ಮೈಸೂರಿನ ಸರ್ಕಾರಿ ಕಚೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ
ಮೈಸೂರು

ಮೈಸೂರಿನ ಸರ್ಕಾರಿ ಕಚೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ

January 20, 2020

ಮೈಸೂರು,ಜ.19(ಎಂಟಿವೈ)- ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಪಾರದರ್ಶ ಕತೆ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿ ದ್ದರೂ ಮೈಸೂರಿನಲ್ಲಿ ಸರ್ಕಾರಿ ಕಚೇರಿ ಗಳಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಲಂಚ ನೀಡದೆ ಯಾವುದೇ ಕೆಲಸ ಕಾರ್ಯ ನಡೆಯ ದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‍ಕೆಸಿಸಿಐ) ಮಾಜಿ ಅಧ್ಯP್ಷÀ ಸುಧಾಕರ್ ಎಸ್.ಶೆಟ್ಟಿ ವಿಷಾದಿಸಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್ ಸಭಾಂ ಗಣದಲ್ಲಿ ರಾಜಸ್ತಾನ ರಾಜ್ಯ ಕೈಗಾರಿಕೆ ಅಭಿ ವೃದ್ಧಿ ಮತ್ತು ಹೂಡಿಕೆ ನಿಗಮದ (ರಿಕೋ) ವತಿಯಿಂದ ಭಾನುವಾರ ಆಯೋಜಿಸಿದ್ದ `ರಾಜಸ್ತಾನದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶ’ ಕುರಿತ ಆಹ್ವಾನ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರಿಗಳ ಬೇಜವಾಬ್ದಾರಿತನದಿಂದ ಸರ್ಕಾರ ಜಾರಿಗೆ ತಂದ ಹಲವು ಯೋಜನೆ ಗಳು ಮೂಲೆಗುಂಪಾಗುತ್ತಿವೆ. ದುಡ್ಡು ಕೊಡ ದಿದ್ದರೆ ಕೆಲಸ ಮಾಡಿಕೊಡಲು ಅಧಿಕಾರಿ ಗಳು ನಿರಾಕರಿಸುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಹೊಸದಾಗಿ ಕೈಗಾರಿಕೆ ಸ್ಥಾಪನೆ ಸಾಧ್ಯವೇ? ಎಂದು ಪ್ರಶ್ನಿಸಿದರು.

ಕೈಗಾರಿಕಾ ಪ್ರದೇಶದಲ್ಲಿ ನಾನು ಖರೀ ದಿಸಿರುವ ನಿವೇಶನದ ಖಾತೆ ಮಾಡಿ ಕೊಳ್ಳಲು ಅರ್ಜಿ ಸಲ್ಲಿಸಿದ್ದರೂ ಅಧಿಕಾರಿ ಯೊಬ್ಬರ ಲಂಚದ ಬೇಡಿಕೆಯಿಂದಾಗಿ ಇದುವರೆಗೂ ಖಾತೆ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ. ನನ್ನ ಪ್ರತಿನಿಧಿಯೊಬ್ಬರು 15 ಬಾರಿ ಕಚೇರಿಗೆ ಅಲೆದರೂ ಕೆಲಸ ವಾಗಲಿಲ್ಲ. ಕೊನೆಗೆ ನಾನೇ ಹೋಗಿ ಆ ಅಧಿಕಾರಿಯನ್ನು ಭೇಟಿ ಮಾಡಿ ಖಾತಾ ಮಾಡಿಕೊಡಲು ಕೋರಿದೆ. ಆದರೆ, `ಹಣ ನೀಡದಿದ್ದರೆ ಯಾವ ಅಧಿಕಾರಿ ಕೆಲಸ ಮಾಡು ತ್ತಾನೆ ಹೇಳಿ’ ಎಂದು ಪ್ರಶ್ನಿಸಿದರು. ಇಂತಹ ಆಡಳಿತ ವ್ಯವಸ್ಥೆಯಿದ್ದರೆ ಹೊಸ ಕೈಗಾರಿಕೆ ಗಳು ಸ್ಥಾಪನೆಯಾಗುವುದಿಲ್ಲ ಎಂದರು.

ಕೇಂದ್ರ, ರಾಜ್ಯ ಸರ್ಕಾರದಿಂದ ಕೇವಲ 2.80 ಕೋಟಿ ಉದ್ಯೋಗ ಸೃಷ್ಟಿಸಿದ್ದರೆ, ಕೈಗಾ ರಿಕೆ, ವಾಣಿಜ್ಯ ಕ್ಷೇತ್ರದಿಂದ 52 ಕೋಟಿ ಉದ್ಯೋಗ ಸೃಷ್ಟಿಯಾಗಿದೆ. ಖಾಸಗಿ ವಲಯ ದಿಂದಲೇ ಹೆಚ್ಚಿನ ಉದ್ಯೋಗ ದೊರೆಯು ತ್ತಿದೆ. ಆದ್ದರಿಂದ ಕೈಗಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ಅಗತ್ಯ ಎಂದರು.

ಹಲವು ವಿಷಯಗಳಲ್ಲಿ ಸಾಂಸ್ಕøತಿಕ ನಗರಿ ಮೈಸೂರು ಹಾಗೂ ರಾಜಸ್ತಾನ ನಡುವೆ ಸಾಮ್ಯತೆ ಹೆಚ್ಚಾಗಿದೆ. ಸರ್ಕಾರದ ಕೆಲ ಕೈಗಾ ರಿಕಾ ನೀತಿ, ಸಂಸ್ಕøತಿ, ಆಹಾರ ಪದ್ದತಿ, ಕರಕುಶಲ ಕಲೆ, ಅರಮನೆಯ ಸಂಸ್ಕøತಿಗೆ ಪರಸ್ಪರ ಸಂಬಂಧವಿದೆ. ಮೈಸೂರಿನ ಉದ್ದಿಮೆ ದಾರರು ಅಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬರಬೇಕು. ಅಲ್ಲಿ ಇದಕ್ಕೆ ವಿಪುಲ ಅವಕಾಶಗಳಿವೆ. ಅಲ್ಲಿನ ಸರ್ಕಾರ ದಿಂದಲೂ ಹೆಚ್ಚಿನ ಪೆÇ್ರೀತ್ಸಾಹ ದೊರೆಯು ತ್ತಿದೆ. ಇದನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರಿಕೋ ಉಪಪ್ರಧಾನ ವ್ಯವಸ್ಥಾಪಕ ಅಜಯ್ ಗುಪ್ತಾ ಮಾತನಾಡಿ, ಕೈಗಾರಿಕೆಗಳು ವಿಸ್ತರಣೆ ಯಾದರೆ ಮಾತ್ರ ಪ್ರಗತಿ ಸಾಧಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ರಾಜಸ್ತಾನ ಬಂಡವಾಳ ಹೂಡಿಕೆಗೆ ಉತ್ತಮ ರಾಜ್ಯ. ಭೂಮಿ ಬೆಲೆ ಬಹಳ ಕಡಿಮೆಯಿದೆ. ಮೈಸೂರಿನ ಉದ್ದಿಮೆ ದಾರರ ನಿಯೋಗವನ್ನು ಅಲ್ಲಿಗೆ ಕರೆದು ಕೊಂಡು ಹೋಗಲಾಗುವುದು. ಜತೆಗೆ, ಬಂಡವಾಳ ಹೂಡಿಕೆಗೆ ಮುಂದೆ ಬರುವ ಮೈಸೂರಿನ ಕೈಗಾರಿಕೆಗಳಿಗೆ ವಿಶೇಷ ಪ್ಯಾಕೇಜ್ ಕಲ್ಪಿಸಿಕೊಡಲಾಗುವುದು. ನಮ್ಮ ರಾಜ್ಯದಲ್ಲಿ 348 ಕೈಗಾರಿಕಾ ಪ್ರದೇಶಗಳಿವೆ. 40 ಸಾವಿರ ಕೈಗಾರಿಕಾ ಘಟಕಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ. ಕೈಗಾರಿಕೆ ಸ್ಥಾಪನೆ ಗಾಗಿ 34 ಸಾವಿರ ಹೆಕ್ಟೇರ್ ಪ್ರದೇಶವನ್ನು ಕಾಯ್ದಿಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ವಾಣಿಜ್ಯ ಮತ್ತು ಕೈಗಾರಿಕೆ ಒಕ್ಕೂಟದ (ಎಂಸಿಸಿಐ) ಅಧ್ಯಕ್ಷ ಎ.ಎಸ್.ಸತೀಶ್, ಪದಾಧಿಕಾರಿ ಗಳಾದ ಶ್ರೀಶೈಲ ರಾಮಣ್ಣವರ್, ಎಂ.ಸಿ. ಬನ್ಸಾಲಿ, ಅಗರವಾಲ್ ಸಮಾಜದ ಅಧ್ಯಕ್ಷ ಡಾ.ಎಸ್.ಕೆ.ಮಿತ್ತಲ್, ಮೈಸೂರು ಕೈಗಾ ರಿಕೆಗಳ ಸಂಘದ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಇನ್ನಿತರರಿದ್ದರು.

 

Translate »