ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಜೊತೆ ವಿಜಯೇಂದ್ರ ಮಾತುಕತೆ!
ಮೈಸೂರು

ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಜೊತೆ ವಿಜಯೇಂದ್ರ ಮಾತುಕತೆ!

March 24, 2022

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಡೆ ಮತ್ತೆ ನಿಗೂಢ…!!

  • ಕುಟುಂಬ ರಾಜಕಾರಣಕ್ಕೆ ಮೋದಿ ವಿರೋಧ
  • ವಿಜಯೇಂದ್ರರಿಗೆ ಸ್ಥಾನಮಾನ ಇನ್ನು ಅನುಮಾನ
  • ಸಮಯವರ್ತಿ ನಿರ್ಧಾರ ಕೈಗೊಳ್ಳಲು ಬಿಎಸ್‌ವೈ ಲೆಕ್ಕಾಚಾರ

ಬೆಂಗಳೂರು,ಮಾ.೨೩(ಕೆಎAಶಿ)-ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜ ಯೇಂದ್ರ ಅವರು ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಅವ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜ್ಯ ರಾಜಕೀಯ ದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ಇಬ್ಬರು ಮಾತುಕತೆ ನಡೆ ಸಿರುವುದು ಹಾಗೂ ಯಡಿಯೂ ರಪ್ಪ ಅವರ ಮುಂದಿನ ರಾಜಕೀಯ ನಡೆ ಬಗ್ಗೆ ಕುತೂಹಲ ಮೂಡಿಸಿದೆ.

ವಿಜಯೇಂದ್ರ ಅವರು ಪ್ರಶಾಂತ್ ಕಿಶೋರ್ ಅವರನ್ನು ಕಳೆದ ವಾರ ದೆಹಲಿಯಲ್ಲೂ, ಆ ನಂತರ ಹೈದ ರಾಬಾದ್‌ನಲ್ಲಿರುವ ಅವರ ಕೇಂದ್ರ ಕಚೇರಿ ಯಲ್ಲೂ ಭೇಟಿ ಮಾಡಿ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬAಧಿಸಿ ದಂತೆ ಸಮಾಲೋಚನೆ ನಡೆಸಿದ್ದಾರೆ.

ಚುನಾವಣಾ ಸಮೀಕ್ಷೆ ಮತ್ತು ಅಭ್ಯರ್ಥಿಗಳ ಗೆಲುವಿನ ಮಾನದಂಡ ಮತ್ತಿತರ ಪೂರ್ಣ ವರದಿಯನ್ನು ನೀಡಲು ಪ್ರಶಾಂತ್ ಸಮ್ಮತಿಸಿದ್ದಾರೆ. ಸಮೀಕ್ಷೆಗೆ ಅವರು ನಿಗದಿಪಡಿಸಿರುವ ಶುಲ್ಕವನ್ನು ಭರಿಸಲು ವಿಜಯೇಂದ್ರ ಸಮ್ಮತಿಸಿದ್ದಾರೆ ಎನ್ನಲಾಗಿದೆ.
ಕರ್ನಾಟಕ ರಾಜ್ಯ ವಿಧಾನಸಭೆಗೆ ಏಪ್ರಿಲ್-ಮೇ ೨೦೨೩ರ ವೇಳೆಗೆ ಚುನಾವಣೆ ನಡೆಯಬೇಕು, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅವಧಿಗೂ ಮುನ್ನವೇ ಚುನಾವಣೆ ನಡೆಯಬಹುದು. ನೀವು ನನ್ನ ಸಹಕಾರ ಪಡೆಯುವುದಾದರೆ, ತಕ್ಷ ಣವೇ ತೀರ್ಮಾನ ಕೈಗೊಳ್ಳಿ. ಅಲ್ಪಾವಧಿಯಲ್ಲಿ ನಮ್ಮ ಕಾರ್ಯವನ್ನು ಮುಗಿಸಬೇಕಾಗುತ್ತದೆ, ನಿಮ್ಮ ಅಂತಿಮ ತೀರ್ಮಾನ ತಿಳಿಸಿ ಎಂದು ವಿಜಯೇಂದ್ರ ಅವರಿಗೆ ಪ್ರಶಾಂತ್ ಹೇಳಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಇಳಿದ ನಂತರ ಪಕ್ಷ ಅವರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತ್ರ ಯಡಿಯೂರಪ್ಪ ಅವರ ಸಲಹೆ-ಸೂಚನೆ ಪಡೆಯು ತ್ತಿದ್ದರೂ ಅವರ ಪುತ್ರ ವಿಜಯೇಂದ್ರ ಅವರಿಗೆ ಮಂತ್ರಿಮAಡಲ ದಲ್ಲಿ ಅವಕಾಶ ಮಾಡಿಕೊಡಲು ಅವರಿಂದ ಸಾಧ್ಯವಾಗುತ್ತಿಲ್ಲ.

ವಿಜಯೇಂದ್ರ ಅವರಿಗೆ ಅವಕಾಶ ಮಾಡಿಕೊಡುವ ಉದ್ದೇಶ ದಿಂದಲೇ ವರಿಷ್ಠರ ಅನುಮತಿ ಪಡೆಯಲು ಎರಡು ಬಾರಿ ದೆಹಲಿಗೆ ಹೋಗಿಬಂದರೂ ಏನೂ ಪ್ರಯೋಜನವಾಗಲಿಲ್ಲ.

ಯಡಿಯೂರಪ್ಪ ಮಾತ್ರ ಈ ಅವಧಿಯಲ್ಲೇ ತಮ್ಮ ಪುತ್ರ ನನ್ನು ಮಂತ್ರಿ ಮಾಡಲು ತಮ್ಮ ಎಲ್ಲಾ ರಾಜಕೀಯ ದಾಳಗಳನ್ನು ಬಳಸಿದ್ದಾರೆ. ಆದರೂ ಪ್ರಯೋಜನವಾಗಲಿಲ್ಲ. ಇದು ಅವರಿಗೆ ಸಿಟ್ಟು ತರಿಸಿದೆ. ಹಾಗೆಂದು ಯಾವುದೇ ದುಡುಕಿನ ನಿರ್ಧಾರ ಗಳನ್ನು ಕೈಗೊಂಡಿಲ್ಲ. ಚುನಾವಣೆಯಲ್ಲೂ ತಮ್ಮ ಪುತ್ರನಿಗೆ ಸ್ಫರ್ಧಿಸಲು ಅವಕಾಶ ನೀಡುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ. ದೆಹಲಿ ನಾಯಕರು ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ವಿಜಯೇಂದ್ರ ತಮ್ಮ ತಂದೆಗೆ ವಿವರಿಸಿದ್ದಾರೆ, ನಾವು ರಾಜಕೀಯವಾಗಿ ಉಳಿಯಬೇಕಾದರೆ ಕೆಲವು ದೃಢ ನಿರ್ಧಾರ ಕೈಗೊಳ್ಳಬೇಕು ಎಂದಿದ್ದಾರೆ.

ಕರ್ನಾಟಕದ ಮಟ್ಟಿಗೆ ಬಿಜೆಪಿಯಲ್ಲಿ ಜನ ಬೆಂಬಲ ಮತ್ತು ಮಠಗಳ ಬೆಂಬಲ ಇರು ವುದು ನಿಮಗೆ ಮಾತ್ರ. ನೀವಿಲ್ಲದೆ, ಪಕ್ಷ ಚುನಾವಣೆ ಎದುರಿಸಿದಾಗ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಚುನಾವಣೆಗೆ ನಮ್ಮ ಬೆಂಬಲಿತ ಅಭ್ಯರ್ಥಿಗಳಿಗೆ ಹೆಚ್ಚಿನ ಟಿಕೆಟ್ ಕೊಡಿಸ ಬೇಕು. ಅದು ಇಂದಿನ ಪರಿಸ್ಥಿತಿಯಲ್ಲಿ ಅಸಾಧ್ಯ ಎಂಬುದು ಇಬ್ಬರಿಗೂ ತಿಳಿದಿದೆ.

ನಾವು ಚುನಾವಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳೋಣ. ಪ್ರಶಾಂತ್ ಕಿಶೋರ್ ಅವರಿಗೆ ಯಾವುದೇ ತುರ್ತು ಚುನಾವಣಾ ಸಮೀಕ್ಷಾ ಕಾರ್ಯ ಇಲ್ಲ. ನಾವು ಅವರಿಂದ ಒಂದು ವರದಿಯನ್ನು ಸಿದ್ಧ ಮಾಡಿಟ್ಟುಕೊಂಡಿರೋಣ. ಇದು ನಮಗೆ ಕೊನೆ ಗಳಿಗೆಯಲ್ಲಿ ನೆರವಾಗಬಹುದು ಎಂದು ಹೇಳಿ ತಮ್ಮ ತಂದೆಯ ಅನುಮತಿ ಪಡೆದು ಪ್ರಶಾಂತ್ ಅವರೊಂದಿಗೆ ಸಮಾಲೋಚಿಸಿದ್ದಾರೆ. ಪ್ರಧಾನಿ ಮೋದಿ ರಾಷ್ಟç ರಾಜಕಾರಣ ಪ್ರವೇಶಿ ಸುವ ಸಂದರ್ಭದಲ್ಲಿ ಪ್ರಶಾಂತ್ ಕಿಶೋರ್ ಇಡೀ ರಾಷ್ಟçದ ಚುನಾವಣಾ ಸಮೀಕ್ಷೆ ನಡೆಸಿಕೊಟ್ಟಿದ್ದರು. ಅದಾದ ನಂತರ ಬಿಹಾರ್‌ನಲ್ಲಿ ಜೆಡಿಯು, ತಮಿಳುನಾಡಿನಲ್ಲಿ ಡಿಎಂಕೆ, ಮಹಾರಾಷ್ಟçದಲ್ಲಿ ಶಿವಸೇನೆÀ, ಆಂಧ್ರ ಪ್ರದೇಶದಲ್ಲಿ ವೈಎಸ್‌ಆರ್ ಕಾಂಗ್ರೆಸ್‌ಗೂ ಸಮೀಕ್ಷೆ ನಡೆಸಿಕೊಟ್ಟಿದ್ದರು. ಅದರಂತೆ ಆ ಪಕ್ಷಗಳು ಚುನಾವಣೆ ಗೆಲ್ಲುವಲ್ಲಿ ಯಶಸ್ವಿ ಯಾಗಿದ್ದವು. ಕಾಂಗ್ರೆಸ್‌ಗೆ ಪ್ರಶಾಂತ್ ಕಿಶೋರ್ ನಡೆಸಿಕೊಟ್ಟ ಸಮೀಕ್ಷೆಗಳು ಯಾವೂ ಇದುವರೆಗೆ ಯಶಸ್ವಿಯಾಗಿಲ್ಲ, ಇತ್ತೀಚೆಗೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ರಾಜ್ಯ ವಿಧಾನಸಭೆಗೆ ನಿಮ್ಮ ಪಕ್ಷದ ಸಮೀಕ್ಷೆ ಮಾಡುವುದಾಗಿ ಕೇಳಿದ್ದರು. ಸಮೀಕ್ಷೆಗೆ ತಗಲುವ ವೆಚ್ಚ ಕೇಳಿದ ಶಿವಕುಮಾರ್, ಅದನ್ನು ತಮ್ಮಿಂದ ಭರಿಸಲು ಸಾಧ್ಯವಿಲ್ಲ ಎಂದು ಸಮೀಕ್ಷೆಗೆ ನಿರಾಕರಿಸಿದ್ದರು. ಇದೀಗ ಕಿಶೋರ್ ಅವರನ್ನು ವಿಜಯೇಂದ್ರ ಭೇಟಿ ಮಾಡಿ ಮಾತುಕತೆ ನಡೆಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆದರೆ, ಸ್ಪಷ್ಟ ಚಿತ್ರಣ ಇನ್ನೂ ಮೂಡಿಬಂದಿಲ್ಲ.

Translate »