ಬಿಜೆಪಿ ಕಾರ್ಯಕರ್ತರನ್ನು ಯಾರಾದ್ರೂ ಟಚ್ ಮಾಡಿದರೆ ಸುಮ್ಮನಿರಲ್ಲ: ಸಂಸದ ಪ್ರತಾಪ್‍ಸಿಂಹ ಎಚ್ಚರಿಕೆ
ಚಾಮರಾಜನಗರ

ಬಿಜೆಪಿ ಕಾರ್ಯಕರ್ತರನ್ನು ಯಾರಾದ್ರೂ ಟಚ್ ಮಾಡಿದರೆ ಸುಮ್ಮನಿರಲ್ಲ: ಸಂಸದ ಪ್ರತಾಪ್‍ಸಿಂಹ ಎಚ್ಚರಿಕೆ

June 3, 2018

ಚಾಮರಾಜನಗರ, ಮೇ.2- ರಾಜ್ಯದಲ್ಲಿ ಅಧಿಕಾರದಲ್ಲಿರುವ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರದಿಂದ ಯಾರಾದ್ರೂ ಬಿಜೆಪಿಯ ಕಾರ್ಯಕರ್ತರನ್ನು ಟಚ್ ಮಾಡಿದರೆ ನಾವು ಸುಮ್ಮನೆ ಇರುವುದಿಲ್ಲ ಎಂದು ಸಂಸದ ಪ್ರತಾಪ್‍ಸಿಂಹ ಎಚ್ಚರಿಕೆ ನೀಡಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿ ಸುವುದಕ್ಕೂ ಮುನ್ನ ತಾವು ಟ್ವೀಟ್ ಮಾಡಿದ್ದನ್ನು ಕುರಿತು ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು.

ರಾಜ್ಯದಲ್ಲಿ ಈ ಹಿಂದಿನ ಸರ್ಕಾರದ ಅವಧಿಯಲ್ಲಿ 23 ಬಿಜೆಪಿ ಕಾರ್ಯಕರ್ತರ ಹತ್ಯೆ ಮಾಡಲಾಗಿದೆ. ನಾಳೆ ಇದಕ್ಕೆಲ್ಲಾ ತೆರೆ ಬೀಳಲಿದೆ. ನಾಳೆಯಿಂದ ನಮ್ಮ ಕಾರ್ಯಕರ್ತರನ್ನು ಮುಟ್ಟಿದರೆ ಜೋಕೆ ಎಂದು ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದರು. ಈ ಬಗ್ಗೆ ಸುದ್ದಿಗಾರರು ಅವರನ್ನು ಪ್ರಶ್ನಿಸಿದಾಗ, ನಾನು ಈ ತರಹ ಟ್ವೀಟ್ ಮಾಡಿಲ್ಲ. ಈಗಲೂ ನಾನು ಹೇಳುತ್ತೇನೆ. ಕುಮಾರಸ್ವಾಮಿ ಸರ್ಕಾರದಲ್ಲಿ ನಮ್ಮ ಕಾರ್ಯಕರ್ತರಿಗೆ ತೊಂದರೆ ನೀಡಿದರೆ ನಾವು ಸುಮ್ಮನೆ ಕೂರಲ್ಲ ಎಂದು ಎಚ್ಚರಿಕೆ ನೀಡಿದರು.

‘ತಾನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಬದಲಿ ಸುವ ಪ್ರಶ್ನೆಯೇ ಇಲ್ಲ. ಸಂಸದನಾಗಿ ಅನೇಕ ಉತ್ತಮ ಕೆಲಸಗಳನ್ನು ಮಾಡಿದ್ಧೇನೆ . ಕೇಂದ್ರ ಸರ್ಕಾರದಿಂದ ಸಾವಿರಾರು ಕೋಟಿ ರೂ. ಅನುದಾನ ತಂದಿದ್ಧೇನೆ. ಮೈಸೂರು ಜನತೆ ಪ್ರೀತಿಯಿಂದ ನನ್ನನ್ನು ಗೆಲ್ಲಿಸಿದ್ದಾರೆ. ಹೀಗಿರುವಾಗ ನಾನೇಕೆ ಬೇರೆ ಕ್ಷೇತ್ರಕ್ಕೆ ಹೋಗಲಿ? ಕೆಲವರು ಇಲ್ಲಸಲ್ಲದ ವದಂತಿ ಹಬ್ಬಿಸುತ್ತಿದ್ದಾರೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Translate »