ಸುಮಲತಾ ಅಂಬರೀಶ್‍ಗೆ ರೈತಸಂಘದ ಬೆಂಬಲ
ಮಂಡ್ಯ

ಸುಮಲತಾ ಅಂಬರೀಶ್‍ಗೆ ರೈತಸಂಘದ ಬೆಂಬಲ

March 27, 2019

ಮಂಡ್ಯ: ಮಂಡ್ಯದ ಅಂಬರೀಶ್ ಅಭಿಮಾನಿ ಗಳ ಆಗ್ರಹ, ಕನ್ನಡ ಚಲನಚಿತ್ರರಂಗದವರ ಒತ್ತಾಸೆ, ಬಿಜೆಪಿಯ ನೇರ ಬೆಂಬಲದೊಂದಿಗೇ ಪಕ್ಷೇತರ ವಾಗಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಚಿತ್ರನಟಿ ಸುಮಲತಾ ಅಂಬರೀಶ್ ಅವರಿಗೆ ಈಗ ರೈತಸಂಘದ ಸಂಪೂರ್ಣ ಬೆಂಬಲವೂ ದೊರೆತಿದೆ. ಸುಮಲತಾ ಅವರಿಗೆ ಮಂಗಳವಾರ ಬೆಂಬಲ ಸೂಚಿಸಿದ ರೈತ ಸಂಘವು, ಮಂಡ್ಯದ ಸ್ವಾಭಿಮಾನದ ರಕ್ಷಣೆ ಜತೆಗೇ ಜಿಲ್ಲೆಯ ರೈತರ ಸಮಸ್ಯೆಗಳ ಪರಿಹಾರಕ್ಕೆ ಹೋರಾಡಬೇಕೆಂಬ ಷರತ್ತನ್ನೂ ವಿಧಿಸಿದೆ.

ಸುಮಲತಾ ಅವರೊಂದಿಗೆ ಜೋಡೆತ್ತುಗಳಾಗಿ ನಾವಿರು ತ್ತೇವೆ ಎಂದು ನಟರಾದ ದರ್ಶನ್ ಮತ್ತು ಯಶ್ ಚುನಾ ವಣಾ ಪ್ರಚಾರಕ್ಕೂ ಇಳಿದಿದ್ದಾರೆ. ಈ ಮಧ್ಯೆ, ಕಾದು ನೋಡುವ ತಂತ್ರ ಅನುಸರಿಸಿದ್ದ ಬಿಜೆಪಿ, 2 ದಿನಗಳ ಹಿಂದಷ್ಟೇ ಬೇಷರತ್ ಬೆಂಬಲ ಘೋಷಿಸಿದೆ. ಇದರ ಬೆನ್ನಲ್ಲೇ ರೈತ ಸಂಘವೂ ಬೆಂಬಲ ಸೂಚಿಸಿರುವುದು ಸುಮಲತಾ ಅವರಲ್ಲಿ ಭಾರೀ ಹರ್ಷವನ್ನುಂಟು ಮಾಡಿದೆ.

“ರೈತಸಂಘದ ಬೆಂಬಲದಿಂದ ನನಗೆ ನೂರಾನೆ ಬಲ ಬಂದಿದೆ. ಆತ್ಮವಿಶ್ವಾಸ ಇಮ್ಮಡಿಸಿದೆ. ಲಾಲ್ ಬಹದ್ದೂರ್ ಶಾಸ್ತ್ರಿ ಅವರ `ಜೈ ಜವಾನ್, ಜೈ ಕಿಸಾನ್’ ಘೋಷಣೆಯಂತೆ ಸೈನಿಕರು ದೇಶ ಕಾಪಾಡಲು ಹೋರಾಡಿದರೆ, ರೈತರು ಜನರಿಗೆ ಅನ್ನ ನೀಡಿ ಜೀವ ರಕ್ಷಣೆ ಮಾಡುತ್ತಾರೆ. ಅಂತಹ ರೈತರ ಸಂಘದ ಬೆಂಬಲ ಸಿಕ್ಕಿರುವುದು ನನ್ನಲ್ಲಿ ಉತ್ಸಾಹ ಹೆಚ್ಚಿಸಿದೆ. ನಾನೂ ರೈತ ಕುಟುಂಬದವಳೆ. ರೈತರ, ಮಂಡ್ಯ ಜನರ ದನಿಯಾಗಿ ಲೋಕಸಭೆಯಲ್ಲಿ ಹೋರಾಡುವೆ. ಇದು ನನ್ನ ಕರ್ತವ್ಯವಷ್ಟೇ ಅಲ್ಲ, ನನ್ನ ಪಾಲಿನ ಸೌಭಾಗ್ಯ ಎಂದು ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದ್ದಾರೆ.

ರಾಜ್ಯ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಧರಿಸುವು ದಾಗಿ ಈ ಮೊದಲು ಹೇಳಿದ್ದ ರೈತಸಂಘವು, ಸಭೆಯ ನಿರ್ಣಯದಂತೆ ಸುಮಲತಾ ಅಂಬರೀಶ್ ಅವರಿಗೆ ಷರತ್ತು ಬದ್ಧ ಬೆಂಬಲ ನೀಡಿದೆ.

ಮಂಡ್ಯದಲ್ಲಿ ಮಂಗಳವಾರ ರೈತಸಂಘದ ನಿರ್ಧಾರ ಪ್ರಕಟಿಸಿದ ರೈತನಾಯಕಿ ಸುನೀತಾ ಪುಟ್ಟಣ್ಣಯ್ಯ ಅವರು, ಮಂಡ್ಯ ಜಿಲ್ಲೆಗೆ ಸೀಮಿತವಾಗಿ ರೈತಸಂಘವು ಸುಮಲತಾ ಅವರಿಗೆ ಕೆಲವು ಷರತ್ತುಗಳೊಂದಿಗೆ ಪೂರ್ಣಪ್ರಮಾಣದ ಬೆಂಬಲ ಘೋಷಿಸಿದೆ. ಗೆದ್ದ ಮೇಲೆ ಅವರು ನಮ್ಮೊಂದಿಗೇ ಇದ್ದು ರೈತ ಹಾಗೂ ಜನಪರ ಹೋರಾಟಗಳಲ್ಲಿ ಪಾಲ್ಗೊಳ್ಳಬೇಕು. ರೈತಸಂಘದ ಮುಖಂಡರು, ಕಾರ್ಯ ಕರ್ತರು ಸಕ್ರಿಯವಾಗಿ ಸುಮಲತಾ ಅವರ ಜತೆ ಪ್ರಚಾರ ದಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಹೇಳಿದರು.

Translate »