ಅಂತೂ ಮಂತ್ರಿ ಮಂಡಲ ವಿಸ್ತರಣೆಗೆ ಯಡಿಯೂರಪ್ಪ ಚಾಲನೆ
ಮೈಸೂರು

ಅಂತೂ ಮಂತ್ರಿ ಮಂಡಲ ವಿಸ್ತರಣೆಗೆ ಯಡಿಯೂರಪ್ಪ ಚಾಲನೆ

August 6, 2019

ಬೆಂಗಳೂರು, ಆ.5(ಕೆಎಂಶಿ)- ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು 2 ವಾರದ ನಂತರ ಯಡಿಯೂರಪ್ಪ ನವರು ತಮ್ಮ ಮಂತ್ರಿ ಮಂಡಲವಿಸ್ತರಣೆಗೆ ಚಾಲನೆ ನೀಡಿದ್ದಾರೆ. ಮಂತ್ರಿಮಂಡಲಕ್ಕೆ ಯಾರನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಷಾ, ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ನಾಳೆ ಭೇಟಿ ಮಾಡಿ, ಚರ್ಚೆ ನಡೆಸಲಿದ್ದಾರೆ.

ಉತ್ತರಕರ್ನಾಟಕ ಭಾಗದಲ್ಲಿ ನೆರೆ ವೈಮಾ ನಿಕ ಸಮೀಕ್ಷೆ ನಡೆಸಿದ ಬಳಿಕ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ ಮುಖ್ಯಮಂತ್ರಿಯವರು ಮಂತ್ರಿಮಂಡಲ ವಿಸ್ತರಣೆ ಕಸರತ್ತಿಗಾಗಿ ರಾಜಧಾನಿಯಲ್ಲೇ ಬಿಡಾರ ಹೂಡಲಿದ್ದಾರೆ. ಮುಖ್ಯಮಂತ್ರಿ ಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೇ 4 ಸದಸ್ಯ ರನ್ನು ಮಂತ್ರಿಮಂಡಲಕ್ಕೆ ತೆಗೆದು ಕೊಂಡು ವರಿಷ್ಠರ ಅನುಮತಿ ಕೋರಿದ್ದರು. ಆದರೆ ಇದಕ್ಕೆ ಅವಕಾಶ ದೊರೆತಿರಲಿಲ್ಲ. ನೀವು ಯಾರನ್ನು ಮಂತ್ರಿ ಮಾಡಬೇಕೆನ್ನುತ್ತಿದ್ದಿರೋ ಅವರ ಪಟ್ಟಿ ಕಳುಹಿಸುವಂತೆ ಕಾರ್ಯಾಧ್ಯಕ್ಷರು ಸಲಹೆ ನೀಡಿದ್ದರು.

ಕಾರ್ಯಾಧ್ಯಕ್ಷರ ಸಲಹೆಯಂತೆ 40 ಸದಸ್ಯರು ಮಂತ್ರಿ ಯಾಗಲು ಅರ್ಹರಿದ್ದು, ಇವರಲ್ಲಿ ಯಾರನ್ನು ಬೇಕಾದರೂ, ಆಯ್ಕೆ ಮಾಡಬಹುದೆಂದು ಯಡಿಯೂರಪ್ಪ ನವರು ತಿಳಿಸಿದ್ದರು. ಈಗಾಗಲೇ ಪಟ್ಟಿ ದೆಹಲಿಗೆ ಹೋಗಿ, 10 ದಿನಗಳೇ ಕಳೆದಿದ್ದರೂ, ಅದಕ್ಕೆ ಮೋಕ್ಷ ದೊರೆತಿಲ್ಲ. ಸಂಸತ್ ಕಲಾಪದಲ್ಲಿ ಭಾಗವಹಿ ಸುವುದರಿಂದ ಕರ್ನಾಟಕ ರಾಜಕೀಯದ ಬಗ್ಗೆ ತಲೆಕೆಡಿಸಿ ಕೊಳ್ಳಲು ಕೇಂದ್ರ ನಾಯಕರಿಗೆ ಬಿಡುವಿಲ್ಲ. ಬುಧವಾರ ಕಲಾಪ ಅಂತ್ಯಗೊಳ್ಳಲಿದೆ. ಈ ವೇಳೆಗೆ ಯಡಿಯೂರಪ್ಪನವರು ದೆಹಲಿ ಯಲ್ಲೇ ಉಳಿದು, ಮಂತ್ರಿ ಮಂಡಲ ವಿಸ್ತ ರಣೆ ಜೊತೆಗೆ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ. ದೆಹಲಿಯ ಭೇಟಿ ಸಂದರ್ಭದಲ್ಲಿ ಮುಖ್ಯ ಮಂತ್ರಿಯವರು ರಾಜ್ಯ ಸಂಸದರ ಸಭೆ ಯನ್ನು ಆಯೋಜಿಸಿದ್ದಾರೆ. ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಪ್ರಹ್ಲಾದ್ ಜೋಷಿ, ನಿರ್ಮಲಾ ಸೀತಾರಾಮನ್, ಲೋಕಸಭಾ ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರು ಪಾಲ್ಗೊಳ್ಳುವರು. ಮಹದಾಯಿ ನದಿ ನೀರು ಯೋಜನೆ, ಮೇಕೆದಾಟು, ಕುಡಿಯುವ ನೀರು ಯೋಜನೆ, ಕಾವೇರಿ ಜಲ ವಿವಾದ ಇತ್ಯರ್ಥ, ರೈಲ್ವೆ, ಇಂಧನ, ರಕ್ಷಣೆ, ನೀರಾವರಿ, ಕಲಿ ದ್ದಲು ಸೇರಿದಂತೆ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಲು ಸಚಿವರ ಮೇಲೆ ಒತ್ತಡ ಹಾಕುವಂತೆ ಬಿಎಸ್‍ವೈ ಸಂಸದರಿಗೆ ನಿರ್ದೇಶನ ನೀಡುವರು.

ದೆಹಲಿಗೆ ತೆರಳುವ ಮುನ್ನ ತಮ್ಮ ನಿವಾಸ ದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಮುಖ್ಯಮಂತ್ರಿಯವರು ಸಚಿವ ಸಂಪುಟ ವಿಸ್ತರಣೆ ಯಾವಾಗ ಮಾಡಬೇಕೆಂಬುದು ನನಗೆ ಗೊತ್ತಿದೆ. ಇದಕ್ಕೆ ಪ್ರತಿಪಕ್ಷಗಳ ಸಲಹೆ ಪಡೆಯಬೇಕಾದ ಅಗತ್ಯ ನನಗಿಲ್ಲ ಎಂದಿದ್ದಾರೆ. ನಮ್ಮದು ರಾಷ್ಟ್ರೀಯ ಪಕ್ಷ ಕೇಂದ್ರ ನಾಯ ಕರಿಂದ ಸಲಹೆ, ಸೂಚನೆಗಳನ್ನು ಪಡೆದೇ ಸಚಿವ ಸಂಪುಟ ವಿಸ್ತರಣೆ ಮಾಡಬೇಕಾಗು ತ್ತದೆ. ಸಂಪುಟ ವಿಸ್ತರಣೆಯಾಗದ ಕಾರಣ ಅಭಿವೃದ್ಧಿ ಕಾರ್ಯಗಳು ಕುಂಠಿತ ವಾಗಿವೆ ಎಂಬ ಸಿದ್ದರಾಮಯ್ಯನವರ ಆರೋಪಕ್ಕೆ ತಿರುಗೇಟು ನೀಡಿ, ಪ್ರತಿ ಪಕ್ಷಗಳನ್ನು ಕೇಳಿ ಸಂಪುಟ ವಿಸ್ತರಣೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ನಾನು 24 ಗಂಟೆ ಯೊಳಗೆ ಸಂಪುಟ ವಿಸ್ತರಣೆ ಮಾಡಲು ಸಿದ್ಧನಿದ್ದೇನೆ. ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಕೆಲವು ನಾಯಕರ ಅಭಿಪ್ರಾಯವನ್ನು ಪಡೆಯಬೇಕಾಗುತ್ತದೆ. ನನಗೂ ವಿಸ್ತರಣೆ ಮಾಡಬೇಕೆಂಬ ಆಸೆ ಇದೆ. ಸಂಪುಟ ವಿಸ್ತರಣೆ ಮಾಡಿದರೆ ಎಲ್ಲ ಸಚಿವರು ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡುತ್ತಾರೆ. ಉತ್ತರ ಕರ್ನಾ ಟಕದ ಅನೇಕ ಕಡೆ ಪ್ರವಾಹ ಉಂಟಾಗಿ ರುವುದರಿಂದ ಸಾವಿರಾರು ಜನರು ಸಂಕ ಷ್ಟಕ್ಕೆ ಸಿಲುಕಿದ್ದಾರೆ. ಪ್ರಧಾನಿಯವರನ್ನು ಭೇಟಿ ಯಾದ ಮೇಲೆ ರಾಜ್ಯಕ್ಕೆ ವಿಶೇಷ ಆರ್ಥಿಕ ನೆರವು ನೀಡುವಂತೆ ಕೋರಲಿದ್ದೇನೆ ಎಂದರು.

Translate »