ನಾಳೆ ಉಚಿತ ಶಸ್ತ್ರ ಚಿಕಿತ್ಸೆ, ಪರೀಕ್ಷಾ ಶಿಬಿರ
ಚಾಮರಾಜನಗರ

ನಾಳೆ ಉಚಿತ ಶಸ್ತ್ರ ಚಿಕಿತ್ಸೆ, ಪರೀಕ್ಷಾ ಶಿಬಿರ

July 14, 2018

ಚಾಮರಾಜನಗರ:  ನಗರದ ರೋಟರಿ ಭವನದಲ್ಲಿ ಜುಲೈ 15ರಂದು ಬೆಳಿಗ್ಗೆ 10 ಗಂಟೆಯಿಂದಜ ಮಧ್ಯಾಹ್ನ 1ರವರೆಗೆ ಸಿಳು ತುಟಿ, ಬೀಳು ಅಂಗಳ, ಸೀಳು ಮುಖ, ಮುಖಾಂಗ ಫೇಕಲ್ಸ್ ಮತ್ತು ಮುಖದ ಮೂಳೆಗಳಿಗೆ ಸಂಬಂಧಿಸಿದಂತೆ ನ್ಯೂನತೆಗಳಿರುವವರಿಗೆ ಉಚಿತ ಶಸ್ತ್ರ ಚಿಕಿತ್ಸೆ ಹಾಗೂ ಪರೀಕ್ಷಾ ಶಿಬಿರ ಆಯೋಜಿಸಲಾಗಿದೆ.

ನಗರದ ರೋಟರಿ ಸಂಸ್ಥೆ, ಮೈಸೂರಿನ ಸ್ವಾಸ್ತ್ಯ ಫೌಂಡೇಷನ್, ಸಂತ ಜೋಸೆಫರ ಆಸ್ಪತ್ರೆಯ ಸಹಯೋಗದಲ್ಲಿ ಶಿಬಿರವನ್ನು ಏರ್ಪಡಿಸಲಾಗಿದೆ. ಸಾರ್ವಜನಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ರೋಟರಿ ಅಧ್ಯಕ್ಷ ಡಿ.ನಾಗರಾಜ, ಮಾಜಿ ಅಧ್ಯಕ್ಷ ಸಿ.ಎ.ನಾರಾಯಣ ಕೋರಿದ್ದಾರೆ.

Translate »