ಕಾಡಾನೆ ದಾಳಿಯಿಂದ ಫಸಲು ನಾಶ; ಶೀಘ್ರ ಪರಿಹಾರಕ್ಕೆ ಸಂಕೇತ್ ಆಗ್ರಹ
ಕೊಡಗು

ಕಾಡಾನೆ ದಾಳಿಯಿಂದ ಫಸಲು ನಾಶ; ಶೀಘ್ರ ಪರಿಹಾರಕ್ಕೆ ಸಂಕೇತ್ ಆಗ್ರಹ

June 3, 2018

ಗೋಣಿಕೊಪ್ಪಲು: ರುದ್ರಬೀಡು ಗ್ರಾಮದಲ್ಲಿ ಕಾಡಾನೆ ದಾಂಧಲೆಗೆ ನಷ್ಟ ಅನುಭವಿಸಿರುವ ಬೆಳೆಗಾರರಿಗೆ ಶೀಘ್ರವಾಗಿ ಪರಿಹಾರ ವಿತರಣೆ ಮಾಡುವಂತೆ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಒತ್ತಾಯಿಸಿದರು.

ಅಲ್ಲಿನ ಕಾಫಿ ಬೆಳೆಗಾರರಾದ ಆಲೆಮಾಡ ಹರೀಶ್ ಹಾಗೂ ಸ್ವಾಮಿ ಅವರ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೂರವಾಣ ಕರೆ ಮಾಡಿ, ತಿತಿಮತಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ಐಎಫ್‍ಎಸ್ ಅಧಿಕಾರಿ ಶಿವಶಂಕರ್, ಆರ್‍ಎಫ್‍ಓ ಆಶೋಕ್, ಡಿಆರ್‍ಎಫ್‍ಒ ಐಚಂಡ ಗಣಪತಿ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ಪರಿಹಾರದ ನೀಡುವ ಬಗ್ಗೆ ಚರ್ಚೆ ನಡೆಸಿದರು.

ಕಾಡಾನೆಗಳು ತೋಟಗಳಿಗೆ ಬಾರದಂತೆ ತಡೆಗಟ್ಟಲು ವೈಜ್ಞಾನಿಕ ಕ್ರಮಗಳ ಬಗ್ಗೆ ಚರ್ಚೆ ನಡೆಸಿ, ವಿಳಂಬ ಮಾಡದೆ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.

ಈಗಾಗಲೇ ರೈತ ಅಲೆಮಾಡ ಹರೀಶ್ ಅವರ ತೋಟ ದಲ್ಲಿದ್ದ ಬಾಳೆ, ತೆಂಗು, ಅಡಿಕೆ ಗಿಡಗಳು, ಆನೆ ದಾಳಿಯಿಂದ ಹಾನಿಗೊಳಗಾಗಿದೆ. ಕೂಡಲೇ ನೊಂದಿರುವ ರೈತನಿಗೆ ಪರಿಹಾರ ವಿತರಿಸಲು ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದರು.

ಈ ಸಂದರ್ಭ ಮಾಹಿತಿ ನೀಡಿದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಐಎಫ್‍ಎಸ್ ಶಿವಶಂಕರ್, ಈ ಭಾಗದಲ್ಲಿ ಎರಡು ದಿನಗಳಿಂದ ಆನೆಯ ಹಿಂಡು ನೆಲೆಸಿದೆ. ಇವುಗಳನ್ನು ಸ್ಥಳಾಂ ತರ ಮಾಡಲು ಪ್ರಯತ್ನಗಳು ನಡೆಯುತ್ತಿವೆ. ಮುಂಜಾಗೃತ ಕ್ರಮವಾಗಿ ಮೂರು ಅರಣ್ಯ ಇಲಾಖೆಯ ಸಿಬ್ಬಂದಿಯ ವಿಶೇಷ ತಂಡಗಳನ್ನು ಕಾರ್ಯಚರಣೆಗೆ ನಿಯೋಜಿಸ ಲಾಗಿದೆ. ತೋಟದಲ್ಲಿ ಇರುವ ಕಾಡಾನೆ ನಾಡಿಗೆ ಬರದಂತೆ ಎಚ್ಚರಿಕೆಯಿಂದ ಕಾವಲು ಹಾಕಲಾಗಿದೆ. ಕಾಡಾನೆಗಳು ಹಿಂಡಾ ಗಿರುವುದರಿಂದ ಒಂದೇ ಸ್ಥಳದಲ್ಲಿ ನೆಲೆಯೂರಿವೆ. ಇನ್ನು ಮೂರು ದಿನದ ಒಳಗೆ ಇವುಗಳನ್ನು ಕಾಡಿಗೆ ಅಟ್ಟುವ ಕೆಲಸ ಮಾಡಲಾಗುವುದೆಂದು ಭರವಸೆ ನೀಡಿದರು.

Translate »