ದಸರಾ ಅಂಗವಾಗಿ ‘ಫಿಟ್ ಇಂಡಿಯಾ’ ಪರಿಕಲ್ಪನೆಯಡಿ ಯೋಗಾಸನ
ಮೈಸೂರು

ದಸರಾ ಅಂಗವಾಗಿ ‘ಫಿಟ್ ಇಂಡಿಯಾ’ ಪರಿಕಲ್ಪನೆಯಡಿ ಯೋಗಾಸನ

September 15, 2019

ಮೈಸೂರು, ಸೆ.14(ಎಂಕೆ)- ದಸರಾ ಅಂಗವಾಗಿ ‘ಫಿಟ್ ಇಂಡಿಯಾ’ ಪರಿ ಕಲ್ಪನೆಯಲ್ಲಿ ಮೈಸೂರಿಗರನ್ನು ಫಿಟ್ ಆಗಿಸಲು ವಿವಿಧ ಯೋಗಾಸನ ಪ್ರಕಾರ ಗಳನ್ನು ಆಯೋಜಿಸಲಾಗಿದೆ.

ಸಾಂಸ್ಕøತಿಕ, ಪಾರಂಪರಿಕ, ಸ್ವಚ್ಛ ಮೈಸೂರನ್ನು ಆರೋಗ್ಯ ಮೈಸೂರ ನ್ನಾಗಿಸುವ ನಿಟ್ಟಿನಲ್ಲಿ ದಸರಾ ಆಚರಣೆ ವೇಳೆ ಹಮ್ಮಿಕೊಳ್ಳುವ ಯೋಗ ದಸರಾ ಕಾರ್ಯಕ್ರಮದಲ್ಲಿ ಯೋಗ ನೃತ್ಯ ರೂಪಕ, ಯೋಗ ವಾಹಿನಿ, ಯೋಗ ಸಂಭ್ರಮ, ಯೋಗ ಸರಪಳಿ, ಸ್ವಚ್ಛ ಸರ್ವೇಕ್ಷಣಾ ಯೋಗದಂತಹ ಬಗೆ ಬಗೆಯ ಕಾರ್ಯ ಕ್ರಮಗಳನ್ನು ರೂಪಿಸಲಾಗಿದೆ. ಸೆ.30 ರಂದು ಯೋಗ ದಸರಾ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ಕಳೆದ ವರ್ಷ ಕ್ಕಿಂತ ಈ ಬಾರಿ 6 ದಿನಗಳವರೆಗೆ ವಿವಿಧ ಯೋಗಾಸನ ಪ್ರಕಾರಗಳನ್ನು ನಡೆಸ ಲಾಗುತ್ತದೆ. ದಾಖಲೆ ನಿರ್ಮಿಸಿರುವ ಮೈಸೂರಿನ ಯೋಗ ಪ್ರಿಯರಿಗೆ ಯೋಗದ ಹಬ್ಬವನ್ನು ಸವಿಯುವ ಸದವಕಾಶ ಬಂದಿದ್ದು, ಪ್ರತಿಯೊಬ್ಬರು ಭಾಗವಹಿ ಸಲು ಅವಕಾಶ ಕಲ್ಪಿಸಲಾಗಿದೆ.

ಯೋಗ ನೃತ್ಯ ರೂಪಕ: ಮೈಸೂರಿನ ಒವೆÀಲ್ ಮೈದಾನದಲ್ಲಿ ಸೆ.30ರಂದು ಸಂಜೆ 5 ಗಂಟೆಗೆ ಯೋಗ ದಸರಾ ಉದ್ಘಾ ಟನೆಯಾಗಲಿದ್ದು, ನಂತರ 5ಕ್ಕೂ ಹೆಚ್ಚು ತಂಡಗಳಿಂದ ಯೋಗ ನೃತ್ಯ ರೂಪಕ ವನ್ನು ಪ್ರದರ್ಶನ ನೀಡಲಾಗುತ್ತದೆ.

ಯೋಗ ವಾಹಿನಿ: ಮೈಸೂರು ದಸರಾ ಉತ್ಸವದಲ್ಲಿ ಮೊಟ್ಟಮೊದಲ ಬಾರಿಗೆ ಮಾಧ್ಯಮ ಮತ್ತು ಪತ್ರಿಕಾ ಪ್ರತಿನಿಧಿಗಳಿಗೆ ಯೋಗಾಭ್ಯಾಸ ಶಿಬಿರವನ್ನು ಅ.1ರಂದು ಬೆಳಿಗ್ಗೆ 8ರಿಂದ 9ಗಂಟೆವರೆಗೆ ಕುವೆಂಪು ನಗರದ ಸೌಗಂಧಿಕ ಉದ್ಯಾನವನದಲ್ಲಿ ಏರ್ಪಡಿಸಲಾಗುತ್ತಿದೆ. ಸುದ್ದಿಗಳನ್ನು ಸಮಾ ಜಕ್ಕೆ ತಿಳಿಸುವ ಹಾಗೂ ಸದಾ ಜನರನ್ನು ಎಚ್ಚರಿಸುವ ಜವಾಬ್ದಾರಿಯನ್ನು ನಿರ್ವಹಿ ಸುತ್ತಿರುವ ಪತ್ರಕರ್ತರು ಯೋಗದ ಮೂಲಕ ತಮ್ಮ ಆರೋಗ್ಯವನ್ನು ವೃದ್ಧಿಸಿ ಕೊಳ್ಳಲು ವೇದಿಕೆ ಸಿದ್ಧಪಡಿಸಲಾಗಿದೆ.

ಯೋಗ ಸಂಭ್ರಮ: ಸರ್ವಧರ್ಮ ಗುರುಗಳ ಸಮಕ್ಷಮದಲ್ಲಿ ಅ.2ರಂದು ಬೆಳಿಗ್ಗೆ 6ರಿಂದ 8 ಗಂಟೆವರೆಗೆ ಮೈಸೂರು ಅರಮನೆ ಆವರಣದಲ್ಲಿ ಯೋಗ ಸಂಭ್ರಮ ನಡೆಯಲಿದೆ. ಈ ವೇಳೆ ಮೈಸೂರಿನ ಪ್ರಮುಖ ಧರ್ಮ ಪ್ರಚಾರಕರು ಭಾಗ ವಹಿಸಲಿದ್ದು, ಸಾಮೂಹಿಕ ಯೋಗಾಭ್ಯಾಸ ಮತ್ತು ಸೂರ್ಯನಮಸ್ಕಾರ ಮಾಡಲಾ ಗುತ್ತದೆ. ಎಲ್ಲಾ ಧರ್ಮಿಯರನ್ನು ಒಂದಾ ಗಿಸಿ, ಸರ್ವರು ಸಮಾನರು ಎಂದು ತಿಳಿಸುವುದು ಯೋಗ ಸಂಭ್ರಮದ ಉದ್ದೇಶವಾಗಿದೆ.

ಯೋಗಾಸನ ಸ್ಪರ್ಧೆಗಳು: ಅ.2 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ಮೈಸೂರು ದಸರಾ ವಸ್ತುಪ್ರದ ರ್ಶನ ಆವರಣದಲ್ಲಿರುವ ಪಿ.ಕಾಳಿಂಗ ರಾವ್ ಸಭಾಂಗಣದಲ್ಲಿ ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆಗಳು ನಡೆ ಯಲಿದ್ದು, ರಾಜ್ಯದ ವಿವಿಧೆಡೆಯಿಂದ ನೂರಾರು ಯೋಗಪಟುಗಳು ಭಾಗವ ಹಿಸಲಿದ್ದಾರೆ. ವಯೋಮಿತಿಗೆ ಅನುಗುಣ ವಾಗಿ ಯೋಗಾಸನ ಸ್ಪರ್ಧೆಗಳು ನಡೆ ಯಲಿದ್ದು, 8 ರಿಂದ 55 ವರ್ಷದ ವಯಸ್ಸಿನವರು ಸ್ಪರ್ಧೆಗಳಲ್ಲಿ ಭಾಗ ವಹಿಸಬಹುದಾಗಿದೆ.

ಯೋಗ ಸರಪಳಿ: ನಗರದ ಹಲ ವಾರು ಶಾಲಾ-ಕಾಲೇಜುಗರ ಸಾವಿ ರಾರು ವಿದ್ಯಾರ್ಥಿಗಳಿಂದ ಅ.4ರಂದು ಬೆಳಿಗ್ಗೆ 9 ರಿಂದ 11ರವರೆಗೆ ಅರಮನೆ ಆವ ರಣದಲ್ಲಿ ಯೋಗ ಸರಪಳಿಯನ್ನು ಸೃಷ್ಟಿ ಸಲಾಗುತ್ತಿದೆ. ವಿವಿಧ ಆಸನಗಳನ್ನು ಮಾಡುವ ಮೂಲಕ ವಿದ್ಯಾರ್ಥಿಗಳು ಸರಪಳಿಯನ್ನು ಸೃಷ್ಟಿಸಲಿದ್ದಾರೆ.

ಸ್ವಚ್ಛ ಸರ್ವೇಕ್ಷಣಾ ಯೋಗ: ಮೈಸೂ ರಿಗೆ ಸ್ವಚ್ಛ ನಗರವೆಂಬ ಪಟ್ಟವನ್ನು ದೊರಕಿಸಿಕೊಟ್ಟ ನಗರಪಾಲಿಕೆ ಪೌರ ಕಾರ್ಮಿರಿಗಾಗಿಯೇ ವಿಶೇಷವಾಗಿ ಸ್ವಚ್ಛ ಸರ್ವೇಕ್ಷಣಾ ಯೋಗ ಶಿಬಿರವನ್ನು ಹಮ್ಮಿ ಕೊಳ್ಳಲಾಗಿದೆ. ನಗರವನ್ನು ಸ್ವಚ್ಛವಾಗಿ ಕಾಣುವಂತೆ ಮಾಡುವ ಪೌರ ಕಾರ್ಮಿ ಕರಲ್ಲಿ ಆರೋಗ್ಯದ ಅರಿವನ್ನು ಮೂಡಿ ಸಲು ಅ.4ರಂದು ಕುವೆಂಪುನಗರದ ಸೌಗಂಧಿಕ ಉದ್ಯಾನವನದಲ್ಲಿ ಶಿಬಿರ ವನ್ನು ಆಯೋಜಿಸಲಾಗುತ್ತಿದೆ.

ಯೋಗ ಚಾರಣ ಮತ್ತು ದುರ್ಗಾ ನಮಸ್ಕಾರ: ಯೋಗ ದಸರಾದ ಅಂತಿಮ ದಿನವಾದ ಅ.6ರಂದು ಬೆಳಿಗ್ಗೆ 6 ರಿಂದ 8 ಗಂಟೆವರೆಗೆ ಯೋಗ ಚಾರಣ ಮತ್ತು ದುರ್ಗಾ ನಮಸ್ಕಾರವನ್ನು ಚಾಮುಂಡಿ ಬೆಟ್ಟ ಆವರಣದಲ್ಲಿ ನಡೆಸಲಾಗುತ್ತದೆ. ಚಾಮುಂಡಿಬೆಟ್ಟವನ್ನು ಹತ್ತಿದ ಯೋಗಾ ಸಕ್ತರು ಬಳಿಕ ಬೆಟ್ಟದ ಆವರಣದಲ್ಲಿ ಯೋಗಾ ಸನ ಮಾಡುವ ಮೂಲಕ ತಾಯಿ ಚಾಮುಂಡೇಶ್ವರಿಗೆ ನಮಸ್ಕರಿಸಲಿದ್ದಾರೆ.

Translate »