ಅಗತ್ಯ ಔಷಧಿ ಕೊರತೆ: ರೋಗಿಗಳ ಪರದಾಟ
ಚಾಮರಾಜನಗರ

ಅಗತ್ಯ ಔಷಧಿ ಕೊರತೆ: ರೋಗಿಗಳ ಪರದಾಟ

June 4, 2018

ಗುಂಡ್ಲುಪೇಟೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಪ್ರಾರಂಭಿಸಿರುವ ಜನರಿಕ್ ಔಷಧಿ ಮಳಿಗೆಯಲ್ಲಿ ರೋಗಿಗಳಿಗೆ ಅಗತ್ಯವಾದ ಔಷಧಿ ದೊರೆಯುತ್ತಿಲ್ಲ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಪ್ರತಿ ದಿನ ನೂರಾರು ರೋಗಿಗಳು ಬರುತ್ತಾರೆ. ಆದರೆ, ಅವರಿಗೆ ಪೂರ್ಣ ಪ್ರಮಾಣದಲ್ಲಿ ಔಷಧಿ ಜನರಿಕ್ ಮಳಿಗೆಯಲ್ಲಿ ಸಿಗುತ್ತಿಲ್ಲ. ನೆಪ ಮಾತ್ರಕ್ಕೆ ಕೆಲವೇ ಔಷಧಿಗಳನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ. ಇಲ್ಲಿಗೆ ಬರುವ ಮಧುಮೇಹ ಮುಂತಾದ ರೋಗಿಗಳಿಗೆ ಪ್ರತಿ ದಿನವೂ ಮಾತ್ರೆಗಳನ್ನು ಬಳಕೆ ಮಾಡಬೇಕಾಗಿದೆ.
ಅಲ್ಲದೆ ಇನ್ಸುಲಿನ್ ಮುಂತಾದ ಪರಿಕರ ಗಳನ್ನು ಹಾಗೂ ಶೀತ, ಕೆಮ್ಮು ಇತ್ಯಾದಿ ಕಾಯಿಲೆಗಳಿಗೆ ವೈದ್ಯರು ಶಿಫಾರಸ್ಸು ಮಾಡುವ

ಸಿರಪ್ ಸಹಾ ಮಾರಾಟ ಮಾಡುತ್ತಿಲ್ಲ. ಇದರ ಪರಿಣಾಮವಾಗಿ ಸಾವಿರಾರು ಬಡ ರೋಗಿಗಳು ದುಬಾರಿ ಬೆಲೆತೆತ್ತು ಔಷಧಿ ಅಂಗಡಿಗಳಲ್ಲಿ ಖರೀದಿಸಬೇಕಾಗಿದೆ.

ದಿನದ 24 ಗಂಟೆಗಳ ಕಾಲವೂ ಬಾಗಿಲು ತೆರೆದು ಔಷಧಿಗಳನ್ನು ಮಾರಾಟ ಮಾಡ ಬೇಕಾಗಿದ್ದರೂ ಸಹ ಇಲ್ಲಿ ಒಬ್ಬರೇ ಸಿಬ್ಬಂದಿ ನೇಮಿಸಿರುವ ಕಾರಣ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಮಾತ್ರ ಬಾಗಿಲು ತೆರೆಯಲಾಗುತ್ತಿದೆ. ಸಂಜೆಯ ನಂತರ ಬರುವ ರೋಗಿಗಳು ಜನರಿಕ್ ಮಳಿಗೆ ಯಲ್ಲಿ ಔಷಧಿ ಖರೀದಿಸಲು ಸಾಧ್ಯ ವಾಗುತ್ತಿಲ್ಲ. ಸದ್ಯ ಮಳಿಗೆಯಲ್ಲಿ ಒಬ್ಬನೇ ಸಿಬ್ಬಂದಿ ಕಾಯ ನಿರ್ವಸುತ್ತಿದ್ದು, ಆತನು ರಜೆ ಹಾಕಿದರೆ ಬಾಗಿಲು ಮುಚ್ಚುವ ಪರಿಸ್ಥಿತಿಯುಂಟಾಗಿದೆ.
ಆದ್ದರಿಂದ ಇನ್ನಾದರೂ ಜಿಲ್ಲಾ ಆರೋ ಗ್ಯಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಈ ಜನರಿಕ್ ಮಳಿಗೆಯಲ್ಲಿ ಬಡರೋಗಿಗಳಿಗೆ ಅಗತ್ಯವಾದ ಔಷಧಿಗಳು ದಿನದ 24 ಗಂಟೆ ಗಳು ದೊರಕುವಂತೆ ಮಾಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.

ಜನರಿಕ್ ಮಳಿಗೆಯಲ್ಲಿ ದಿನದ ಬಳಕೆಗೆ ಬರುವ ಔಷಧಿಗಳನ್ನು ಸಂಗ್ರಹಿಸಲಾಗಿದೆ. ಇನ್ನೂ ಹೆಚ್ಚಿನ ಔಷಧಿಗಳ ಅಗತ್ಯವಿದ್ದರೂ ಸಹ ಸರಬರಾಜುದಾರರಲ್ಲಿ ಅವುಗಳು ಲಭ್ಯತೆ ಇಲ್ಲವಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಮತ್ತು ಮಳಿಗೆಗೆ ಇನ್ನೊಬ್ಬರು ಸಿಬ್ಬಂದಿಯನ್ನು ನೇಮಕ ಮಾಡಿಕೊಡುವಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಸದ್ಯದಲ್ಲೇ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು.
-ಡಾ.ನಾಗಾಚಾರ್, ಆಡಳಿತ ವೈದ್ಯಾಧಿಕಾರಿ,ಸಾರ್ವಜನಿಕ ಆಸ್ಪತ್ರೆ, ಗುಂಡ್ಲುಪೇಟೆ

Translate »