ಮೈಸೂರು,ಆ.5(ಎಂಟಿವೈ)- ಕನ್ನಡ ನಾಡಿನ ಜೀವನದಿ ಕಾವೇರಿ ಹಾಗೂ ಕಾವೇರಿ ಕಣಿವೆ ಸಂರಕ್ಷಣೆಯೊಂದಿಗೆ ಲಾಭದಾಯಕ ಅರಣ್ಯ ಕೃಷಿ ಕುರಿತು ಸದ್ಗುರು ಜಗ್ಗಿ ವಾಸುದೇವ್ ಅವರ ಈಶ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿ ರುವ `ಕಾವೇರಿ ಕೂಗು’ ಜಾಗೃತಿ ಜಾಥಾಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮ ರಾಜ ಒಡೆಯರ್ ಚಾಲನೆ ನೀಡಿದರು.
ಮೈಸೂರು ಅರಮನೆಯ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಾ ಲಯದ ಬಳಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಎಲ್‍ಇಡಿ ಪರದೆಯುಳ್ಳ ಎಂಟು ವಾಹನಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಜಾಗೃತಿ ಜಾಥಾ ಉದ್ಘಾಟಿಸಿದ ಯದುವೀರ್, ಬಳಿಕ ಮಾತ ನಾಡಿ, ಸದ್ಗುರು ಜಗ್ಗಿ ವಾಸುದೇವ್ ಅವರು ಕಳೆದ ವರ್ಷ ದೇಶದ ನದಿಗಳ ಸಂರಕ್ಷಣೆಗಾಗಿ ಜನರಲ್ಲಿ ಜಾಗೃತಿ ಮೂಡಿ ಸಲು `ರ್ಯಾಲಿ ಫಾರ್ ರಿವರ್ಸ್’ ಆಯೋಜಿ ಸಿದ್ದರು. ಇದೀಗ ದಕ್ಷಿಣ ಕರ್ನಾಟಕದ ಕಾವೇರಿ ನದಿ ರಕ್ಷಿಸುವುದಕ್ಕಾಗಿ `ಕಾವೇರಿ ಕೂಗು’ ಜಾಗೃತಿ ಜಾಥಾ ಹಮ್ಮಿಕೊಂಡಿ ದ್ದಾರೆ. ಈಶ ಫೌಂಡೇಷನ್ ವತಿಯಿಂದ ಆಯೋಜಿಸಿರುವ ಈ ಕಾರ್ಯಕ್ರಮ ಶ್ಲಾಘ ನೀಯ. ಈ ಭಾಗದ ಜನರು ಬದುಕಿರು ವುದೇ ಕಾವೇರಿ ಮಾತೆಯಿಂದ. ಕಾವೇರಿ ನದಿಯನ್ನು ಕರ್ನಾಟಕ ಮತ್ತು ತಮಿಳು ನಾಡು ಕುಡಿಯುವ ನೀರು, ಕೃಷಿ ಸೇರಿ ದಂತೆ ಬಹುತೇಕ ಎಲ್ಲಾ ಚಟುವಟಿಕೆಗೆ ಕಾವೇರಿ ನದಿಯನ್ನೇ ಅವಲಂಬಿಸಿವೆ. ಕಾವೇರಿ ನಮ್ಮ ಬದುಕಾಗಿದೆ. ಆದ್ದರಿಂದ ಕಾವೇರಿ ಮಾತೆಯ ಸಂರಕ್ಷಣೆ ನಮ್ಮೆಲ್ಲರ ಹೊಣೆ ಯಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿ ಸಬೇಕು ಎಂದು ಸಲಹೆ ನೀಡಿದರು.
ಈ ಹಿಂದೆ ಜಾರಿಯಲ್ಲಿದ್ದ `ಅರಣ್ಯ ಕೃಷಿ’ ಮತ್ತೆ ಜಾರಿಗೆ ತರಬೇಕು. ಇದ ರಿಂದ ಅರಣ್ಯ ಸಂಪತ್ತು ಹೇರಳವಾಗಿ ವೃದ್ಧಿಯಾಗಿತ್ತು. ಕಾರಣಾಂತರಗಳಿಂದ ಕೆಲವು ದಶಕಗಳಿಂದ ಅರಣ್ಯ ಕೃಷಿ ಪದ್ಧತಿಗೆ ಹಿನ್ನಡೆಯಾಗಿತ್ತು. ಈ ಪದ್ಧತಿ ಲಾಭದಾಯಕವೂ ಆಗಿದೆ. ಅಲ್ಲದೆ ಭೂಮಿ ಸವಕಳಿಯನ್ನು ತಪ್ಪಿಸಬಹುದಾ ಗಿದೆ. ಮರಗಳು ಹೆಚ್ಚಿದ್ದರೆ ಸಕಾಲಕ್ಕೆ ಮಳೆಯಾಗಿ ಕಾವೇರಿ ನದಿಯಲ್ಲಿ ಸದಾ ನೀರು ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಮತ್ತೆ ಅರಣ್ಯ ಕೃಷಿ ಪದ್ಧತಿ ಅನುಸರಿಸಲು ಕಾವೇರಿ ಕೂಗು ಜಾಗೃತಿ ಜಾಥಾದಲ್ಲಿ ರೈತರಲ್ಲಿ ಅರಿವು ಮೂಡಿಸುತ್ತಿರುವುದು ಒಳ್ಳೆ ಬೆಳವಣಿಗೆ ಎಂದರು.
ಮಾಜಿ ಸಚಿವ ಎಸ್.ಎ.ರಾಮದಾಸ್ ಮಾತನಾಡಿ, ವಿಶ್ವದಲ್ಲಿಯೇ ಪರಿಸರ ಸಂರಕ್ಷಣೆಯ ಬಗ್ಗೆ ಚರ್ಚೆಯಾಗುತ್ತಿದೆ. ಮೈಸೂರಿನವರೇ ಆಗಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ಈಶ ಫೌಂಡೇ ಷನ್ ವತಿಯಿಂದ ಕಾವೇರಿ ಕೂಗು ಜಾಗೃತಿ ಜಾಥಾ ನಡೆಸುವ ಮೂಲಕ ಕಾವೇರಿ ನದಿ, ನದಿಯ ಕಣಿವೆಯ ಪ್ರದೇಶ ಸಂರಕ್ಷಣೆ ಹಾಗೂ ಅರಣ್ಯ ಕೃಷಿ ಪದ್ಧತಿ ಮತ್ತೆ ಪುನರಾರಂಭಿಸಲು ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಪ್ರಸ್ತುತ ಸಂದರ್ಭದಲ್ಲಿ ವಾಯುಮಾಲಿನ್ಯ, ಜಲಮಾಲಿನ್ಯ ತಡೆಗಟ್ಟುವುದರೊಂದಿಗೆ ಜಲ ಸಂರಕ್ಷಣೆಯ ಅಗತ್ಯವಿದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಮೊದಲನೇ ಮನ್ ಕಿ ಬಾತ್‍ನಲ್ಲಿ ನೀರಿನ ಸಂರಕ್ಷಣೆ ಹಾಗೂ ಮಿತ ಬಳಕೆ ಬಗ್ಗೆ ಪ್ರಸ್ತಾಪಿಸಿ ದ್ದರು. ಆ ಮೂಲಕ ಜಲ ಸಂರಕ್ಷಣೆಗೆ ಪಣ ತೊಡುವಂತೆ ಸಲಹೆ ನೀಡಿದ್ದರು. ಈ ಹಿನ್ನೆಲೆ ಯಲ್ಲಿ ರೈತರು ವೈಜ್ಞಾನಿಕ ಪದ್ಧತಿಯಲ್ಲಿ ನೀರನ್ನು ಮಿತವಾಗಿ ಬಳಕೆ ಮಾಡುವತ್ತ ಗಮನ ಕೇಂದ್ರೀಕರಿಸಬೇಕು ಎಂದು ಕೋರಿದರು.
ಅರಣ್ಯ ಕೃಷಿ ಮಾಡುವುದರಿಂದ ಪರೋಕ್ಷವಾಗಿ ಕಾವೇರಿ ನದಿಯನ್ನು ಉಳಿಸಬಹುದಾಗಿದೆ. ಮರಗಳು ಹೆಚ್ಚಾಗಿದ್ದರೆ ಮಳೆ ಪ್ರಮಾಣವೂ ಹೆಚ್ಚಾಗಿ ನದಿಗಳಲ್ಲಿ ಸದಾ ನೀರು ಹರಿಯುತ್ತವೆ. ಅಲ್ಲದೆ ಡ್ಯಾಂ ಗಳಲ್ಲೂ ನೀರು ತುಂಬುತ್ತದೆ. ಈ ನಿಟ್ಟಿ ನಲ್ಲಿ ವಿದ್ಯಾಭ್ಯಾಸ, ಉದ್ಯೋಗ ಸೇರಿದಂತೆ ಗ್ರಾಮೀಣ ಪ್ರದೇಶದಿಂದ ನಗರಕ್ಕೆ ವಲಸೆ ಬಂದಿರುವ ಯುವ ಜನರು ಮತ್ತೆ ತಮ್ಮ ತಮ್ಮ ಗ್ರಾಮಗಳಿಗೆ ಹೋಗಿ ಅರಣ್ಯ ಕೃಷಿ ಮಾಡಿ ಲಾಭ ಗಳಿಸಿಕೊಳ್ಳುವುದರೊಂದಿಗೆ ನದಿ ಸಂರಕ್ಷಣೆಗೆ ಕೈಜೋಡಿಸಬೇಕು. ಆ ಮೂಲಕ ದೇಶ, ಭೂಮಿ, ಆರೋಗ್ಯ, ಮನುಕುಲ ರಕ್ಷಣೆಗೆ ಯುವ ಸಮುದಾಯ ಪಣ ತೊಡಬೇಕು. ಇದಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳು ತ್ತದೆ ಎಂದರು.ಈ ಸಂದರ್ಭದಲ್ಲಿ ಜಿಕೆವಿಕೆಯ ನಿವೃತ್ತ ಸಂಶೋಧನಾ ನಿರ್ದೇಶಕ ಡಾ.ಎಂ.ಎ.ಶಂಕರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಕಾವೇರಿ ಕೂಗು: ಕಾವೇರಿ ನದಿಯ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾವೇರಿ ಕೂಗು (ಕಾವೇರಿ ಕಾಲಿಂಗ್) ಅಭಿಯಾನಕ್ಕೆ ಜು.31ರಂದು ತಮಿಳು ನಾಡಿನ ವೆಲ್ಲಿಯಂಗಿರಿ ಪರ್ವತ ತಪ್ಪಲಿ ನಲ್ಲಿ ನಿರ್ಮಿಸಿರುವ 112 ಅಡಿ ಎತ್ತರದ ಆದಿಯೋಗಿಯ ಸಮ್ಮುಖದಲ್ಲಿ ಈಶ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ಚಾಲನೆ ನೀಡಿದ್ದರು. ಈ ಅಭಿಯಾನದ ಅಡಿಯಲ್ಲಿ ತಮಿಳುನಾಡು ಹಾಗೂ ಕರ್ನಾಟಕದ 28 ಜಿ¯್ಲÉಗಳಲ್ಲಿ ವಾಹನ ಗಳು ಪ್ರಯಾಣಿಸಲಿವೆ. ಈ ರ್ಯಾಲಿ ಮೈಸೂ ರಿಗೆ ಆಗಮಿಸಿದ್ದು, ಸೋಮವಾರ ಜಿಲ್ಲೆಯ ನಂಜನಗೂಡು, ತಿ.ನರಸೀಪುರ, ಹೆಚ್.ಡಿ. ಕೋಟೆಯಲ್ಲಿ ಸಂಚರಿಸಿ ಚಾಮರಾಜನಗರ, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಸಾಗಲಿದೆ.
ಎಲ್‍ಇಡಿ ಪರದೆ ಹೊಂದಿರುವ 8 ವಾಹನಗಳು ಈ ಜಾಥಾದಲ್ಲಿ ಪಾಲ್ಗೊಂ ಡಿವೆ. ಪ್ರತಿ ವಾಹನದೊಂದಿಗೆ 5-6 ಮಂದಿ ಸ್ವಯಂ ಸೇವಕರು ಇರಲಿದ್ದು, ಮಾರ್ಗ ಮಧ್ಯೆ ರೈತರಿಗೆ ಲಾಭದಾಯಕ ವಾಗಿರುವ ಭಾಗಶಃ ಕೃಷಿ ಅರಣ್ಯ ಪದ್ಧತಿ ಅಳವಡಿಸಿಕೊಂಡು ಆರ್ಥಿಕ ಪ್ರಗತಿ ಕಾಣುವಂತೆ ಜಾಗೃತಿ ಮೂಡಿಸಲಿದ್ದಾರೆ.
ಒಂದು ತಿಂಗಳವರೆಗೆ ನಡೆಯಲಿರುವ ವಾಹನದ ರ್ಯಾಲಿಯಲ್ಲಿ ಸಾವಿರಕ್ಕೂ ಹೆಚ್ಚು ರೈತರನ್ನು ಭೇಟಿ ಮಾಡಲಾಗುತ್ತದೆ. ಈ ವೇಳೆ, ಗಣ್ಯವ್ಯಕ್ತಿಗಳ ವೀಡಿಯೋ ಸಂದೇಶಗಳು, ವೈಯಕ್ತಿಕ ಸಂವಹನ, ಮುದ್ರಿತ ಸಾಹಿತ್ಯವನ್ನೂ ರೈತರಿಗೆ ಒದಗಿ ಸಲಾಗುತ್ತದೆ. ರ್ಯಾಲಿ ನಡೆಸುವ ಸ್ಥಳಗಳಲ್ಲಿನ ತಾಲೂಕು ಕೇಂದ್ರ ಕಚೇರಿಯಲ್ಲಿ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗುತ್ತದೆ. ಈಶ ಫೌಂಡೇಶನ್‍ನ ಕ್ಷೇತ್ರಾಧಿಕಾರಿಗಳು ಮತ್ತು ಪರಿಣತರು ಮಾತನಾಡಲಿದ್ದಾರೆ. ರ್ಯಾಲಿ ಯಲ್ಲಿ ಕಾಡು ಬೆಳೆಸುವಲ್ಲಿ ಯತ್ನಿಸಿ ಯಶಸ್ವಿಯಾದವರ ಸಾಹಸ ಗಾಥೆಯನ್ನೂ ವಿವರಿಸಲಾಗುತ್ತದೆ. ಸೆಪ್ಟೆಂಬರ್‍ನಲ್ಲಿ ಸದ್ಗುರು, ಕಾವೇರಿ ಉಗಮ ಸ್ಥಾನ ತಲ ಕಾವೇರಿಯಿಂದ ಬೈಕ್ ರ್ಯಾಲಿ ನಡೆಸಲಿz್ದÁರೆ.