ಚಾಮರಾಜನಗರ: ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆ ಗಳನ್ನು ಭರ್ತಿ ಮಾಡುವಂತೆ ರಾಜ್ಯ ಸರ್ಕಾ ರವನ್ನು ಒತ್ತಾಯಿಸಿ ರಾಜ್ಯವ್ಯಾಪಿ ಹೋರಾಟ ನಡೆಸಲು ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ತೀರ್ಮಾನಿಸಿದೆ.
ಇಂದಿಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತ ನಾಡಿದ ವೇದಿಕೆ ಅಧ್ಯಕ್ಷ ರವಿಕೃಷ್ಣಾರೆಡ್ಡಿ, ರಾಜ್ಯ ಸರ್ಕಾರದಲ್ಲಿ ಸುಮಾರು 3 ಲಕ್ಷ ಹುದ್ದೆ ಗಳು ಖಾಲಿ ಇದೆ. ಈ ಹುದ್ದೆಗಳನ್ನು ತುಂಬು ವಂತೆ ಒತ್ತಾಯಿಸಿ ವೇದಿಕೆಯು ರಾಜ್ಯಾ ದ್ಯಂತ ಹೋರಾಟ ನಡೆಸಲಿದೆ ಎಂದರು.
ದೇಶದಲ್ಲಿ ಹಲವು ಜಟಿಲ ಸಮಸ್ಯೆಗ ಳಿದ್ದು, ಅದರಲ್ಲಿ ನಿರುದ್ಯೋಗ ಸಮಸ್ಯೆ ಬಹಳ ಗಂಭೀರವಾದದ್ದು, ಒಂದು ಕಡೆ ಸರ್ಕಾರಿ ನೌಕರಿಗಳು ಕಡಿಮೆಯಾಗು ತ್ತಿದ್ದರೆ, ಇನ್ನೊಂದು ಕಡೆ ಖಾಸಗಿ ವಲ ಯದಲ್ಲಿ ಕೃತಕ ಬುದ್ದಿಮತ್ತೆ ಮತ್ತು ಆಟೋ ಮೇಷನ್ ಅಳವಡಿಕೆಯ ಕಾರಣದಿಂದಾಗಿ ಅಲ್ಲಿಯೂ ಉದ್ಯೋಗಗಳು ಕಡಿತವಾಗು ತ್ತಿದೆ. ಭಾರತ ದೇಶಾದ್ಯಂತ ಸುಮಾರು 26 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಉಳಿ ದಿವೆ ಎಂಬ ಮಾಹಿತಿ ಇದೆ. ರಾಜ್ಯ ಸರ್ಕಾರ ದಲ್ಲಿಯೇ ಸುಮಾರು 3 ಲಕ್ಷ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ತುಂಬಿದರೆ ಸರ್ಕಾರದ ಮೇಲೆ ಆರ್ಥಿಕ ಹೊರೆ ಬೀಳು ತ್ತದೆ ಎಂದು ರಾಜ್ಯ ಸರ್ಕಾರ ನೇಮಕಾತಿ ಗಳನ್ನು ಮಾಡುತ್ತಿಲ್ಲ ಎಂದು ಅವರು ಆಪಾ ದಿಸಿದರು. ಸರ್ಕಾರದಿಂದ ದುಂದುವೆಚ್ಚ, ಆದಾಯ ಸೋರಿಕೆ ಹಾಗೂ ಭ್ರಷ್ಟಾಚಾರ ವನ್ನು ನಿಯಂತ್ರಿಸುವ ಕೆಲಸವೂ ಪರಿಣಾಮ ಕಾರಿಯಾಗಿ ಆಗುತ್ತಿಲ್ಲ. ಮತ್ತು ಖಾಲಿ ಉಳಿ ದಿರುವ ಹುದ್ದೆಗಳ ಕಾರಣಕ್ಕಾಗಿ ಜನ ರಿಗೂ ಸರಿಯಾಗಿ ಆಡಳಿತ ಸೇವೆಗಳು ಸಿಗುತ್ತಿಲ್ಲ ಎಂದರು.
ಯಾವುದೇ ಸರ್ಕಾರಿ ಕಚೇರಿಗೆ ಹೋದರೂ ಈ ಪೋಸ್ಟ್‍ಗೆ ಇನ್ನೂ ಯಾರು ಬಂದಿಲ್ಲ ಎಂಬ ಉತ್ತರ ಬರುತ್ತದೆ ಎಂದು ರವಿಕೃಷ್ಣಾ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರಗಳು ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡ ಬೇಕು. ಖಾಸಗಿ ವಲಯದಲ್ಲೂ ದೊಡ್ಡ ಮಟ್ಟದ ಉದ್ಯೋಗ ಸೃಷ್ಟಿಗೆ ಪೂರಕವಾದ ವಾತಾವರಣ ನಿರ್ಮಿಸಬೇಕು ಎಂದು ಒತ್ತಾ ಯಿಸಿದ ಅವರು, ರಾಜ್ಯದ ನಿರುದ್ಯೋಗಿ ಯುವಕ, ಯುವತಿಯರಿಗೆ ಈ ಕೂಡಲೇ ಮಾಸಿಕ ನಿರುದ್ಯೋಗ ಭತ್ಯೆ ನೀಡುವ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ವೇದಿಕೆಯ ಮುಖಂಡರಾದ ಹೆಚ್.ಎಸ್. ಲಿಂಗೇಗೌಡ, ಎನ್.ಮೂರ್ತಿ, ಸಿ.ಎನ್. ದೀಪಕ್, ಪ್ರಭಾಕರ್, ಮುಷ್ತಾಕ್ ಅಹ್ಮದ್ ಸುದ್ದಿಗೋಷ್ಟಿಯಲ್ಲಿ ಹಾಜರಿದ್ದರು.