ಮಲಗಿದಲ್ಲೇ ಕೊಲೆಯಾದ ವಕೀಲ
ಮಂಡ್ಯ

ಮಲಗಿದಲ್ಲೇ ಕೊಲೆಯಾದ ವಕೀಲ

March 27, 2019

ವಕೀಲರ ಕೊಲೆ: ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ 2ನೇ ಘಟನೆ

ಕೆ.ಆರ್.ಪೇಟೆ: ಮನೆಯಲ್ಲಿ ಮಲಗಿದ್ದ ವಕೀಲ ರೊಬ್ಬರ ಮೇಲೆ ದುಷ್ಕರ್ಮಿಗಳ ಗುಂಪು ಮಾರ ಣಾಂತಿಕ ಹಲ್ಲೆ ನಡೆಸಿ, ನಂತರ ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಘಟನೆ ಸಂತೇಬಾಚಹಳ್ಳಿ ಹೋಬಳಿಯ ನಾಗರಘಟ್ಟ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.ನಾಗರಘಟ್ಟದ ದೇವರಾಜೇಗೌಡ ಅವರ ಪುತ್ರ ಸತೀಶ್(40) ಕೊಲೆಯಾದವರು.

ಘಟನೆ ವಿವರ: ಸತೀಶ್ ಚನ್ನರಾಯ ಪಟ್ಟಣದ ಶ್ರೀಕಂಠಯ್ಯ ಪೆಟ್ರೋಲ್ ಬಂಕ್ ಹಿಂಭಾಗದ ಬಡಾವಣೆಯಲ್ಲಿ ಕುಟುಂಬ ಸಮೇತ ವಾಸವಿದ್ದು, ಚನ್ನರಾಯಪಟ್ಟಣ, ಬೆಂಗಳೂರು, ಕೆ.ಆರ್.ಪೇಟೆ ತಾಲೂಕುಗಳಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದರು. ಆಗಾಗ್ಗೆ ಸ್ವಗ್ರಾಮ ನಾಗರಘಟ್ಟಕ್ಕೆ ಬಂದು ಜಮೀನು-ತೋಟದಲ್ಲಿನ ಕೃಷಿ ಚಟುವಟಿಕೆ ನೋಡಿಕೊಂಡು ಹೋಗುತ್ತಿದ್ದರು. ಅದೇ ರೀತಿ ಸೋಮವಾರ ಸಂಜೆ 6 ಗಂಟೆಗೆ ನಾಗರ ಘಟ್ಟಕ್ಕೆ ಬಂದು ಗ್ರಾಮ ದಲ್ಲಿನ ಸ್ನೇಹಿತರು ಮತ್ತು ಪರಿಚಯ ಸ್ಥರನ್ನು ಮಾತನಾಡಿಸಿ ನಂತರ ಮನೆಗೆ ಹೋಗಿ ಹಜಾರದಲ್ಲಿದ್ದ ಮಂಚದ ಮೇಲೆ ಮಲಗಿದ್ದರು. ಅವರೊಡನೆ ಮುನಿ ಸಿಕೊಂಡಿದ್ದ ಸೋದರ ಉಮೇಶನೂ ಮನೆಯಲ್ಲೇ ಇದ್ದ. ಸತೀಶ್ ಕೊಲೆಯಾ ಗಿರುವುದು ಬೆಳಿಗ್ಗೆಯಷ್ಟೇ ತಿಳಿದುಬಂದಿದೆ.ಪೊಲೀಸರು ಮೃತನ ಸಹೋದರ ಉಮೇಶ್ ಸೇರಿದಂತೆ ಅನುಮಾನ ಬಂದ ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಉಮೇಶ್ ಹೇಳಿದ್ದು: ಸೋಮವಾರ ರಾತ್ರಿ 11.45ರ ಸುಮಾರಿಗೆ ನಾಲ್ಕೈದು ಮಂದಿಯ ತಂಡ ಮನೆ ಬಳಿ ಬಂದು, ಅಣ್ಣ ಸತೀಶ್ ಜತೆ ಹಣದ ವಿಚಾರ ವಾಗಿ ಜಗಳವಾಡುತ್ತಿದ್ದರು. ನನ್ನೊಂದಿಗೆ ಮುನಿಸಿಕೊಂಡಿದ್ದ ಕಾರಣ ಅಣ್ಣನ ವಿಚಾರ ನನಗೇಕೆ ಎಂದು ಮಹಡಿ ಯಲ್ಲಿ ಮಲಗಿದ್ದೆ. ಬೆಳಿಗ್ಗೆ ನೋಡಿದಾಗ ಸತೀಶ್ ಸಾವಿಗೀಡಾಗಿರುವುದು ತಿಳಿಯಿತು ಎಂದು ಉಮೇಶ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

ಸತೀಶ್ ಅವರ ಪತ್ನಿ ಭಾರತಿ, ಜಮೀನು ನೋಡಿಕೊಂಡು ಬರುವುದಾಗಿ ಹೇಳಿ ಇಲ್ಲಿಗೆ ಬಂದಿದ್ದರು. ಮೈದುನನೂ ಇಲ್ಲಿಯೇ ಇದ್ದರು. ನನ್ನ ಗಂಡನನ್ನು ಯಾರೋ ಉದ್ದೇಶ ಪೂರ್ವಕವಾಗಿಯೇ ಕೊಲೆ ಮಾಡಿದ್ದಾರೆ. ತಪ್ಪಿತಸ್ಥರನ್ನು ಪತ್ತೆ ಮಾಡಿ ಕಠಿಣ ಶಿಕ್ಷೆಗೆ ಗುರಿಪಡಿಸಿ, ನಮಗೆ ನ್ಯಾಯ ಕೊಡಿಸಿ ಎಂದು ಪೊಲೀಸರಿಗೆ ನೀಡಿ ರುವ ದೂರಿನಲ್ಲಿ ಮನವಿ ಮಾಡಿದ್ದಾರೆ.

ಸತೀಶ್ ತಾಯಿ ಪದ್ಮಮ್ಮ, ನನ್ನ ಮಗನ ಹಂತಕರನ್ನು ಸೆರೆಹಿಡಿದು ಶಿಕ್ಷೆಗೊಳಪಡಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ನಾಗರಘಟ್ಟದ ಜಮೀನು ಸತೀಶ್ ಅವರ ತಾಯಿ ಹೆಸರಲ್ಲಿದೆ. ಅಣ್ಣ-ತಮ್ಮ ಮುನಿಸಿಕೊಂಡಿದ್ದರೂ ಜಮೀನು ಸೇರಿದಂತೆ ಯಾವುದೇ ವಿವಾದ ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಹಾಸನ ಜಿಲ್ಲೆಯಿಂದ ಮೂವರು ಬೆರಳಚ್ಚು ತಜ್ಞರು ಮತ್ತು ಶ್ವಾನದಳದ ಮೂವರು 2 ನಾಯಿಗಳೊಡನೆ ಸ್ಥಳಕ್ಕೆ ಆಗಮಿಸಿದ್ದು, ಕೊಲೆಗಾರರ ಸುಳಿವಿ ಗಾಗಿ ತೀವ್ರ ಶೋಧ ನಡೆಸಿದ್ದಾರೆ. ಸದ್ಯ ಯಾವುದೇ ಸುಳಿವು ಪತ್ತೆಯಾಗಿಲ್ಲ ಎನ್ನಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಎಎಸ್‍ಪಿ ಬಲರಾಮೇಗೌಡ, ಡಿವೈಎಸ್‍ಪಿ ಮೋಹನ್ ಕುಮಾರ್, ಸರ್ಕಲ್ ಇನ್‍ಸ್ಪೆಕÀ್ಟರ್ ಸುಧಾಕರ್, ಸಬ್ ಇನ್‍ಸ್ಪೆಕ್ಟರ್ ಹೆಚ್.ಎಸ್. ವೆಂಕಟೇಶ್ ಸ್ಥಳ ಪರಿಶೀಲನೆ ನಡೆಸಿ ದರು. ಪಟ್ಟಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಹಲವು ಶಂಕೆ: ವಕೀಲ ಸತೀಶ ಸದೃಢ ದೇಹಿಯಾಗಿದ್ದಾರೆ. ಹಲವರು ಸೇರಿ ಕೊಂಡು ಕೊಲೆ ಮಾಡಿರುವ ಸಾಧ್ಯತೆ ಇದೆ. ಹಣಕಾಸು ವಿಚಾರವಾಗಿಯೇ ಈ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದೆ.

ಪೊಲೀಸ್ ಶ್ವಾನದಳದ 2 ನಾಯಿ ಗಳು ಮೊದಲಿಗೆ ಮನೆಯಲ್ಲಿ ಕೊಲೆ ನಡೆದ ಸ್ಥಳವನ್ನು ಮತ್ತು ಮೃತದೇಹದ ಬಳಿ ವಾಸನೆ ಗ್ರಹಿಸಿಕೊಂಡು ಗ್ರಾಮದ ಒಂದು ರಸ್ತೆಯಲ್ಲಿ ಸ್ವಲ್ಪ ದೂರದವ ರೆಗೂ ಸಾಗಿ ನಿಂತುಕೊಂಡವು. ಹಾಗಾಗಿ, ಕೊಲೆಗಾರರ ತಂಡ ಅಲ್ಲಿಯ ವರೆಗೆ ವಾಹನದಲ್ಲಿ ಬಂದಿರ ಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ.

Translate »