ಅಪ್ರಾಪ್ತೆ ಅತ್ಯಾಚಾರ, ಕೊಲೆ ಪ್ರಕರಣ ಮೃತ ಬಾಲಕಿ ನಿವಾಸಕ್ಕೆ ಆರ್.ಧ್ರುವನಾರಾಯಣ್ ಭೇಟಿ
ಮೈಸೂರು

ಅಪ್ರಾಪ್ತೆ ಅತ್ಯಾಚಾರ, ಕೊಲೆ ಪ್ರಕರಣ ಮೃತ ಬಾಲಕಿ ನಿವಾಸಕ್ಕೆ ಆರ್.ಧ್ರುವನಾರಾಯಣ್ ಭೇಟಿ

November 19, 2018

ನಂಜನಗೂಡು: ಶುಕ್ರವಾರ ನಗರ ಸಮೀಪ ಚಾಮಲಾಪುರದ ಹುಂಡಿಯಲ್ಲಿ ದುಷ್ಕರ್ಮಿಗಳು ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಂಸದ ಆರ್.ಧ್ರುವ ನಾರಾಯಣ್ ಅವರು ಮೃತ ಬಾಲಕಿಯ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರಲ್ಲದೆ, ವೈಯಕ್ತಿಕವಾಗಿ ಧನ ಸಹಾಯ ಮಾಡಿದರು. ನಂತರ ಸುದ್ದಿಗಾರದೊಂದಿಗೆ ಮಾತನಾಡಿದ ಅವರು, ಪೊಲೀಸರು ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ, ಶೀಘ್ರದಲ್ಲಿಯೇ ಪ್ರಕರಣದ ಸತ್ಯಾಸತ್ಯತೆಯನ್ನು ಹೊರಗೆಳೆದು ಆರೋಪಿಗಳನ್ನು ಬಂಧಿಸಬೇಕು ಎಂದು ಸೂಚಿಸಿದ್ದೇನೆ. ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶಮೂರ್ತಿ, ಬ್ಲಾಕ್ ಅಧ್ಯಕ್ಷರಾದ ಹೆಚ್.ಎಸ್.ಮೂಗಶೆಟ್ಟಿ, ಪಿ.ಶ್ರೀನಿವಾಸ್. ಆರ್.ಮಹದೇವು, ನಗರಸಭಾ ಸದಸ್ಯ ನಿಂಗಪ್ಪ, ಗೋಳೂರು ಮುದ್ದು ಮಾದಶೆಟ್ಟಿ, ಹಗಿನವಾಳು ಅಂಕನಾಯ್ಕ, ಕುಮಾರ, ರಾಜು, ಸಿದ್ದಶೆಟ್ಟಿ, ಶಂಕರ, ದೇವರಾಜು, ಹೊಸಹಳ್ಳಿ ಗಣೇಶ್ ಇದ್ದರು.

Translate »