ವಚನ ಸಾಹಿತ್ಯ ಇಡೀ ಜಗತ್ತಿಗೇ ಪ್ರಸ್ತುತ
ಮೈಸೂರು

ವಚನ ಸಾಹಿತ್ಯ ಇಡೀ ಜಗತ್ತಿಗೇ ಪ್ರಸ್ತುತ

March 15, 2019

ಮೈಸೂರು: ವಚನ ಸಾಹಿತ್ಯ ಕೇವಲ ಕರ್ನಾಟಕಕ್ಕೆ ಪ್ರಸ್ತುತವಲ್ಲ. ಇಡೀ ಜಗತ್ತಿಗೇ ಪ್ರಸ್ತುತ ಎಂದು ಸಾಹಿತಿ ಪ್ರೊ. ಸಿ.ಪಿ.ಕೃಷ್ಣ ಕುಮಾರ್ ಅಭಿಪ್ರಾಯಪಟ್ಟರು.

ಮೈಸೂರಿನ ಮಾನಸಗಂಗೋತ್ರಿ ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂ ಗಣದಲ್ಲಿ ಗುರುವಾರ ಮೈಸೂರು ವಿವಿ ಬಸ ವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋ ಧನೆ ಮತ್ತು ವಿಸ್ತರಣಾ ಕೇಂದ್ರ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ಘಟಕ ಜಂಟಿಯಾಗಿ ಏರ್ಪಡಿಸಿದ್ದ `ವರ್ತ ಮಾನಕ್ಕೆ ವಚನ ಸಾಹಿತ್ಯ’ ಚಿಂತನ ಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದರು.

ವಚನಕಾರರು ಭೌತಿಕವಾಗಿ ಶತಶತ ಮಾನಕ್ಕೆ ಸೇರಿದವರಿರಬಹುದು. 12ನೇ ಶತಮಾನದ ವಚನಕಾರರು 21ನೇ ಶತ ಮಾನಕ್ಕೆ ಪ್ರಸ್ತುತ ಕಾಲದ ಪರಿಧಿಯನ್ನು ದಾಟಿದವರು. ಸೀಮೋಲ್ಲಂಘನ ಮಾಡಿ ದವರು ಎಂದು ಹೇಳಿದರು.

ಸಾಹಿತ್ಯ ಸಂಕೀರ್ಣ, ಸಂಸ್ಕøತಿ ಸಂಕೀರ್ಣ ವಚನಕಾರರಲ್ಲಿತ್ತು. ಅವರು ಮಾನವ ಹೃದಯ ಕ್ಷೇತ್ರದ ದೇವ ಕೃೃಷಿಕರು ಎಂದರು.

ವಚನಕಾರರಿಗೆ ಕಾವ್ಯದ ಬಗ್ಗೆ ವಿಶೇಷ ಗೌರವವಿರಲಿಲ್ಲ. ಅವರಿಗೆ ಶಿವ ಪ್ರಜ್ಞೆ ಬಹಳ ಮುಖ್ಯ. ಕಾವ್ಯ ಪ್ರಜ್ಞೆಯಲ್ಲ. ಶಿವ ಪ್ರಜ್ಞೆ ವಚನಗಳಲ್ಲಿ ಪ್ರಖರವಾಗಿದೆ. ಸ್ವಾತಂತ್ರ್ಯ, ಸಮಾನತೆ ವಚನಗಳಲ್ಲಿಯೇ ಕಂಡು ಬಂತು. ಅಂದಿನ `ಅನುಭವ ಮಂಟಪ’ ನಮ್ಮ ಮೊದ ಲನೆಯ ಪಾರ್ಲಿಮೆಂಟ್. ವಚನ ಸಂವಿ ಧಾನ ನಮ್ಮ ಮೊದಲ ಸಂವಿಧಾನ. ಈಗಿನ ಸಂವಿಧಾನ ಏನಿದ್ದರೂ ಎರಡನೆಯದು. ಗಂಡು-ಹೆಣ್ಣು ಲಿಂಗಭೇದ ಅಳಿಸಲು ವಚನಕಾರರು ಶ್ರಮಿಸಿದರು ಎಂದರು.

ಇಂದು ಜಾತಿಯ ವಿಷಯ ಮಾತ ನಾಡುವುದೇ ಬೇಸರ. ಜಾತಿ-ಉಪ ಜಾತಿ ಗಳ ವಿರಾಟ್‍ರೂಪದಿಂದ ಕಂಗೆಟ್ಟಿದ್ದೇವೆ. ಬಸವಾದಿ ಶರಣರು ಜಾತೀಯತೆ ಹೋಗ ಲಾಡಿಸಲು ಎಲ್ಲಾ ಪ್ರಯತ್ನ ಮಾಡಿದರು. ಸಮಾಜವನ್ನು ಜಾತಿಯ ಪ್ರೇತ ಕಾಡು ತ್ತಿದೆ. ಜಾತಿ ಛಿದ್ರಿತ ಸಮಾಜವೂ ಹೌದು. ಸಮಾಜ ಜೀವನದಿಯಾಗಿಲ್ಲ. ನಿಂತ ನೀರಾಗಿ ಕೊಳೆಯುತ್ತಿದೆ ಎಂದು ಬೇಸರ ದಿಂದ ನುಡಿದರು.

ಮಹಾರಾಣಿ ಮಹಿಳಾ ಕಾಲೇಜಿನ ಪ್ರಾಧ್ಯಾ ಪಕಿ ಡಾ.ಲತಾ ಮೈಸೂರು, ಜೆಎಸ್‍ಎಸ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಡಿಎಸ್.ಸದಾಶಿವ ಮೂರ್ತಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗೊ.ರು.ಪರ ಮೇಶ್ವರಪ್ಪ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕ ಪ್ರೊ. ಚಂದ್ರಶೇಖರಯ್ಯ, ನಿರ್ದೇಶಕ ಪ್ರೊ. ಎನ್.ಎಂ.ತಳವಾರ ಇನ್ನಿತರರು ಉಪಸ್ಥಿತ ರಿದ್ದರು. ಇದಕ್ಕೂ ಮುನ್ನ ಕಲಾ ಲೋಕೇಶ್ ವಚನ ಗಾಯನ ಗಮನ ಸೆಳೆಯಿತು.

Translate »