ಮಡಿಕೇರಿ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಬಹುತೇಕ ಪೂರ್ಣಬಸ್‍ಗಳ ಸಂಚಾರ ಮಾರ್ಗ ಪರಿಶೀಲಿಸಿದ ಪೊಲೀಸರು
ಕೊಡಗು

ಮಡಿಕೇರಿ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಬಹುತೇಕ ಪೂರ್ಣಬಸ್‍ಗಳ ಸಂಚಾರ ಮಾರ್ಗ ಪರಿಶೀಲಿಸಿದ ಪೊಲೀಸರು

June 4, 2018

ಮಡಿಕೇರಿ:  ನಗರದಲ್ಲಿ ಖಾಸಗಿ ಬಸ್ ನಿಲ್ದಾಣದ ನಿರ್ಮಾಣ ಕಾಮಗಾರಿ ಮುಕ್ತಾಯದ ಹಂತ ತಲು ಪಿದ್ದು, ಮಳೆಗಾಲ ಪ್ರಾರಂಭಕ್ಕೂ ಮುನ್ನ ನೂತನ ಬಸ್ ನಿಲ್ದಾಣದ ಮೂಲಕ ಖಾಸಗಿ ಬಸ್ ಸಂಚಾರ ಆರಂಭಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಬಸ್‍ಗಳ ಸಂಚಾರ ಮಾರ್ಗದ ನೀಲನಕ್ಷೆ ತಯಾರಿ ಸಲು ಜಿಲ್ಲಾಡಳಿತ ಪೊಲೀಸ್ ಇಲಾಖೆಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಪೂರ್ವಭಾವಿಯಾಗಿ ನಗರ ದಲ್ಲಿ ರಸ್ತೆ ಸರ್ವೆ ನಡೆಸಿದೆ.

ನಗರದ ಜನರಲ್ ತಿಮ್ಮಯ್ಯ ವೃತ್ತದ ಮೂಲಕ ರಾಜಾಸೀಟ್ ರಸ್ತೆಯಲ್ಲಿ ಹಾದು ವೆಬ್ಸ್ ಸರ್ಕಲ್ ಮೂಲಕ ಖಾಸಗಿ ಬಸ್ ಗಳು ನೂತನ ಬಸ್ ನಿಲ್ದಾಣ ಪ್ರವೇಶಿಸ ಬೇಕಿದೆ. ನಿರ್ಗಮನ ಮಾರ್ಗವನ್ನು ಕಾಲೇಜು ರಸ್ತೆ, ವಿಜಯ ವಿನಾಯಕ ದೇವಾ ಲಯ ರಸ್ತೆ, ಸ್ಟೇಟ್ ಬ್ಯಾಂಕ್ ಮೂಲಕ ಹಾದು ಹಳೆ ಖಾಸಗಿ ಬಸ್ ನಿಲ್ದಾಣ ವಾಗಿ ಜನರಲ್ ತಿಮ್ಮಯ್ಯ ವೃತ್ತದ ಮೂಲಕ ವಿವಿದೆಢೆಗಳಿಗೆ ತೆರಳಲು ಯೋಜನೆ ಸಿದ್ಧಪಡಿಸಲಾಗುತ್ತಿದೆ.

ಖಾಸಗಿ ಬಸ್‍ಗಳ ಆಗಮನ ಮತ್ತು ನಿರ್ಗಮನದ ಎರಡು ಮಾರ್ಗಗಳನ್ನು ಏಕಮುಖ ಸಂಚಾರ ರಸ್ತೆಯನ್ನಾಗಿ ಪರಿ ವರ್ತಿಸಲು ಚಿಂತಿಸಲಾಗುತ್ತಿದೆ. ಈ ಎರಡು ಮುಖ್ಯ ಮಾರ್ಗಗಳ ಪೈಕಿ ಸಂತ ಮೈಕೆÀ ಲರ ಶಾಲೆ ಆವರಣ, ರಾಜಾಸೀಟ್, ಕಾನ್ವೆಂಟ್ ಜಂಕ್ಷನ್, ಸ್ಟೇಟ್ ಬ್ಯಾಂಕ್ ರಸ್ತೆ, ಕೊಹಿ ನೂರು ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಇರುವ ಪ್ರದೇಶಗಳೆಂದು ಗುರು ತಿಸಲಾಗಿದೆ. ಮಾತ್ರವಲ್ಲದೇ ಈ ಎರಡು ಮಾರ್ಗಗಳು ಕೂಡುರಸ್ತೆಗಳನ್ನು ಹೊಂದಿದ್ದು, ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಮತ್ತು ವಾಹನ ದಟ್ಟಣೆಯನ್ನು ಕೂಡಾ ಗಂಭೀರವಾಗಿ ಪರಿಗಣ ಸ ಬೇಕಿದೆ. ಹಲವು ವರ್ಷಗಳ ಹಿಂದೆ ಖಾಸಗಿ ಮತ್ತು ಕೆಎಸ್‍ಆರ್‍ಟಿಸಿ ಬಸ್‍ಗಳ ಸಂಚಾರವನ್ನು ಈ ಮಾರ್ಗದಲ್ಲಿ ರೂಪಿ ಸಲಾಗಿದ್ದು, ಇದೀಗ ಹಳೆ ಸಂಚಾರ ಮಾರ್ಗದ ನೀಲನಕ್ಷೆಯ ಸಾಧಕ ಬಾಧಕಗಳ ಕುರಿತು ಪೊಲೀಸ್ ಇಲಾಖೆ ಅವಲೋಕನ ನಡೆಸುತ್ತಿದೆ. ಪೊಲೀಸ್ ಇಲಾಖೆ ಸಿದ್ಧಪಡಿಸಿದ ಬಸ್‍ಮಾರ್ಗದ ನೀಲನಕ್ಷೆಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸ ಲಿದ್ದು, ಆರ್‍ಟಿಓ, ಖಾಸಗಿ ಬಸ್ ಮಾಲೀ ಕರು, ಆಟೋ ಚಾಲಕರು, ವಾಣ ಜ್ಯೋದ್ಯಮಿ ಗಳ ಸಂಘಟನೆ ಸೇರಿದಂತೆ ಸಾರ್ವ ಜನಿಕರ ಅಭಿಪ್ರಾಯಪಡೆದು ಬಳಿಕವೇ ಜಿಲ್ಲಾಡಳಿತ ಅಂತಿಮ ನಿರ್ಧಾರ ಮಾಡ ಬೇಕಿದೆ. ಅದಕ್ಕೂ ಮೊದಲು ಈ ರಸ್ತೆ ಗಳನ್ನು ಮೇಲ್ದರ್ಜೆಗೇರಿಸುವ ಅನಿವಾ ರ್ಯತೆ ಜಿಲ್ಲಾಡಳಿತಕ್ಕೆ ಇದೆ. ಈ ಎರಡೂ ಮಾರ್ಗದ ಕೆಲವೆಡೆ ಕಿಷ್ಕಿಂದೆಯಿಂದ ಕೂಡಿದ್ದರೇ, ಮತ್ತೇ ಕೆಲವು ಕಡೆಗಳಲ್ಲಿ ಒಳಚರಂಡಿ ಕಾಮಗಾರಿಯಿಂದ ರಸ್ತೆಗಳು ಗುಂಡಿಬಿದ್ದಿವೆ. ಕೆಲವು ಕಡೆಗಳಲ್ಲಿ ರಸ್ತೆಗೆ ತಡೆಗೋಡೆ ನಿರ್ಮಿಸುವ ಅವಶ್ಯಕತೆಯು ಇದ್ದು, ವಾಹನಗಳ ಪಾರ್ಕಿಂಗ್ ವ್ಯವ ಸ್ಥೆಯ ನಿರ್ವಹಣೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸುವ ಸಾಧ್ಯತೆಯನ್ನು ಮಾತ್ರ ಅಲ್ಲಗಳೆಯುವಂತಿಲ್ಲ.

Translate »