ಚಾಮುಂಡೇಶ್ವರಿಯಲ್ಲಿ ಬಿಜೆಪಿಯಿಂದ ಲಕ್ಷ್ಮೀಗೌಡ, ಲಕ್ಷ್ಮೀದೇವಿ ಪ್ರಬಲ ಆಕಾಂಕ್ಷಿಗಳು
ಮೈಸೂರು

ಚಾಮುಂಡೇಶ್ವರಿಯಲ್ಲಿ ಬಿಜೆಪಿಯಿಂದ ಲಕ್ಷ್ಮೀಗೌಡ, ಲಕ್ಷ್ಮೀದೇವಿ ಪ್ರಬಲ ಆಕಾಂಕ್ಷಿಗಳು

April 19, 2018

ಮೈಸೂರುಮೈಸೂರಿನ ಹೈವೋಲ್ಟೇಜ್ ಕ್ಷೇತ್ರ ಎನಿಸಿರುವ ಚಾಮುಂಡೇ ಶ್ವರಿಗೆ ಮಹಿಳಾ ಅಭ್ಯರ್ಥಿ ಯನ್ನು ಪಕ್ಷದಿಂದ ಕಣಕ್ಕಿಳಿಸಲು ಭಾರತೀಯ ಜನತಾ ಪಾರ್ಟಿ ಮುಂದಾ ಗಿದೆ. ಮುಖ್ಯಮಂತ್ರಿ ಸಿದ್ದ ರಾಮಯ್ಯ ಹಾಗೂ ಜೆಡಿಎಸ್ ಹಾಲಿ ಪ್ರಭಾವಿ ಶಾಸಕ ಜಿ.ಟಿ.ದೇವೇಗೌಡ ಅವರ ಹಣಾಹಣಿ ನಡುವೆ ಬಿಜೆಪಿ ಮಹಿಳಾ ಅಭ್ಯರ್ಥಿ ಯನ್ನು ಕಣಕ್ಕಿಳಿಸಿ, ಕ್ಷೇತ್ರದ ಮಹಿಳಾ ಮತಗಳನ್ನು ಸೆಳೆ ಯಲು ರಣತಂತ್ರ ರೂಪಿಸಿದೆ. ಮೈಸೂರು ನಗರ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀದೇವಿ ಇಲ್ಲವೇ ಪಕ್ಷದ ನಿಷ್ಠಾವಂತ ಕಾರ್ಯ ಕರ್ತರಾದ ಲಕ್ಷ್ಮೀಗೌಡ, ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಸಂಸದೆ ಹಾಗೂ ಪಕ್ಷದ ಪ್ರಭಾವಿ ನಾಯಕಿ ಶೋಭಾ ಕರಂದ್ಲಾಜೆ ಅವರ ಬೆಂಬಲದಿಂದ ಟಿಕೆಟ್ ಗಿಟ್ಟಿಸಲು ಲಕ್ಷ್ಮಿದೇವಿ ಪ್ರಯತ್ನಿಸುತ್ತಿದ್ದು, ತಾನು ಮೂಲತಃ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಗೆ ಬರುವ ಶಾರದಾದೇವಿನಗರದ ನಿವಾಸಿಯಾಗಿದ್ದು, ಕ್ಷೇತ್ರದ ಹಲವು ಗ್ರಾಮಗಳಲ್ಲಿ ನಮ್ಮ ಸಂಬಂಧಿಕರು ಹೆಚ್ಚಾಗಿದ್ದರೆ, ಅತೀ ಹೆಚ್ಚು ಮಹಿಳಾ ಮತದಾರಿರುವುದರಿಂದ ಸಿದ್ದರಾಮಯ್ಯ ವಿರುದ್ಧ ತಾನು ಅತೀ ಹೆಚ್ಚು ಮತ ಗಳಿಸುವೆ ಎಂದು ಅವರು ಬಿಜೆಪಿ ವರಿಷ್ಠರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸಿದ್ದರಾಮಯ್ಯರಿಗೆ ಮಹಿಳಾ ಅಭ್ಯರ್ಥಿಯಿಂದಲೇ ಸೋಲು ಎಂದು ಜ್ಯೋತಿಷಿ ಯೊಬ್ಬರು ಭವಿಷ್ಯ ನುಡಿದಿರುವುದರಿಂದ ತಾನು ಗೆಲ್ಲುವುದು ಖಚಿತ. ವರಿಷ್ಠರು ಟಿಕೆಟ್ ಕೊಡುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂದು ಲಕ್ಷ್ಮೀದೇವಿ `ಮೈಸೂರು ಮಿತ್ರನಿಗೆ ತಿಳಿಸಿದ್ದಾರೆ. ಮತ್ತೊಂದೆಡೆ ಪಕ್ಷದ ಸಕ್ರಿಯ ಕಾರ್ಯಕರ್ತರಾದ ಲಕ್ಷ್ಮೀಗೌಡ ಸಹ ಚಾಮುಂಡೇಶ್ವರಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು, ಟಿಕೆಟ್ ಗಿಟ್ಟಿಸಲು ಇನ್ನಿಲ್ಲದ ಹರಸಾಹಸ ಮಾಡುತ್ತಿದ್ದಾರೆ. ತಾವೂ ಸಹ ಚಾಮುಂಡೇಶ್ವರಿ ಕ್ಷೇತ್ರದವರಾ ಗಿದ್ದು, ಪಕ್ಷದಲ್ಲಿ ಸಕ್ರಿಯವಾಗಿ ಕಳೆದ 6 ವರ್ಷಗಳಿಂದ ಸಂಘಟನೆಯಲ್ಲಿ ತೊಡಗಿದ್ದೇನೆ. ಹೊರಗಿನಿಂದ ಅಭ್ಯರ್ಥಿಗಳನ್ನು ಕರೆತರುವ ಬದಲು ತನಗೆ ಟಿಕೆಟ್ ಕೊಡುವಂತೆ ಲಕ್ಷ್ಮೀಗೌಡ ಅವರು ಒತ್ತಾಯಿಸಿದ್ದಾರೆ. ಇವರು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದು, ಕೇಂದ್ರೀಯ ಚಲನ ಚಿತ್ರ ಸೆನ್ಸಾರ್ ಮಂಡಳಿ ಸದಸ್ಯರೂ ಆಗಿದ್ದಾರೆ.

ಇಬ್ಬರೂ ಸಹ ಒಕ್ಕಲಿಗ ಸಮುದಾಯದವರಾಗಿದ್ದು, ಚಾಮುಂಡೇಶ್ವರ ಕ್ಷೇತ್ರದ ಒಕ್ಕಲಿಗರು ಹಾಗೂ ಮಹಿಳಾ ಮತದಾರರನ್ನು ಸೆಳೆಯುತ್ತೇವೆ ಎಂಬ ಭರವಸೆಯಲ್ಲಿ ಸ್ಪರ್ಧೆಗೆ ಮುಂದಾಗಿದ್ದಾರೆ. ಈವರೆಗೆ ಅರುಣ್ಕುಮಾರ್ಗೌಡ, ಅಪ್ಪಣ್ಣ, ಜಗದೀಶಗೌಡ, ಮಾರ್ಬಳ್ಳಿ ಮೂರ್ತಿ ಇತರರ ಹೆಸರುಗಳು ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದವು. ಇದೀಗ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಸ್ಥಳೀಯ ಮಹಿಳಾ ಮತದಾರರತ್ತ ಬಿಜೆಪಿ ಗಮನ ಹರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

 

Translate »