ಮೈಸೂರು, ಆ.29- ವಸತಿ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಆಗಸ್ಟ್ 30, 31ರಂದು ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಆ.30ರಂದು ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಚಾಮುಂಡಿಬೆಟ್ಟಕ್ಕೆ ಭೇಟಿ ಹಾಗೂ ತುರ್ತು ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡಲಿದ್ದಾರೆ. ಬೆಳಿಗ್ಗೆ 8-30ಕ್ಕೆ ನಜûರ್‍ಬಾದ್‍ನ ಸರ್ಕಾರಿ ಅತಿಥಿಗೃಹದಲ್ಲಿ ಮೈಸೂರು ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಭೆ ಹಾಗೂ ಉಪಹಾರ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ದಸರಾ ಸಿದ್ಧತೆ ಕುರಿತಂತೆ ಮೈಸೂರಿನ ಮುಡಾ ಸಭಾಂಗಣದಲ್ಲಿ ಇಲಾಖಾವಾರು ಚರ್ಚೆ ಮಾಡಲಿದ್ದಾರೆ.
ಮಧ್ಯಾಹ್ನ 2.30 ಗಂಟೆಗೆ ಶ್ರೀರಂಗಪಟ್ಟಣ ಮತ್ತು ಚಾಮರಾಜನಗರ ದಸರಾ ಕುರಿತಂತೆ ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಯ ಸಂಸದರು, ಶಾಸಕರು, ಜಿ ಪಂ ಅಧ್ಯಕ್ಷರು ಹಾಗೂ ಸದಸ್ಯರು, ಜಿಲ್ಲಾಧಿಕಾರಿಗಳು, ಮುಖ್ಯಕಾರ್ಯ ನಿರ್ವಾಹಣಾ ಧಿಕಾರಿಗಳು ಮತ್ತು ಇತರೇ ಸಂಬಂಧಪಟ್ಟವರೊಂದಿಗೆ ಮುಡಾ ಸಭಾಂಗಣದಲ್ಲಿ ಚರ್ಚೆ ಮಾಡಲಿದ್ದಾರೆ. ಮಧ್ಯಾಹ್ನ 4 ಗಂಟೆಗೆ ದಸರಾ ಕಾರ್ಯಕ್ರಮದ ವಿವಿಧ ವೇದಿಕೆಗಳ ಸ್ಥಳ ಪರಿಶೀಲನೆ ಮತ್ತು ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಸಂಜೆ 7 ಗಂಟೆಗೆ ಜಲದರ್ಶಿನಿ ಅತಿಥಿಗೃಹದಲ್ಲಿ ಚಾಮರಾಜನಗರದ ಲೋಕಸಭಾ ಸದಸ್ಯ ಶ್ರೀನಿವಾಸ್‍ಪ್ರಸಾದ್ ಅವರನ್ನು ಭೇಟಿ ಮಾಡಲಿದ್ದಾರೆ.
ಆ.31ರಂದು ಬೆಳಿಗ್ಗೆ 6 ಗಂಟೆಗೆ ರಾಜಮಾರ್ಗದಲ್ಲಿನ (ಜಂಬೂಸವಾರಿ ಹೋಗುವ) ರಸ್ತೆಗಳ ವಸ್ತು ಸ್ಥಿತಿ ಪರಿಶೀಲನೆ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಶ್ರೀ ಹೊಸಮಠ (ನಟರಾಜ ಪ್ರತಿಷ್ಠಾನ)ಕ್ಕೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 10-30 ಗಂಟೆಗೆ ನಟರಾಜ ಪ್ರತಿಷ್ಠಾನ ಶ್ರೀ ಹೊಸಮಠ, ಮೈಸೂರು ವತಿಯಿಂದ ಶ್ರೀ ಹೊಸಮಠ ನಟರಾಜ ಪ್ರತಿಷ್ಠಾನ, ಶಂಕರಮಠ ರಸ್ತೆಖಿಲ್ಲೆ ಮೊಹಲ್ಲಾ ಮೈಸೂರು ಇಲ್ಲಿ ಆಯೋಜಿಸಿರುವ ಸಾಂಸ್ಕøತಿಕ, ಕಲಾ, ವಾಣಿಜ್ಯ, ವಿಜ್ಞಾನ ಮತ್ತುಕ್ರೀಡಾ ವೇದಿಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಮೈಸೂರಿನಿಂದ ರಸ್ತೆಯ ಮೂಲಕ ಬೆಂಗಳೂರಿಗೆ ತೆರಳುವರು.