ಅಮೃತಭೂಮಿಯಲ್ಲಿ ಯಶಸ್ವಿಯಾಗಿ ನಡೆದ ‘ಯುವ ರೈತ ಕಾರ್ಯಾಗಾರ’
ಚಾಮರಾಜನಗರ

ಅಮೃತಭೂಮಿಯಲ್ಲಿ ಯಶಸ್ವಿಯಾಗಿ ನಡೆದ ‘ಯುವ ರೈತ ಕಾರ್ಯಾಗಾರ’

September 25, 2018

ರೈತ ಯುವ ವಿಭಾಗ ಸ್ಥಾಪನೆ ಸೇರಿ 6 ನಿರ್ಣಯ ಅಂಗೀಕಾರ
ಚಾಮರಾಜನಗರ: ರೈತ ಯುವ ವಿಭಾಗವನ್ನು ರಾಜ್ಯಾದ್ಯಂತ ಬಲವಾಗಿ ಮತ್ತು ಪರಿಣಾಮಕಾರಿಯಾಗಿ ಕಟ್ಟುವುದು ಸೇರಿದಂತೆ 6 ನಿರ್ಣಯ ಗಳನ್ನು ಅಮೃತಭೂಮಿಯಲ್ಲಿ ಮೂರು ದಿನಗಳ ಕಾಲ ನಡೆದ ರೈತ ಕಾರ್ಯಾ ಗಾರದಲ್ಲಿ ತೆಗೆದುಕೊಳ್ಳಲಾಯಿತು ಎಂದು ರೈತಸಂಘ ಮತ್ತು ಹಸಿರು ಸೇನೆ ಯುವ ಘಟಕದ ಸಂಚಾಲಕರಾದ ಮಹೇಶ್‍ಪಾಂಡೆ ಹಾಗೂ ಮಹೇಶ್‍ಗೌಡ ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಸಂಘ ಮತ್ತು ಹಸಿರುಸೇನೆಯ ಆಶ್ರಯದಲ್ಲಿ ಹೊಸ ತಲೆ ಮಾರಿನ ರೈತ ಚಳವಳಿ ಕಟ್ಟಲು ಚಾಮ ರಾಜನಗರ ತಾಲೂಕಿನ ಹೊಂಡರಬಾಳು ಗ್ರಾಮದ ಬಳಿ ಇರುವ ಅಮೃತಭೂಮಿಯಲ್ಲಿ ಮೂರು ದಿನಗಳ ಕಾಲ ಯುವ ರೈತ ಕಾರ್ಯಾ ಗಾರ ಆಯೋಜಿಸಿತ್ತು. ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ 6 ನಿರ್ಣಯ ಗಳನ್ನು ಕೈಗೊಳ್ಳಲಾಯಿತು. ಕಾರ್ಯಾ ಗಾರವು ಯಶಸ್ವಿಯಾಗಿ ನಡೆಯಿತು ಎಂದರು.

ವಲಯ ಮಟ್ಟದ ಸಂಚಾಲಕರು: ಹಂಗಾಮಿ ರಾಜ್ಯ ಸಮಿತಿಯಲ್ಲಿ ವಲಯ ಮಟ್ಟದ ಸಂಚಾಲಕರನ್ನು ಆಯ್ಕೆ ಮಾಡ ಲಾಗಿದ್ದು, ಮೈಸೂರು ವಲಯಕ್ಕೆ ಹರೀಶ್, ನವೀನ್, ಗಾಯಿತ್ರಿ, ಶಂಭುಲಿಂಗೇಗೌಡ, ವಸಂತಕುಮಾರಿ, ಬೆಂಗಳೂರು ವಲಯಕ್ಕೆ ಯತೀಶ್, ನಳಿನಿ ಮತ್ತು ನಿತೀಶ್, ಬೆಳ ಗಾವಿ ವಲಯಕ್ಕೆ ಮಹೇಶ್ ದೇಶಪಾಂಡೆ, ಯಶ್ವಂತ್, ಗುಲ್ಬರ್ಗ ವಲಯಕ್ಕೆ ದೇವೇಂದ್ರ ಗೌಡ, ಪೊಲೀಸ್ ಪಾಟೀಲ್, ದಾವಣಗೆರೆ ವಲಯಕ್ಕೆ ಮೆಹಬೂಬ್ ಮತ್ತು ಜ್ಯೋತಿ, ಬಳ್ಳಾರಿ, ಬೆಂಗಳೂರು ನಗರ ಮತ್ತು ಸಾಮಾ ಜಿಕ ಜಾಲತಾಣ ನಿರ್ವಹಣೆಗಾಗಿ, ನವಾಜ್, ಅಚ್ಚುತ್, ಕಮ್ರನ್, ಸಂಯೋಜಕರಾಗಿ ಮಹೇಶ್, ದೇಶಪಾಂಡೆ ಮತ್ತು ಯತೀಶ್ ಕುಮಾರ್ ಅವರು ನೇಮಕವಾಗಿದ್ದಾರೆ.

ಪ್ರಕಾಶ್ ರೈ ಬಲ: ಯುವ ರೈತ ಕಾರ್ಯಾ ಗಾರದ ಸಮಾರೋಪ ಸಮಾರಂಭದಲ್ಲಿ ಬಹುಭಾಷಾ ಚಿತ್ರನಟ ಪ್ರಕಾಶ್ ರೈ ಪಾಲ್ಗೊಂಡಿದ್ದು, ನಮಗೆ ಬಲ ಬಂದಂತಾ ಗಿದೆ ಎಂದು ಮಹೇಶ್‍ಗೌಡ ತಿಳಿಸಿದರು.
ನಿಮ್ಮೊಂದಿಗೆ ನಾನಿದ್ದೇನೆ. ಧೈರ್ಯವಾಗಿ ಚಳವಳಿಯಲ್ಲಿ ಪಾಲ್ಗೊಂಡು ಎಲ್ಲಾ ವಿಷಯ ದಲ್ಲಿ ನ್ಯಾಯ ಪಡೆಯುವಂತೆ ತಿಳಿಸಿದ್ದಾರೆ. ಇದು ನಮಗೆ ಹೆಚ್ಚಿನ ಬಲ ತಂದು ಕೊಟ್ಟಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಚಾಲಕ ರಾದ ಮಂಜುನಾಥ್, ಅಮಲಗುಂದಿ, ನಿತೀಶ್, ಕೋಲಾರ ನಳಿನಿ, ಮಂಗಳೂರು ಗಾಯಿತ್ರಿ, ಶಂಭುಲಿಂಗೇಗೌಡ, ಬೊಕ್ಕಹಳ್ಳಿ ನಂಜುಂಡಸ್ವಾಮಿ ಹಾಜರಿದ್ದರು.

-: ನಿರ್ಣಯಗಳು :-

  •  ರೈತ ಯುವ ವಿಭಾಗವನ್ನು ರಾಜ್ಯಾದ್ಯಂತ ಬಲವಾಗಿ ಮತ್ತು ಪರಿಣಾಮ ಕಾರಿಯಾಗಿ ಸಂಘಟಿಸುವುದು.
  •  6 ತಿಂಗಳ ಕಾಲ ವ್ಯವಸ್ಥಿತ ತಯಾರಿ ನಡೆಸಿ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ತಂಡ ಗಳನ್ನು ಹಾಗೂ ಎಲ್ಲಾ ಜಿಲ್ಲೆಗಳಲ್ಲಿ ಹಂಗಾಮಿ ಸಮಿತಿಗಳನ್ನು ರಚಿಸುವುದು.
  •  2019 ಫೆಬ್ರವರಿ 13ರಂದು ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಜನ್ಮದಿನದಂದು ರಾಜ್ಯ ರೈತ ಸಂಘದ ಅಡಿಯಲ್ಲಿ ಅದರ ಅಂಗ ಸಂಘಟನೆಯಾಗಿ ಉದ್ಘಾಟಿಸಲು ತೀರ್ಮಾನಿಸಲಾಯಿತು.
  • ಮೊದಲ ಹಂತದಲ್ಲಿ ಎಲ್ಲಾ ವಿಭಾಗಮಟ್ಟವನ್ನು ರಾಜ್ಯ ಶಿಬಿರದ ಮಾದರಿ ಯಲ್ಲಿ ಶಿಬಿರಗಳನ್ನು ಆಯೋಜಿಸುವುದು.
  •  ರಾಜ್ಯದ ವಿವಿಧ ಗ್ರಾಮಗಳಲ್ಲಿ ಉದ್ಯೋಗ ಸೃಷ್ಟಿಯ ಸಾಧ್ಯತೆಗಳು ಮತ್ತು ರಚನಾತ್ಮಕ ಕಾರ್ಯಕ್ರಮಗಳ ಸಾಧ್ಯತೆಗಳನ್ನು ಗುರುತಿಸಿ ಅದನ್ನು ಜಾರಿ ಮಾಡಲು ಬೇಕಾದ ತಯಾರಿಗಳನ್ನು ನಡೆಸುವುದು.
  •  ಗ್ರಾಮೀಣ ಭಾಗದ ಯುವಜನರನ್ನು ಸಂಘಟಿಸುವುದಲ್ಲದೇ ರಾಜ್ಯದ ನಗರಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಆಸಕ್ತರು ಪರಿಣಿತರು ಮತ್ತು ಸಂಘಟನೆಗಳನ್ನು ನಮ್ಮ ಬಳಗವಾಗಿ ಒಳಗೊಳ್ಳುವ ಪ್ರಯತ್ನ ಮಾಡಲು ನಿರ್ಧರಿಸಲಾಯಿತು.

Translate »