ತಲೆಮಾರಿಕೊಂಡಿದ್ದ ಖತರ್‍ನಾಕ್ ಕಳ್ಳ 22 ವರ್ಷ ಬಳಿಕ ಬಂಧನ
ಮೈಸೂರು

ತಲೆಮಾರಿಕೊಂಡಿದ್ದ ಖತರ್‍ನಾಕ್ ಕಳ್ಳ 22 ವರ್ಷ ಬಳಿಕ ಬಂಧನ

March 27, 2019

ನಂಜನಗೂಡು: ವಿವಿಧ ಕಳವು ಪ್ರಕರಣಗಳಲ್ಲಿ ಕೈಚಳಕ ತೋರಿ, ತಲೆ ಮರೆಸಿಕೊಂಡಿದ್ದ ಖತರ್‍ನಾಕ್É್ಚೂೀರನೋರ್ವನನ್ನು 22 ವರ್ಷಗಳ ಬಳಿಕ ಬಂಧಿಸುವಲ್ಲಿ ನಂಜನಗೂಡು ಪೊಲೀಸರು ಯಶಸ್ವಿಯಾಗಿದ್ದಾರೆ.

ಕಡಕೊಳ ನಿವಾಸಿ ಗಫರ್ ಸೈಯದ್ ಇಬ್ರಾಹಿಂ (32) ಬಂಧಿತ ಆರೋಪಿಯಾಗಿದ್ದು, ಈ 1993ರಲ್ಲಿ ನಾಲ್ಕು ಕಳುವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. 1993ರಿಂದ ಪೊಲೀಸರ ಕೈಗೆ ಸಿಗದೆ ಚೆಳ್ಳೆಹಣ್ಣು ತಿನ್ನಿಸುತ್ತಿದ್ದ ಗಫಾರ್ ಸದ್ಯ ಅಂದರ್ ಆಗಿದ್ದಾನೆ.

ಮೈಸೂರು ತಾಲೂಕಿನ ಕಡಕೊಳ ನಿವಾಸಿ ಗಫಾರ್ ಕಳುವು ಪ್ರಕರಣದ ನಂತರ ಸ್ಥಳಗಳನ್ನ ಬದಲಾಯಿಸುತ್ತಾ ತಲೆಮರೆಸಿಕೊಂಡಿದ್ದ. ಖಚಿತ ಮಾಹಿತಿ ಆಧಾರದ ಮೇಲೆ ಚಾಮರಾಜನಗರದ ಗಾಳಿಪುರದ ಮನೆಯೊಂದರ ಮೇಲೆ ದಾಳಿ ನಡೆಸಿದ ನಂಜನಗೂಡು ಪೊಲೀಸರು ಗಫಾರ್‍ನ್ನ ಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಸಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದ ಗಫಾರ್‍ಗೆ ಆಗ 32 ವರ್ಷ ವಯಸ್ಸು. ಇದೀಗ ಈತನಿಗೆ 58 ವರ್ಷ ವಯಸ್ಸಾಗಿದೆ. ನಂಜನಗೂಡು ವೃತ್ತದ ಸಿಪಿಐ ಶೇಖರ್ ನೇತೃತ್ವದಲ್ಲಿ ಎಸ್‍ಐಗಳಾದ ಪುನೀತ್, ಆರತಿ, ಸಿಬ್ಬಂದಿ ಮಹೇಶ್‍ನ್, ಚಂದ್ರು, ಕೃಷ್ಣ ಒಳಗೊಂಡ ತಂಡ ಯಶಸ್ವಿ ಕಾರ್ಯಚರಣೆ ನಡೆಸಿದೆ.

Translate »