`ಕಾವಾ’ದಲ್ಲಿ 2 ದಿನ ವಾರ್ಷಿಕ ಚಿತ್ರಕಲಾ ಪ್ರದರ್ಶನ
ಮೈಸೂರು

`ಕಾವಾ’ದಲ್ಲಿ 2 ದಿನ ವಾರ್ಷಿಕ ಚಿತ್ರಕಲಾ ಪ್ರದರ್ಶನ

March 14, 2020

ಮೈಸೂರು,ಮಾ.13(ಎಂಟಿವೈ)- ಮೈಸೂರಿನ ಸಿದ್ದಾರ್ಥನಗರದಲ್ಲಿರುವ `ಕಾವಾ’ ಕಾಲೇಜಿ ನಲ್ಲಿ ಶುಕ್ರವಾರ ಆರಂಭವಾದ 2 ದಿನಗಳ ವಾರ್ಷಿಕ ಚಿತ್ರಕಲಾ ಪ್ರದರ್ಶನದಲ್ಲಿ 400ಕ್ಕೂ ಹೆಚ್ಚು ಬಗೆಯ ಕಲಾಕೃತಿಗಳ ಅನಾವರಣವಾಯಿತು.

ಈ ಬಾರಿ ಕಾಲೇಜಿನ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಪ್ರದರ್ಶಿಸದೇ ಒಟ್ಟಾಗಿ ಒಂದು ವರ್ಷದಿಂದ ರಚಿಸಿದ ಚಿತ್ರ ಗಳು, ಕೆತ್ತನೆಗಳು, ಛಾಯಾಚಿತ್ರಗಳು, ಗ್ರಾಫಿಕ್ಸ್ ಕಲೆಯನ್ನು ಪ್ರದರ್ಶಿಸಿ ಗಮನ ಸೆಳೆದಿದ್ದಾರೆ.

ಕಾವಾ ಪ್ರಭಾರ ಡೀನ್ ಆದ ಅಪರ ಜಿಲ್ಲಾಧಿ ಕಾರಿ ಪೂರ್ಣಿಮಾ ಅವರು, ಕಪ್ಪು ಹಲಗೆಯ ಮೇಲೆ `ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ’ ಎಂದು ಬರೆಯುವ ಮೂಲಕ ಶುಕ್ರವಾರ ಬೆಳಿಗ್ಗೆ ಕಲಾ ಪ್ರದರ್ಶನಕ್ಕೆ ಚಾಲನೆ ನೀಡಿದರು.

2-Day Annual Painting Exhibition at Cava-1

ಬಳಿಕ ಪೇಂಟಿಂಗ್ ವಿಭಾಗ, ಸ್ಕಲ್‍ಪ್ಚರ್, ಗ್ರಾಫಿಕ್ಸ್, ಆರ್ಟ್ ಹಿಸ್ಟರಿ, ಅಪ್ಲೈಡ್ ಆರ್ಟ್. ಫೋಟೊಗ್ರಫಿ ಮತ್ತು ಪೊಟೋ ಜರ್ನಲಿಸಂ ವಿದ್ಯಾರ್ಥಿಗಳು ಪ್ರದರ್ಶಿಸಿದ್ದ ಚಿತ್ರ ಹಾಗೂ ಕಲಾಕೃತಿಗಳನ್ನು ವೀಕ್ಷಿಸಿದರು.

ಕಲಿಕಾ ಪ್ರಕ್ರಿಯೆಯಲ್ಲಿ ಹೊಸತನ ಇರಲಿ. ಸದಾ ಹೊಸ ಹೊಸ ಪ್ರಯೋಗ ಮಾಡಬೇಕು. ಆ ಮೂಲಕ ಕಲೆಯನ್ನು ಉಳಿಸಿ, ಬೆಳೆಸÀುವಂತೆ ಕಿವಿಮಾತು ಹೇಳಿದರು. ಕಾವಾ ಆಡಳಿತಾಧಿಕಾರಿ ವಿಜಯರಾವ್, ಫೋಟೊಗ್ರಫಿ-ಫೋಟೊ ಜರ್ನ ಲಿಸಂ ವಿಭಾಗದ ಮುಖ್ಯಸ್ಥೆ ಪ್ರೀತಿ ಕಪೂರ್ ಮತ್ತಿತರರು ಕಾರ್ಯಕ್ರಮದಲ್ಲಿದ್ದರು

Translate »