ಜಿಲ್ಲೆಯ ವಿವಿಧೆಡೆ ವಿಶ್ವ ಹಾಲು ದಿನಾಚರಣೆ
ಚಾಮರಾಜನಗರ

ಜಿಲ್ಲೆಯ ವಿವಿಧೆಡೆ ವಿಶ್ವ ಹಾಲು ದಿನಾಚರಣೆ

June 4, 2018

ಚಾಮರಾಜನಗರ: ಜಿಲ್ಲೆಯ ವಿವಿ ಧೆಡೆ ಶುಕ್ರವಾರ ವಿಶ್ವ ಹಾಲು ದಿನಾಚರ ಣೆಯನ್ನು ಶಾಲಾ ಮಕ್ಕಳಿಗೆ ಹಾಲು ವಿತರಣೆ ಮಾಡುವ ಮೂಲಕ ಆಚರಿಸಲಾಯಿತು.

ಯಳಂದೂರು ವರದಿ: ತಾಲೂಕಿನ ಕಿನಕ ಹಳ್ಳಿ ಹಾಗೂ ಕಟ್ನವಾಡಿ ಗ್ರಾಮದಲ್ಲಿ ವಿಶ್ವ ಹಾಲು ದಿನಾಚರಣೆ ಅಂಗವಾಗಿ ಹಾಲು ಉತ್ಪಾದಕರ ಸಹಕಾರ ಸಂಘ ದಿಂದ ಕಟ್ನ ವಾಡಿ, ಕಿನಕಹಳ್ಳಿ, ಬಸಾಪುರ, ಯಡ ಮೋಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಹಾಲು ನೀಡುವ ಮೂಲಕ ಆಚರಿಸಿದರು.

ಚಾಮರಾಜನಗರ ಹಾಲು ಒಕ್ಕೂಟದ ನಿರ್ದೇಶಕ ಕಿನಕಹಳ್ಳಿ ಮಾದಪ್ಪ ಮಾತ ನಾಡಿ, ಚಾಮುಲ್ ವಿಶ್ವ ಹಾಲು ದಿನಾಚರ ಣೆಯ ಅಂಗವಾಗಿ ಸರ್ಕಾರಿ ಶಾಲೆಯ ಮಕ್ಕ ಳಿಗೆ ಉಚಿತವಾಗಿ ಹೈನುಗಾರರಿಂದ ಖರೀ ದಿಸಿದ್ದ ಹಾಲನ್ನು ನೀಡುವಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸೂಚಿ ಸಿದೆ. ಈ ನಿಟ್ಟಿನಲ್ಲಿ ಕಟ್ನವಾಡಿ ಹಾಗೂ ಕಿನಕಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವು ಮಕ್ಕಳಿಗೆ ಉಚಿತ ಹಾಲನ್ನು ನೀಡುವುದರ ಮೂಲಕ ವಿಶ್ವ ಹಾಲು ದಿನಾಚರಣೆ ಆಚರಿಸುತ್ತಿರುವುದು ಶ್ಲಾಘ ನೀಯವಾಗಿದೆ ಎಂದರು.

ಶಿಕ್ಷಕ ಕಿರಣ್‍ಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ವಾರದ 5 ದಿನಗಳು ಮಕ್ಕಳಿಗೆ ಹಾಲು ವಿತರಿಸುತ್ತಿದೆ. ಇದರಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣ ಗೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.

ಗ್ರಾಮದ ಹಾಲು ಉತ್ಪಾದಕರ ಸಹ ಕಾರ ಸಂಘದ ಅಧ್ಯಕ್ಷ ಕಿನಕಹಳ್ಳಿ ಆನಂದ ಮೂರ್ತಿ ಮಾತನಾಡಿದರು. ಕಾರ್ಯ ಕ್ರಮದಲ್ಲಿ ಸಂಘದ ಉಪಾಧ್ಯಕ್ಷ ನಾಗ ರಾಜು, ನಿರ್ದೇಶಕರಾದ ಕೆ.ಎನ್.ಮಹಾ ದೇವಪ್ಪ, ನಂಜುಂಡಯ್ಯ, ರಾಜಮ್ಮ, ಮೇಲಮ್ಮ, ಕಾರ್ಯದರ್ಶಿ ಸಿದ್ದರಾಜು, ಚಾಮುಲ್ ವಿಸ್ತರಣಾಧಿಕಾರಿ ಉದಯ್ ಕುಮಾರ್ ಹಾಜರಿದ್ದರು.

ಮಂಗಲ: ತಾಲೂಕಿನ ಮಂಗಲ ಗ್ರಾಮ ದಲ್ಲಿ ವಿಶ್ವ ಹಾಲು ದಿನಾಚರಣೆಯನ್ನು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಆಚರಿಸಲಾಯಿತು.

ಚಾಮರಾಜನಗರ ಹಾಲು ಒಕ್ಕೂಟದ ಡಾ.ಎಂ.ಎನ್.ಆನಂದರಾಜು ಮಾತನಾಡಿ, ಹಾಲು ಪರಿಪೂರ್ಣವಾದ ಪೌಷ್ಟಿಕ ಆಹಾರ ವಾಗಿದ್ದು, ವಿಶ್ವ ಹಾಲು ದಿನಾಚರಣೆಯ ಅಂಗವಾಗಿ ಹೈನುಗಾರರಿಂದ ಖರೀದಿ ಸಿದ್ದ ಹಾಲನ್ನು ಮಕ್ಕಳಿಗೆ ಉಚಿತವಾಗಿ ನೀಡ ಲಾಗುತ್ತಿದೆ ಎಂದರು.

ಸಂಘದ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಕುಮಾರಸ್ವಾಮಿ ಮಾತನಾಡಿ, ಸಂಘದಿಂದ ಯಶಸ್ವಿನಿ, ರೈತ ಆರೋಗ್ಯ ವಿಮೆ, ರಾಸುಗಳಿಗೆ ವಿಮೆ, ಹಸಿರು ಮೇವು ಬೆಳೆಯಲು ಸಹಾಯಧನ, ಜನಶ್ರಿ ಯೋಜನೆ, ಹಾಲು ಹಾಕುವ ಸದಸ್ಯರ ಮಕ್ಕಳಿಗೆ ರೈತ ಕಲ್ಯಾಣ ಟ್ರಸ್ಟ್‍ನಿಂದ ಸ್ಕಾಲರ್ ಶಿಫ್, ಸರ್ಕಾರದಿಂದ 4ರೂ ಪ್ರೋತ್ಸಾಹ ಧನ, ರಾಸುಗಳಿಗೆ ಉಚಿತ ಆರೋಗ್ಯ ಶಿಬಿರ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ವನಜಾಕ್ಷಿ, ಉಪಾಧ್ಯಕ್ಷ ಕ್ಯಾತಶೆಟ್ಟಿ, ನಿರ್ದೇ ಶಕರಾದ ಮಹದೇವಶೆಟ್ಟಿ, ಪಿ.ಮಹ ದೇವಪ್ಪ, ಎಂ.ಕೆ.ನಾಗರಾಜು, ಎಂ.ಕೆ. ಮಹ ದೇವಶೆಟ್ಟಿ, ಮಹದೇವಶೆಟ್ಟರು, ಮಹ ದೇವಸ್ವಾಮಿ, ರಂಗಸ್ವಾಮಿ, ಜಿ.ಭಾಗ್ಯ, ದುಂಡಮ್ಮ, ಚಾಮುಲ್ ವಿಸ್ತರಣಾಧಿಕಾರಿ ಜಿ.ಪ್ರಭು, ಸಂಘದ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಕುಮಾರಸ್ವಾಮಿ ಹಾಜರಿದ್ದರು.

ಆಲೂರು: ಗ್ರಾಮದ ಹಾಲು ಉತ್ಪಾ ದಕರ ಸಹಕಾರ ಸಂಘದ ವತಿಯಿಂದ ವಿಶ್ವಹಾಲು ದಿನಾಚರಣೆ ಆಚರಿಸಲಾಯಿತು.

ಸಂಘದ ಅಧ್ಯಕ್ಷ ಎ.ಸಿ.ರಾಜಶೇಖರ್ ಮಾತನಾಡಿ, ಮಕ್ಕಳ ದೈಹಿಕ ಬೆಳವಣ ಗೆಗೆ ಹಾಲು ಸಹಕಾರಿಯಾಗಲಿದೆ. ಹಾಲು ಪೌಷ್ಟಿಕ ಆಹಾರಗಳಲ್ಲಿ ಒಂದಾಗಿದ್ದು, ಪ್ರತಿ ದಿನ ಹಾಲು ಸೇವಿಸುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳ ಬಹುದು ಎಂದು ತಿಳಿಸಿದರು.

ರೈತರು ವ್ಯವಸಾಯದ ಜೊತೆ ಹೈನು ಗಾರಿಯಲ್ಲಿ ತೊಡಗಿಕೊಂಡಾಗ ಆರ್ಥಿಕ ವಾಗಿ ಮುಂದೆ ಬರಬಹುದು ಎಂದ ಅವರು, ಹಾಲು ಉತ್ಪಾದಕರು ಡೈರಿಗೆ ಗುಣಮಟ್ಟದ ಹಾಲು ಪೂರೈಸಿದಾಗ ಮಾತ್ರ ಸಂಘ ಅಭಿ ವೃದ್ಧಿಯಾಗಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಮಹದೇವಸ್ವಾಮಿ, ನಿರ್ದೇಶಕರಾದ ಎಸ್.ಮಹದೇವಯ್ಯ, ಎ.ಬಿ.ಬಸವಣ್ಣ, ನಾಗ ರಾಜ್, ಪುಟ್ಟಸ್ವಾಮಿ, ಎ.ಎಂ. ಬಸವಣ್ಣ, ಆರ್.ಶಿವಣ್ಣ, ಚಿನ್ನಮ್ಮ, ಭಾಗ್ಯಮ್ಮ, ಎ. ಆರ್.ಚಂದ್ರು, ಕಾರ್ಯದರ್ಶಿ ನಂಜುಂಡ ಸ್ವಾಮಿ, ಮುಖಂಡರಾದ ಸುಬ್ಬಣ್ಣ, ಶಾಲೆಯ ಮುಖ್ಯಶಿಕ್ಷಕರು, ಸಹಶಿಕ್ಷಕರು, ಹಾಲು ಉತ್ಪಾದಕರು ಹಾಜರಿದ್ದರು.

Translate »