ಈ ಬಾರಿಯಾದರೂ ‘ಕೈ’ ಕೋಟೆ ಚಾಮರಾಜನಗರದಲ್ಲಿ ಅರಳುವುದೇ ‘ಕಮಲ’
ಚಾಮರಾಜನಗರ

ಈ ಬಾರಿಯಾದರೂ ‘ಕೈ’ ಕೋಟೆ ಚಾಮರಾಜನಗರದಲ್ಲಿ ಅರಳುವುದೇ ‘ಕಮಲ’

March 20, 2019

ಚಾಮರಾಜನಗರ: ಚಾ.ನಗರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಇದುವರೆವಿಗೆ 14 ಚುನಾ ವಣೆಗಳು ನಡೆದಿದ್ದು, ಯಾವ ಚುನಾವಣೆಗಳಲ್ಲೂ ಬಿಜೆಪಿ ಜಯ ಕಂಡಿಲ್ಲ. ಈ ಬಾರಿಯಾದರೂ ಕಮಲ ಅರಳುವುದೇ ಎಂಬ ಕುತೂಹಲ ಮೂಡಿದೆ.

ಮೊದಲೆರಡು ಚುನಾವಣೆಗಳಲ್ಲಿ ಚಾಮರಾಜ ನಗರ ಲೋಕಸಭಾ ಕ್ಷೇತ್ರ ಮೈಸೂರು ಲೋಕ ಸಭಾ ದ್ವಿಸದಸ್ಯ ಕ್ಷೇತ್ರದ ವ್ಯಾಪ್ತಿಗೆ ಸೇರಿತ್ತು. 1962 ರಲ್ಲಿ ಚಾಮರಾಜನಗರ ಪ್ರತ್ಯೇಕ ಮೀಸಲು ಲೋಕಸಭಾ ಕ್ಷೇತ್ರವಾಯಿತು. ಅಲ್ಲಿಂದ(1962) 2014ರ ಚುನಾವಣೆವರೆಗೆ 14 ಚುನಾವಣೆಗಳು ನಡೆದಿದ್ದು, ಒಂದೇ ಒಂದು ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿಲ್ಲ.

ಇದುವರೆಗೆ ನಡೆದಿರುವ 14 ಚುನಾವಣೆಯಲ್ಲಿ 10 ಬಾರಿ ಕಾಂಗ್ರೆಸ್, 2 ಬಾರಿ ಜನತಾದಳ, ಇನ್ನುಳಿದ 2 ಚುನಾ ವಣೆಯಲ್ಲಿ ಜೆಡಿಯು 1 ಬಾರಿ, ಜೆಡಿಎಸ್ ಒಂದು ಬಾರಿ ಜಯಗಳಿಸಿದೆ. ಹೀಗಾಗಿ ಈ ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆ ಎಂದೇ ಕರೆಯಲಾಗುತ್ತದೆ.
1962ರಲ್ಲಿ ಈ ಕ್ಷೇತ್ರ ಅಸ್ತಿತ್ವಕ್ಕೆ ಬಂದರೂ ಸಹ 1991ರ ಚುನಾವಣೆಯಿಂದ ಮಾತ್ರ ಬಿಜೆಪಿ ಅಭ್ಯರ್ಥಿ ಹಾಗೂ ಬೆಂಬಲಿತ ಅಭ್ಯರ್ಥಿ ಸ್ಪರ್ಧಿ ಸಿದ್ದಾರೆ. 1991ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎನ್.ಶಿವಲಿಂಗಯ್ಯ ಸ್ಪರ್ಧಿಸಿ ಸೋತರು. 1996ರ ಚುನಾವಣೆಯಲ್ಲೂ ಎನ್. ಶಿವಲಿಂಗಯ್ಯ ಕಮಲದ ಗುರುತಿನಿಂದ ಸ್ಪರ್ಧಿ ಸಿದರು. ಆಗಲೂ ಸಹ ಪರಾಬವಗೊಂಡರು.

1998ರ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರವನ್ನು ಬಿಜೆಪಿಯು ಲೋಕಶಕ್ತಿಗೆ ಬಿಟ್ಟು ಕೊಟ್ಟಿತ್ತು. ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಸುಶೀಲಾ ಕೇಶವಮೂರ್ತಿ ಸ್ಪರ್ಧಿಸಿ 75.165 ಮತಗಳನ್ನು ಪಡೆದು ಸೋತರು. 1999ರ ಚುನಾ ವಣೆಯಲ್ಲಿ ಜೆಡಿಯುಗೆ, 2004 ಚುನಾವಣೆ ಯಲ್ಲೂ ಜೆಡಿಯುಗೆ ಕ್ಷೇತ್ರವನ್ನು ಬಿಟ್ಟುಕೊಡಲಾಯಿತು.

2009ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯಾಗಿ ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಸ್ಪರ್ಧಿಸಿದ್ದರು. ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್‍ಗೆ ಪ್ರಬಲ ಪೈಪೋಟಿ ನೀಡಿದ್ದರು. 4002 ಮತಗಳ ಅಂತರ ದಿಂದ ಎ.ಆರ್.ಕೃಷ್ಣಮೂರ್ತಿ ಸೋಲಿಸುವ ಮೂಲಕ ಕ್ಷೇತ್ರದಲ್ಲಿ ಕಮಲ ಅರಳುವುದನ್ನು ಸನಿಹಕ್ಕೆ ತಂದಿದ್ದರು.
2014ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯಾಗಿ ಮತ್ತೆ ಎ.ಆರ್.ಕೃಷ್ಣಮೂರ್ತಿ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್ ಎದುರು 1, 14,182 ಮತ ಗಳ ಭಾರೀ ಅಂತರದಿಂದ ಕೃಷ್ಣ ಮೂರ್ತಿ ಸೋತರು.

ಕ್ಷೇತ್ರದಲ್ಲಿ ಒಮ್ಮೆಯೂ ಜಯ ಗಳಿಸದ ಬಿಜೆಪಿ ಮೂರು ಚುನಾವಣೆಗಳಲ್ಲಿ ಮಾತ್ರ ಗಮನಾರ್ಹ ಸಾಧನೆ ಮಾಡಿದ್ದು, ಈ ಚುನಾವಣೆಯಲ್ಲಿ ಪರಿಸ್ಥಿತಿ ಬದಲಾಗಿದೆ. ನರೇಂದ್ರ ಮೋದಿ ಅಲೆ ಇದ್ದು, ಬಿಜೆಪಿ ಚೇತರಿಕೆ ಕಂಡಿದೆ. ಚಾಮರಾ ಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳ ಪಡುವ 8 ವಿಧಾನಸಭಾ ಕ್ಷೇತ್ರಗಳಲ್ಲಿ ಇಬ್ಬರು ಶಾಸಕರನ್ನು(ಗುಂಡ್ಲುಪೇಟೆ ಮತ್ತು ನಂಜನ ಗೂಡು) ಬಿಜೆಪಿ ಹೊಂದಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪ್ರಬಲ ಎದುರಾಳಿ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಅದರಂತೆ ಚಾಮರಾಜನಗರ ಕ್ಷೇತ್ರದಲ್ಲೂ ಕಾಂಗ್ರೆಸ್‍ಗೆ ಪ್ರಬಲ ಪೈಪೋಟಿ ನೀಡುವ ಪಕ್ಷ ಬಿಜೆಪಿ, ಈ ಪಕ್ಷದಿಂದ ಕೇಂದ್ರದ ಮಾಜಿ ಸಚಿವರು, ಹಿರಿಯ ರಾಜಕಾರಣಿಯೂ ಆದ ವಿ.ಶ್ರೀನಿ ವಾಸ್‍ಪ್ರಸಾದ್ ಸ್ಪರ್ಧಿಸುವ ಮೂಲಕ ಪಕ್ಷದ ಮುಖಂ ಡರು, ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದ್ದಾರೆ. ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳುವುದೋ ಅಥವಾ ‘ಕೈ’ ತನ್ನ ಅಧಿಪತ್ಯ ಮುಂದುವರೆಸು ತ್ತದೋ ಕಾದು ನೋಡಬೇಕಾಗಿದೆ.

Translate »