನಾ ವಣೆಯಲ್ಲಿ ಗೆಲ್ಲಲು ಮಾತ್ರ ಪಕ್ಷ ವನ್ನು ಆಯ್ಕೆ ಮಾಡಿಕೊಳ್ಳುವುದು ಸಹಜ. ಗೆದ್ದ ಮೇಲೆ ಅಭಿವೃದ್ಧಿ ಕಾರ್ಯದಲ್ಲಿ ಪರ ಸ್ಪರ ಎಲ್ಲರು ಒಂದೆ ಎಂಬ ಭಾವನೆಯಲ್ಲಿ ಕಾರ್ಯ ನಿರ್ವಹಿಸಬೇಕು. ಮುಂದಿನ ದಿನದ ನನ್ನ ಅಧಿಕಾರ ಅವಧಿಯಲ್ಲಿ ಪಂಚಾ ಯಿತಿಗೆ ಪ್ರಶಸ್ತಿ ಲಭಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುವುದು ಎಂದು ಬೋಪಯ್ಯ ಹೇಳಿದರು.

Translate »