ಕೂಲಿ ಕೆಲಸವಿಲ್ಲದೇ ಕಾರ್ಮಿಕರ ಪರದಾಟ
ಕೊಡಗು

ಕೂಲಿ ಕೆಲಸವಿಲ್ಲದೇ ಕಾರ್ಮಿಕರ ಪರದಾಟ

December 8, 2018

ವಿರಾಜಪೇಟೆ: ಇತ್ತೀಚಿನ ದಿನಗ ಳಲ್ಲಿ ಕಟ್ಟಡ ಕಾರ್ಮಿಕರಿಗೆ ಕೂಲಿ ಕೆಲಸವೆ ಇಲ್ಲದಂತಾಗಿದೆ. ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆಯು ಸಿಗದಂತಾಗಿದ್ದು. ಅಂಗ ಡಿಗಳಲ್ಲಿ ಕೊಂಡುಕೊಳ್ಳುವಾಗ ದುಬಾರಿ ಬೆಲೆ ಕೊಡಬೇಕಾಗಿರುವುದರಿಂದ ಇದರ ಲಾಭವನ್ನು ಮಧ್ಯವರ್ತಿಗಳು ಪಡೆಯುತ್ತಿ ದ್ದಾರೆ. ಅದ್ದರಿಂದ ಕಾರ್ಮಿಕರು ಮತ್ತು ಜನಸಾಮನ್ಯರು ಸಮಸ್ಯೆಗಳನ್ನು ಎದರಿಸು ವಂತಾಗಿದೆ ಎಂದು ಕಟ್ಟಡ ಕಾರ್ಮಿಕರ ರಾಜ್ಯ ಫೆಡರೇಶನ್‍ನ ಪ್ರಧಾನ ಕಾರ್ಯ ದರ್ಶಿ ಕೆ.ಮಹಂತೇಶ್ ಹೇಳಿದರು.

ವಿರಾಜಪೇಟೆ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾ ಣದ ಬಳಿಯಿರುವ ಎಂವಿ ಕಟ್ಟಡದ ಸಭಾಂ ಗಣದಲ್ಲಿ ಆಯೋಜಿಸಲಾಗಿದ್ದ ಕಟ್ಟಡ ಕಾರ್ಮಿಕ ಸಂಘದ ಸಭೆಯಲ್ಲಿ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನೋಟ್ ಬ್ಯಾನ್‍ನಿಂದ ಸುಮಾರು 70 ಲಕ್ಷಗಳಷ್ಟು ಉದ್ಯೋಗ ಸ್ಥಗಿತಗೊಂಡು ಕಾರ್ಮಿಕರುಗಳಿಗೆ ಕೆಲಸ ಇಲ್ಲದಂತಾಗಿದೆ. ಇನ್ನೊಂದೆಡೆ ಮರಳು ದೊರಕುತ್ತಿಲ್ಲ. ಇದ್ದರೂ ದುಬಾರಿ ಬೆಲೆ ಕೊಟ್ಟು ಕೊಂಡುಕೊಳ್ಳಬೇಕಾ ಗಿದೆ. ಇದರಿಂದ ಜನರು ಕಾಮಗಾರಿ ನಡೆ ಸಲು ಮುಂದೆ ಬರುತ್ತಿಲ್ಲ. ಕಟ್ಟಡ ಕಾರ್ಮಿ ಕರಿಗೆ ಆಸ್ಪತ್ರೆಯ ಖರ್ಚು ಹಾಗೂ ಇನ್ನಿತರ ವೆಚ್ಚಗಳಿಗಾಗಿ ಪರದಾಡುವಂತಾಗಿದೆ ಎಂದರು.

ಸಂಘದ ಸದಸ್ಯರಿಗೆ 12 ಸೌಲಭ್ಯಗಳು ಸರಕಾರದಿಂದ ದೊರಕುತ್ತದೆ. ಆದರೆ ನಿಜ ವಾದ ಕಾರ್ಮಿಕರುಗಳು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾರ್ಮಿಕರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಅದರಿಂದ ಕಾರ್ಮಿಕರುಗಳು ಜಿಲ್ಲೆಯಾ ದ್ಯಂತ ಸಂಘಟನೆಯನ್ನು ಬಲಪಡಿಸಿ ಹೋರಾ ಟದ ಮೂಲಕ ಸರಕಾರದಿಂದ ಸಿಗುವಂ ತಹ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದರು.

ಸಿಐಟಿಯು ಜಿಲ್ಲಾ ಅಧ್ಯಕ್ಷ ಐ.ಆರ್.ದುರ್ಗ ಪ್ರಸಾದ್ ಮಾತನಾಡಿ, ಕಾರ್ಮಿಕರ ಬೇಡಿ ಕೆಗಳನ್ನು ಮುಂದಿಟ್ಟು ಜನವರಿ 8 ಮತ್ತು 9 ರಂದು ದೇಶ ವ್ಯಾಪ್ತಿ ಹಮ್ಮಿಕೊಂಡಿ ರುವ ಮುಷ್ಕರಕ್ಕೆ ಎಲ್ಲಾ ಕಾರ್ಮಿಕರುಗಳು ಬೆಂಬಲ ನೀಡುವಂತಾಗಬೇಕು ಎಂದರು. ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು ಅವರು ಪ್ರಾಸ್ತಾ ವಿಕವಾಗಿ ಮಾತನಾಡಿ ಕಟ್ಟಡ ಕಾರ್ಮಿ ಕರುಗಳು ಸಂಘಟನೆಯನ್ನು ಬಲಪಡಿ ಸುವ ನಿಟ್ಟಿನಲ್ಲಿ ಸಂಘದಿಂದ ಸದಸ್ಯತ್ವ ವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ಜಿಲ್ಲಾ ಅಧ್ಯಕ್ಷ ಸಾಲಿ ಪೌಲಸ್ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಖಜಾಂಚಿ ಸಿ.ಎ.ಹಮಿದ್, ನಗರ ಅಧ್ಯಕ್ಷ ಮಧು, ಕಾರ್ಯದರ್ಶಿ ಕಾಶಿಂ, ಉಪ ಕಾರ್ಯದರ್ಶಿ ಕೆ.ಕೆ.ಹರಿದಾಸ್ ಇತರರು ಉಪಸ್ಥಿತರಿದ್ದರು. ಸಭೆಗೆ ಅನೇಕ ಕಾರ್ಮಿಕರು ಭಾಗವಹಿಸಿದ್ದರು.

Translate »