ಮೈಸೂರು, ಜ.9(ವೈಡಿಎಸ್)-ವಿಶ್ವೇ ಶ್ವರನಗರದ ರಾಹುಲ್ ಕನ್ವೆನ್ಷನ್ ಹಾಲ್ ನಲ್ಲಿ ಗುರುವಾರ ನಡೆದ ಕಿವುಡರ ಚೆಸ್ ಪಂದ್ಯದ 3 ಸುತ್ತಿನಲ್ಲೂ ಪುರುಷರ ವಿಭಾಗ ದಲ್ಲಿ ಕರ್ನಾಟಕದ ಕೆ.ಎಂ.ಶಶಿಧರ, ಜಯಂತ್ ಸಾರಥಿ, ಜಿ.ಪಳನಿ, ಎಸ್. ಆದಿಶ್, ಬಾಲಕಿಯರ ವಿಭಾಗದಲ್ಲಿ ಯಶ ಸ್ವಿನಿ ಮೇಲುಗೈ ಸಾಧಿಸಿದ್ದಾರೆ.
ಮೈಸೂರು ಜಿಲ್ಲಾ ಕಿವುಡರ ಸಂಘ, ಬೆಂಗಳೂರಿನ ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟ, ನವದೆಹಲಿಯ ಅಖಿಲ ಭಾರತ ಕಿವುಡರ ಕ್ರೀಡಾ ಒಕ್ಕೂಟ ಹಾಗೂ ಲಯನ್ಸ್ ಕ್ಲಬ್ ಆಫ್ ಮೈಸೂರು ನಿಸರ್ಗ ಮತ್ತು ಮಯೂರಿ ಸಂಯುಕ್ತಾಶ್ರಯದಲ್ಲಿ ಆಯೋ ಜಿಸಿರುವ 22ನೇ ರಾಷ್ಟ್ರೀಯ ಕಿವುಡರ ಚೆಸ್ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಗುರುವಾರ, 3 ರೌಂಡ್‍ನಲ್ಲೂ ಕರ್ನಾ ಟಕದ ಕೆ.ಎಂ.ಶಶಿಧರ, ಜಯಂತ್ ಸಾರಥಿ, ಜಿ.ಪಳನಿ, ಎಸ್.ಆದಿಶ್, ಬಾಲಕಿಯರ ವಿಭಾಗದಲ್ಲಿ ಯಶಸ್ವಿನಿ ಮೇಲುಗೈ ಸಾಧಿಸಿ ದರೆ, ಉಳಿದಂತೆ ಭರತ್ ಆರ್ ಹೆಗಡೆ (2), ಲೋಕೇಶ್ ಗೋಯಲ್ (2), ನಾಜ್ ಮೀನ್ ಜೆ ರಾಂಪುರ್ (2), ರಾಧಿಕಾ (2) ಸುತ್ತಿನಲ್ಲಿ ಗೆಲುವು ಸಾಧಿಸಿದ್ದಾರೆ.
ಮೇಲುಗೈ ಸಾಧಿಸಿದವರು: ಪುರುಷರ ವಿಭಾಗ: 3 ಸುತ್ತು: ಉತ್ತರ ಪ್ರದೇಶದ ಆಶುತೋಶ್, ಕೇರಳದ ಆದರ್ಶ ವಿಜ ಯನ್, ನವ್‍ಶಾದ್, ಸುವಿನ್ ಎಸ್. ಕುಮಾರ್, ಮಧ್ಯಪ್ರದೇಶದ ಸಚಿನ್, ರಾಜ ಸ್ಥಾನ್‍ನ ರಜತ್, ಮಹಾರಾಷ್ಟ್ರದ ಸಾಗರ್ ಗೋಡ್ಕೆ, ತಮಿಳುನಾಡಿನ ಟಿ.ಕವಿಯಾರಸನ್.
2 ಸುತ್ತು: ಉತ್ತರ ಖಂಡದ ಅಮಿತ್ ಚೌಹಾನ್, ಒಡಿಸ್ಸಾದ ಸುಶಾಂತ ಕುಮಾರ್, ದೆಹಲಿಯ ಗೌರವ್ ಕುಮಾರ್, ತೆಲಂ ಗಾಣದ ಮಟ್ಟ ಸುನೀಲ್ ಕುಮಾರ್, ರಾಜ ಸ್ಥಾನದ ಗೋಪಾಲ್, ಗುಜರಾತ್‍ನ ರಾಮ್ ಬಾಯ್, ತಮಿಳುನಾಡಿನ ಆರ್. ಸಂತು.
ಮಹಿಳಾ ವಿಭಾಗ: 2 ಸುತ್ತು: ತಮಿಳು ನಾಡಿನ ಜೆ.ಅಭಿನಯ, ಪಂಜಾಬ್‍ನ ಮಲ್ಲಿಕಾ, ದೆಹಲಿಯ ರಚನಾ, ಉತ್ತರಖಂಡದ ರಾಧಿಕಾ, ಕೇರಳದ ಫಾಸೀಲಾ, ಗುಜ ರಾತ್‍ನ ಸವಿತಾ, ಗುಜರಾತ್‍ನ ಬಿಜಾಲ್ ಎಂ.ಮಿಸ್ಟ್ರಿ, ದೆಹಲಿಯ ಭೀಮ್ಲಾ ಅವರು ಮೇಲುಗೈ ಸಾಧಿಸಿದ್ದಾರೆ.