ಮೈಸೂರಿನ ಯುವ ಪ್ರತಿಭೆ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಗೆ ಆಯ್ಕೆ
ಮೈಸೂರು

ಮೈಸೂರಿನ ಯುವ ಪ್ರತಿಭೆ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಗೆ ಆಯ್ಕೆ

August 2, 2019

ಮೈಸೂರು,ಆ.1(ವೈಡಿಎಸ್)- ಚಿಕ್ಕವಯಸ್ಸಿನಲ್ಲೇ ರಾಷ್ಟ್ರೀಯಮಟ್ಟದ ಪಂದ್ಯಾವಳಿಯಲ್ಲಿ ಸಾಧನೆಗೈ ಯ್ಯುತ್ತಿರುವ ಮೈಸೂರಿನ ಯುವ ಪ್ರತಿಭೆ, 2019ರ ನವೆಂಬರ್‍ನಲ್ಲಿ ಚಿಕ್ಕಮಗಳೂರಿನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆ ಮಾತಿ ನಂತೆ, ನಾವು ಚಿಕ್ಕಂದಿನಿಂದಲೇ ಮಕ್ಕಳನ್ನು ಹೇಗೆ ಬೆಳೆಸುತ್ತೇವೆ ಎಂಬುದರ ಮೇಲೆ ಅವರ ಭವಿಷ್ಯದ ಬದುಕು ನಿಂತಿರುತ್ತದೆ. ಹಾಗೆಯೇ ಬಡತನದಲ್ಲಿ ಬೆಳೆದ ಮಕ್ಕಳಿಗೆ ಏನಾದರೂ ಸಾಧನೆಗೈಯ್ಯಬೇಕೆಂಬ ಹಂಬಲ ವಿರುತ್ತದೆ. ಇದಕ್ಕೆ ಇಂಬು ನೀಡುವಂತೆ 12 ವರ್ಷದ ಬಾಲಕಿ ಮಂಚಮ್ಮ, ಮನೆಯಲ್ಲಿ ಬಡತನವಿದ್ದರೂ ಕ್ರೀಡೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಸಾಧನೆಗೈಯ್ಯುತ್ತಿದ್ದಾರೆ. ಕ್ಯಾತಮಾರನಹಳ್ಳಿ ನಿವಾಸಿ ಜಯರಾಂ ಮತ್ತು ಭಾಗ್ಯ ದಂಪತಿ ಪುತ್ರಿ ಮಂಚಮ್ಮ. ಇಲ್ಲಿನ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಈಕೆ ತನ್ನ ಗೆಳತಿ ಯರೊಂದಿಗೆ ಆಟವಾಡಿಕೊಂಡು ಇರಬೇಕಿದ್ದ 9ನೇ ವಯಸ್ಸಿನಲ್ಲಿ ಅಂದರೆ, 4ನೇ ತರಗತಿ ವ್ಯಾಸಂಗ ಮಾಡುತ್ತಿ ದ್ದಾಗಲೇ ಓದಿನ ಜತೆಗೆ ಕಬಡ್ಡಿ, ಜಿಮ್ನಾಸ್ಟಿಕ್ಸ್, ನೃತ್ಯ, ರನ್ನಿಂಗ್, ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಪದಕ ಪಡೆದಿದ್ದಾರೆ. ಆಕೆಯ ಸಾಧನೆಗೆ ಪೋಷಕರು, ಶಾಲೆ ಮುಖ್ಯಶಿಕ್ಷಕ ರಾಮಸ್ವಾಮಿ, ತರಬೇತುದಾರ ಇಲಿ ಯಾಸ್ ಬೆನ್ನೆಲುಬಾಗಿ ನಿಂತಿದ್ದಾರೆ. ತನ್ನ ಗೆಳತಿಯ ರೊಂದಿಗೆ ಆಟವಾಡಿಕೊಂಡು ಇರಬೇಕಿದ್ದ 9ನೇ ವಯಸ್ಸಿ ನಲ್ಲಿ ಅಂದರೆ, 3ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾ ಗಲೇ ಕ್ರೀಡೆಗಳಲ್ಲಿ ತೊಡಗಿಸಿಕೊಂಡ ಮಂಚಮ್ಮ, ಇದುವರೆಗೆ ರಾಜ್ಯ, ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ, ಕಂಚಿನ ಪದಕ ಪಡೆದಿದ್ದಾರೆ.

ಬಹುಮಾನಗಳು: 2018ರ ಡಿ.16ರಂದು ತ್ರಿಪುರದಲ್ಲಿ ನಡೆದ ರಾಷ್ಟ್ರೀಯಮಟ್ಟದ ಜಿಮ್ನಾಸ್ಟಿಕ್‍ನಲ್ಲಿ ಪ್ರಥಮ, ಧಾರವಾಡದಲ್ಲಿ ದ್ವಿತೀಯ. 2018ರಲ್ಲಿ ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಚಿನ್ನ, 2018ರ ಆಗಸ್ಟ್‍ನಲ್ಲಿ ತಮಿಳುನಾಡಿನಲ್ಲಿ ನಡೆದ ಪಂದ್ಯಾವಳಿ ಯಲ್ಲಿ ಚಿನ್ನ, 2018ರಲ್ಲಿ ಹಾವೇರಿಯಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಹಾಗೆಯೇ ಮಂಗಳೂರು ಮತ್ತು ಚಿಕ್ಕಮಗಳೂರಿನಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಸ್ಪರ್ಧಿಸಿದ್ದಾರೆ. 2018ರಂದು ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ನಡೆದ 200 ಮೀಟರ್ ಓಟದಲ್ಲಿ ಬೆಳ್ಳಿಪದಕ, 2019ರ ಜೂ.10 ರಂದು ಹರಿಯಾಣದಲ್ಲಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಚಿನ್ನದಪದಕ ಪಡೆದಿದ್ದಾರೆ. ಹೀಗೆ ರಾಜ್ಯ, ರಾಷ್ಟ್ರ, ಸ್ಥಳೀಯಮಟ್ಟದ ಕ್ರೀಡೆಗಳಲ್ಲೂ ಭಾಗ ವಹಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
.

Translate »