‘ಯಶಸ್ವಿನಿ’ ಮುಂದುವರಿಕೆ
ಮೈಸೂರು

‘ಯಶಸ್ವಿನಿ’ ಮುಂದುವರಿಕೆ

May 31, 2018

ಬೆಂಗಳೂರು:  ಗ್ರಾಮೀಣ ಕೃಷಿಕರ ಆರೋಗ್ಯ ರಕ್ಷಾ ಕವಚವಾದ ಯಶಸ್ವಿನಿ ಯೋಜನೆ ಮುಂದುವರಿಸಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.

ಇಂದಿಲ್ಲಿ ತುರ್ತು ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿರುವುದಲ್ಲದೆ, ಮೇ 31 ಕ್ಕೆ ಕೊನೆಗೊಳ್ಳಲಿದ್ದ ಯೋಜನೆಯನ್ನು ಮುಂದುವರಿಸಲು ನಿರ್ಧರಿಸಲಾಗಿದೆ.

ರೈತರು ಮತ್ತು ಗ್ರಾಮೀಣ ಜನತೆಯ ಒತ್ತಾಯಕ್ಕೆ ಮಣ ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ. ಯಶಸ್ವಿನಿ ಯೋಜನೆಯನ್ನು ಆರೋಗ್ಯ ಖಾತರಿ ಯೋಜನೆಯಲ್ಲಿ ವಿಲೀನಗೊಳಿಸದಿರಲು ತೀರ್ಮಾನ ಕೈಗೊಂಡಿದ್ದಾರೆ.

ಆರೋಗ್ಯ ಯೋಜನೆ ಜತೆ ಯಶಸ್ವಿನಿ ಯೋಜನೆ ಮುಂದುವರೆಸುವ ತೀರ್ಮಾನ ಮಾಡಿ ಆಗಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ರೈತ ನಾಯಕರಿಗೆ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

Translate »