ನಿಮ್ಮಲ್ಲಿ ನೀರಿನ ಸಮಸ್ಯೆಯೇ…!ಇವರನ್ನು ಕೂಡಲೇ ಸಂಪರ್ಕಿಸಿ…!
ಮೈಸೂರು

ನಿಮ್ಮಲ್ಲಿ ನೀರಿನ ಸಮಸ್ಯೆಯೇ…!ಇವರನ್ನು ಕೂಡಲೇ ಸಂಪರ್ಕಿಸಿ…!

May 19, 2019

ಮೈಸೂರು: ಮೈಸೂರು ಜಿಲ್ಲೆ ಯಲ್ಲಿ ಬೇಸಿಗೆ ಸಮಯದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಉದ್ಬವಿಸಲಿರುವ ನೀರಿನ ಸಮಸ್ಯೆ ಪರಿಹರಿಸಲು ತಾಲ್ಲೂಕುವಾರು ಹಾಗೂ ಹೋಬಳಿವಾರು ನೋಡಲ್ ಅಧಿಕಾರಿಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಕೆ.ಜ್ಯೋತಿ ಅವರು ನೇಮಿಸಿ ಆದೇಶ ಹೊರಡಿಸಿದ್ದಾರೆ.

ಮೈಸೂರು ತಾಲೂಕು ಕಸಬಾ ಹೋಬಳಿಗೆ ಮೈಸೂರು ಜಿಲ್ಲಾ ಪಂಚಾ ಯತ್ ಉಪಕಾರ್ಯದರ್ಶಿಗಳಾದ ಕೆ.ಎಂ.ಶಿವಕುಮಾರಸ್ವಾಮಿ-94808 73666, ಜಯಪುರ ಹೋಬಳಿಗೆ ಮೈಸೂರು ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಹೆಚ್. ಶೋಭಾ-9449169859, ಇಲವಾಲ ಹೋಬಳಿಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ದಿವಾಕರ್-9448022649, ವರುಣ ಹೋಬಳಿಗೆ ಪಿ.ಆರ್.ಇ.ಡಿ ಕಾರ್ಯಪಾಲಕ ಅಭಿಯಂತರ ರಾದ ಸತೀಶ್ 9740034213 ಇವರುಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಿದ್ದಾರೆ.

ನಂಜನಗೂಡು ತಾಲೂಕು ಕಸಬಾ ಹೋಬಳಿಗೆ ಮೈಸೂರು ಜಿ.ಪಂ. ಉಪ ಕಾರ್ಯ ದರ್ಶಿ(ಆಡಳಿತ) ವೈ.ವಿ. ಶಾಂತ ರಾಜು-9480873002, ಚಿಕ್ಕಯ್ಯನಛತ್ರ ಹೋಬಳಿಗೆ
ಮಾಪನಾಧಿಕಾರಿ ಪಿ.ಆರ್.ರಾಜ ಗೋಪಾಲ್-990065 9657, ಹುಲ್ಲಹಳ್ಳಿ ಹೋಬ ಳಿಗೆ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರಾದ ಡಿ. ಸಿದ್ದಯ್ಯ-988092 3401, ಬಿಳಿಗೆರೆ ಹೋಬಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಶ್ರೀನಿವಾಸ-8073298569, ದೊಡ್ಡಕೌಲಂದೆ ಹೋಬಳಿಗೆ ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾ ಅಧಿಕಾರಿ ಪುಟ್ಟರಾಜು-9448666827 ಟಿ.ನರಸೀಪುರ ತಾಲೂಕು ಕಸಬಾ ಹೋಬಳಿಗೆ ಜಿ.ಪಂ. ಸಹಾಯಕ ಕಾರ್ಯ ದರ್ಶಿ ಮಣಿಕಂಠ ಹೆಚ್.ಕೆ.-9480873005, ಬನ್ನೂರು ಹೋಬಳಿಗೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇ ಶಕರಾದ ಸುರೇಶ್ ಕೆ.-9480 886478, ಮೂಗೂರು ಹೋಬಳಿಗೆ ಕೆ.ಆರ್.ಐ.ಡಿ.ಎಲ್. ಕಾರ್ಯಪಾಲಕ ಅಭಿಯಂತರ ರಾದ ವೇಣುಗೋಪಾಲ್-9449863 087, ಸೋಸಲೆ ಹೋಬಳಿಗೆ ಆಯುರ್ವೇದ ಇಲಾಖೆ ಉಪನಿರ್ದೇಶಕರಾದ ಡಾ.ಬಿ.ಎಸ್. ಸೀತಾಲಕ್ಷ್ಮೀ- 9448566705, ತಲಕಾಡು ಹೋಬಳಿಗೆ ಕು.ನೀ ಮತ್ತು ನೈ. ವಿಭಾಗದ ಕಾರ್ಯಪಾಲಕ ಅಭಿಯಂತರ ರಾದ ಕೆ.ವೆಂಕಟೇಶ್-8095958976. ಕೆ.ಆರ್.ನಗರ ತಾಲೂಕು ಕಸಬಾ ಹೋಬಳಿಗೆ ಜಿ.ಪಂ. ಡಿ.ಆರ್.ಡಿ.ಎ.ನ ಯೋಜನಾ ನಿರ್ದೇಶಕರಾದ ಕೆ. ಸುಶೀಲ-9480873001, ಸಾಲಿಗ್ರಾಮ ಹೋಬಳಿಗೆ ಜಂಟಿ ಕೃಷಿ ನಿರ್ದೇಶಕರಾದ ಹೆಚ್.ಟಿ. ಚಂದ್ರಕಲಾ-827793 3100, ಮಿರ್ಲೆ ಹೋಬಳಿಗೆ ಉಪ ಸಂರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ ಪಿ. ಶ್ರೀಧರ್- 9448075978, ಹೊಸ ಅಗ್ರಹಾರ ಹೋಬಳಿಗೆ ರೇಷ್ಮೆ ಇಲಾ ಖೆಯ ಉಪನಿರ್ದೇಶಕರಾದ ಜವರೇಗೌಡ- 9481818750, ಹೆಬ್ಬಾಳು ಹೋಬಳಿಗೆ ಐ.ಟಿ.ಡಿ.ಪಿ. ಯೋಜನಾ ಸಮನ್ವಯಾಧಿಕಾರಿ ಪ್ರಭಾ ಬಿ.ಎಸ್- 9483262562 ಹಾಗೂ ಚುಂಚನಕಟ್ಟೆ ಹೋಬಳಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವೆಂಕಟೇಶ್ ಆರ್. -9449843060. ಹುಣಸೂರು ತಾಲೂಕು ಕಸಬಾ ಹೋಬಳಿಗೆ ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಎಸ್. ಮಂಜುಳ-9480873003, ಹನಗೋಡು ಹೋಬಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಪದ್ಮ-9986567184, ಬಿಳಿಕೆರೆ ಹೋಬಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಚೇರಿಯ ಜಿಲ್ಲಾ ಅಂಗವಿಕಲಾ ಕಲ್ಯಾಣ ಅಧಿಕಾರಿ ಅಭಿಕುಮಾರ್- 9945767687 ಹಾಗೂ ಗಾವಡಗೆರೆ ಹೋಬಳಿಗೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಸಂಜಯ್- 9448999220. ಪಿರಿಯಾಪಟ್ಟಣ ತಾಲೂಕು ಕಸಬಾ ಹೋಬಳಿಗೆ ಜಿ.ಪಂ. ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ-9480873004, ಬೆಟ್ಟದಪುರ ಹೋಬಳಿಗೆ ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮೀನಾ ಟಿ.ಎಂ.-9448238931, ರಾವಂದೂರು ಹೋಬಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಪಾಂಡುರಂಗ-9448999349 ಹಾಗೂ ಹಾರ್ನಹಳ್ಳಿ ಹೋಬಳಿಗೆ ಡಿ.ವೈ.ಪಿ.ಸಿ. ಸರ್ವ ಶಿಕ್ಷಣ ಅಭಿಯಾನ ಕೃಷ್ಣಮೂರ್ತಿ -9972657894. ಹೆಚ್.ಡಿ.ಕೋಟೆ ತಾಲ್ಲೂಕು ಕಸಬಾ ಹೋಬಳಿಗೆ ಪಶುಪಾಲನಾ ಇಲಾಖೆಯ ಉಪನಿರ್ದೇಶಕರಾದ ಅಜಿತ್‍ಕುಮಾರ್ -6361898350, ಸರಗೂರು ಹೋಬಳಿಗೆ ಜಿ.ಪಂ. ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ವಸಂತಕುಮಾರ್-9480835566, ಅಂತರಸಂತೆ ಹೋಬಳಿಗೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಬಿಂದ್ಯಾ-9480843041, ಕಂದಲಿಕೆ ಹೋಬಳಿಗೆ ಕೈಮಗ್ಗ ಮತ್ತು ಜವಳಿ ಉಪನಿರ್ದೇಶಕ ಜನಾರ್ಧನ್-9483970272 ಹಾಗೂ ಹಂಪಾಪುರ ಹೋಬಳಿಗೆ ಖಾದಿ ಮತ್ತು ಗ್ರಾಮೋದ್ಯೋಗ ಉಪನಿರ್ದೇಶಕರಾದ ರಮೇಶ್ ಮೂರ್ತಿ-9448215547. ನೋಡಲ್ ಅಧಿಕಾರಿಗಳು ಹೋಬಳಿಯಲ್ಲಿ ಗ್ರಾ ಪಂ ವ್ಯಾಪ್ತಿಗೆ ಒಳಪಡುವ ಗ್ರಾಮಗಳಿಗೆ ವಾರದಲ್ಲಿ ಕನಿಷ್ಠ ಒಂದು ಬಾರಿ ಭೇಟಿ ನೀಡಿ ಕುಡಿಯುವ ನೀರಿನ ಸೌಲಭ್ಯದ ವಾಸ್ತವಿಕತೆ ಅರಿಯುವ ಗ್ರಾಮಗಳಲ್ಲಿನ ಸ್ವಚ್ಫತೆ, ನೈರ್ಮಲ್ಯತೆಗಳ ಹಾಗೂ ಓ.ಹೆಚ್.ಟಿ.ಎಂ.ಡಬ್ಲ್ಯೂ.ಎಸ್ ಮತ್ತು ನೀರಿನ ವಾಲ್ವ್‍ಗಳ ಪರಿಶೀಲನೆ ನಡೆಸಲು ತಿಳಿಸಿದೆ ಮತ್ತು ಯೋಜನೆಗಳು ದುರಸ್ತಿಗೆ ಬಂದಲ್ಲಿ ಕೂಡಲೇ ದುರಸ್ತಿಗೊಳಿ ಸಲು ಅಗತ್ಯ ಕ್ರಮ ಕೈಗೊಂಡು ಸಾಧ್ಯವಾದಷ್ಟು ಮಟ್ಟಿಗೆ ಗ್ರಾಮ ಪಂಚಾಯತ್ ಹಂತದಲ್ಲಿಯೇ ಸಮಸ್ಯೆ ಪರಿಹರಿಸಲು ಕ್ರಮ ವಹಿಸುವುದು. ಹೆಚ್ಚಿನ ನೀರಿನ ಸಮಸ್ಯೆ ಉದ್ಬವಿಸಿದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ/ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗಗಳ ಸಹಾಯಕ ಕಾರ್ಯಪಾಲಕ ಅಭಿಯಂತರ ರಿಗೆ ವರದಿ ಸಲ್ಲಿಸುವುದು. ಪ್ರಗತಿ ವರದಿಗಳನ್ನು ಈ ಕಾರ್ಯಾಲಯ ಹಾಗೂ ಕಾರ್ಯನಿರ್ವಾಹಕಕ ಅಧಿಕಾರಿ, ತಾಲೂಕು ಪಂಚಾಯತ್ ಅವರು ಪ್ರತೀ ವಾರ ಕಡ್ಡಾಯವಾಗಿ ತಪ್ಪದೇ ವರದಿ ನೀಡುವಂತೆ ಸಿಇಓ ಸೂಚಿಸಿದ್ದಾರೆ.

Translate »