ಚಾ.ನಗರ ನಗರಸಭೆಯಲ್ಲಿ ಬ್ರಹ್ಮಂಡ ಭ್ರಷ್ಟಾಚಾರ
ಚಾಮರಾಜನಗರ

ಚಾ.ನಗರ ನಗರಸಭೆಯಲ್ಲಿ ಬ್ರಹ್ಮಂಡ ಭ್ರಷ್ಟಾಚಾರ

June 3, 2018
  • ಆಡಳಿತಾರೂಢ ಕಾಂಗ್ರೆಸ್‍ನಿಂದ ಗಂಭೀರ ಆರೋಪ
  • ಚರ್ಚೆಗೆ ಗ್ರಾಸವಾದ ಅಧ್ಯಕ್ಷರು, ಸದಸ್ಯರ ಹೇಳಿಕೆ

ಚಾಮರಾಜನಗರ: ಚಾಮರಾಜನಗರ ನಗರಸಭೆಗೆ ಎರಡು ವರ್ಷಗಳಿಂದ ವಿವಿಧ ಯೋಜನೆಯಡಿ ಕೋಟಿಗಟ್ಟಲೆ ಹಣ ಮಂಜೂರಾಗಿದೆ. ಹಾಗೆಯೇ, ಅಷ್ಟೇ ಪ್ರಮಾಣದ ಭ್ರಷ್ಟಾ ಚಾರವೂ ನಡೆದಿದೆ. ಈ ಹಿಂದಿನ ಹಾಗೂ ಈಗಿನ ಅಧಿಕಾರಿಗಳು ಗುತ್ತಿಗೆದಾರರ ಜೊತೆ ಕೈಜೋಡಿಸಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ.ಹೀಗೆ ಆರೋಪ ಮಾಡಿದವರು ವಿರೋಧ ಪಕ್ಷದ ಜನಪ್ರತಿನಿಧಿಗಳಾಗಲೀ ಅಥವಾ ಮುಖಂಡರಾಗಲೀ ಅಲ್ಲ. ಬದಲಿಗೆ ನಗರಸಭೆಯ ಅಧಿಕಾರ ಚುಕ್ಕಾಣ ಹಿಡಿ ದಿರುವ ಕಾಂಗ್ರೆಸ್ ಮಾಡಿರುವ ಗಂಭೀರ ಆರೋಪ. ಇದನ್ನು ಅಧ್ಯಕ್ಷರಾದ ಶೋಭಾ ಪುಟ್ಟಸ್ವಾಮಿ ಹಾಗೂ ಸದಸ್ಯ ಎಸ್.ನಂಜುಂಡ ಸ್ವಾಮಿ ಅವರು ಹೇಳಿದ್ದು, ಅವರ ಹೇಳಿಕೆ ಪ್ರಸ್ತುತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ನಗರದ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಸಂಘದ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷರು ಹಾಗೂ ಸದಸ್ಯರು ಮಾತನಾಡಿ, ಅಧಿಕಾರಿ ಗಳ ವಿರುದ್ಧ ಆರೋಪ ಮಾಡಿದರು.ನಗರದ ಕಸ ವಿಲೇವಾರಿ ಮಾಡುವ ಘಟಕಕ್ಕೆ ಮತ್ತು ಸೋಮವಾರಪೇಟೆ ಹಾಗೂ ಗಾಳೀಪುರ ರಸ್ತೆಯಿಂದ ಡಾಂಬರು ರಸ್ತೆ ನಿರ್ಮಿಸಲು 48 ಲಕ್ಷಗಳಿಗೆ ಟೆಂಡರ್ ಕರೆಯಲಾಗಿತ್ತು. ಆದರೆ, ಹಿಂದಿನ ಪೌರಾ ಯುಕ್ತರು ಹಾಗೂ ಎಂಜಿನಿಯರ್‍ಗಳು ಸರಿಯಾಗಿ ಕಾರ್ಯನಿರ್ವಹಿಸದೇ ಕಾಮ ಗಾರಿ ಪೂರ್ಣಗೊಳ್ಳದಿದ್ದರೂ ಬಿಲ್ ಪಾವ ತಿಸಲಾಗಿದೆ. ನಗರಸಭೆಯ ಮಂಜೂರಾತಿ ಪಡೆಯದೇ ಸೋಮವಾರಪೇಟೆಯಲ್ಲಿ ಇರುವ ಎಸ್.ಡಬ್ಲೂ.ಎಂ. ಘಟಕದಲ್ಲಿ ಬೈಪಾಸ್ ರಸ್ತೆ ಮಾಡುವ ಗುತ್ತಿಗೆದಾರನಿಗೆ ಒಂದು ಲೋಡ್ ಮಣ ್ಣಗೆ 500 ರೂ. ನಂತೆ ಸುಮಾರು 2 ಸಾವಿರ ಲೋಡ್ ಮಣ್ಣನ್ನು ಮಾರಾಟ ಮಾಡಲಾಗಿದೆ. ಈ ಮೂಲಕ ನಗರಸಭೆಗೆ ಸೇರಿದ ಆಸ್ತಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ದೂರಿದರು.

ಟಿ.ನರಸೀಪುರದ ನೀರೆತ್ತುವ ಘಟಕದಲ್ಲಿ 750 ಹೆಚ್‍ಪಿ ಮೋಟಾರ್ ದುರಸ್ತಿಯಾ ಗಿದೆ ಎಂದು ಸುಳ್ಳು ಮಾಹಿತಿ ನೀಡಿ ರಿಪೇರಿ ಮಾಡಲು ಟೆಂಡರ್ ಕರೆಯದೇ ತಮಗೆ ಇಷ್ಟವಾದ ಗುತ್ತಿಗೆದಾರನಿಂದ ರಿಪೇರಿ ಮಾಡಿಸಲು ತುಮಕೂರಿಗೆ ಕಳುಹಿಸಲಾಗಿದೆ. ಮಂಗಲ ನೀರು ಶುದ್ಧೀಕರಣ ಘಟಕದಲ್ಲಿ ನಗರಸಭಾ ಅಧಿಕಾರಿಗಳು 250 ಹೆಚ್.ಪಿ. ಮೋಟಾರ್ ಪಂಪ್‍ಗಳನ್ನು ಹೊಸದಾಗಿ ಅಳವಡಿಸಿದ್ದು, ಒಂದು ವಾರದಲ್ಲಿಯೇ ರಿಪೇರಿಗೆ ಬಂದಿದೆ. ಇಲ್ಲೂ ಸಹ ಲಕ್ಷಾಂತರ ರೂ. ಅವ್ಯವಹಾರ ನಡೆದಿದೆ. ನಗರದ ವಿವಿಧೆಡೆ ರಸ್ತೆ ಅಗಲೀಕರಣ ವೇಳೆ ಹಾಲಿ ಇದ್ದ ಚರಂಡಿಗಳ ದಿಂಡು ಕಲ್ಲುಗಳನ್ನು ಸುಮಾರು 50 ಲಕ್ಷ ರೂ.ಗಳಿಗೆ ಅಕ್ರಮ ವಾಗಿ ಮಾರಾಟ ಮಾಡಿಕೊಳ್ಳ ಲಾಗಿದೆ ಎಂದು ಆರೋಪಿಸಿದರು.

ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಬಲಭಾಗದ ಪಾರ್ಕ್ ಅನ್ನು ಅಭಿವೃದ್ಧಿ ಗೊಳಿಸಲು 13 ಲಕ್ಷ ರೂ. ಹಣ ಮಂಜೂ ರಾಗಿತ್ತು. ಈ ಪಾರ್ಕ್‍ನಲ್ಲಿ ವಾಕಿಂಗ್ ಪಾತ್‍ಗೆ ಇಟ್ಟಿಗೆ ಕಟ್ಟಿ ಸುಮಾರು 3 ಲಕ್ಷ ಅಂದಾಜಿನಲ್ಲಿ ಕಾಮಗಾರಿ ಮುಗಿಸಿ ಕೆಎಸ್ ಆರ್‍ಟಿಸಿ ಸಂಸ್ಥೆ ಮುಖಾಂತರ ಅಲ್ಲಿನ ಅಧಿಕಾರಿಗಳ ಜೊತೆ ಸೇರಿ ಈ ಹಿಂದಿನ ಪೌರಾಯುಕ್ತರು ಹಾಗೂ ನಗರಸಭಾ ಅಧಿ ಕಾರಿಗಳು ಹೆಚ್ಚುವರಿಯಾಗಿ 10 ಲಕ್ಷ ರೂ. ಗಳನ್ನು ದುರುಪಯೋಗ ಮಾಡಿಕೊಂಡಿ ದ್ದಾರÉ. ನಗರಸಭೆಯಲ್ಲಿ ಸುಮಾರು 1,000 ರಿಂದ 1,500 ಖಾತೆ ಮಾಡುವ ಅರ್ಜಿ ಗಳು ಬಾಕಿ ಉಳಿದಿವೆ. ಕಟ್ಟಡ ಪರವಾನಗಿ ಗಾಗಿ ಸುಮಾರು 300 ರಿಂದ 500 ಅರ್ಜಿ ಗಳು ಬಂದಿದ್ದು, ವಿಲೇವಾರಿಯಾಗದೇ ಉಳಿದಿವೆ. ಇದಕ್ಕೆಲ್ಲಾ ಅಧಿಕಾರಿಗಳ ಬೇಜಾ ವಾಬ್ದಾರಿತನವೇ ಕಾರಣ ಎಂದು ಅಧ್ಯಕ್ಷೆ ಶೋಭಾ ಹಾಗೂ ಸದಸ್ಯ ನಂಜುಂಡ ಸ್ವಾಮಿ ದೂರಿದರು.

ನಗರಸಭೆ ಪ್ರಭಾರ ಪೌರಾಯುಕ್ತರಾಗಿ ಉಪವಿಭಾಗಾಧಿಕಾರಿ ಬಿ.ಫೌಜಿಯಾ ತರನ್ನಮ್ ಅವರು ಕರ್ತವ್ಯ ನಿರ್ವಹಿಸುತ್ತಿ ದ್ದಾರೆ. ಅವರ ಬಳಿ ಸಮಸ್ಯೆಗಳ ಬಗ್ಗೆ ಚರ್ಚಿಸ ಲಾಗಿದೆ. ಈ ವೇಳೆ ಅವರು ಯಾವುದೇ ಕಡತಗಳನ್ನು ಪರಿಶೀಲಿಸದೇ ನನ್ನನ್ನೂ ಪ್ರಭಾರ ಪೌರಾಯುಕ್ತರ ಹುದ್ದೆಯಿಂದ ಬಿಡುಗಡೆಗೊಳಿಸುವಂತೆ ಜಿಲ್ಲಾಧಿಕಾರಿಯನ್ನು ಕೋರಿದ್ದೇನೆ ಎಂದು ತಿಳಿಸಿದ್ದಾರೆ. ಜನಪ್ರತಿ ನಿಧಿಗಳಾದ ನಾವು ಸಹ ಹಿಂದಿನ ಹಾಗೂ ಈಗಿನ ಜಿಲ್ಲಾಧಿಕಾರಿಗಳನ್ನು 3-4 ಬಾರಿ ಭೇಟಿ ಮಾಡಿದ್ದೇವೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ. ಮೇ 30ರಂದು 25 ಸದಸ್ಯರು ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಲು ಅವರ ಕಚೇರಿಗೆ ತೆರಳಿದಾಗ ಸುಮಾರು 2 ಗಂಟೆಗಳ ಕಾಲ ಅವರ ಕೊಠಡಿ ಮುಂಭಾಗ ಕಾಯ್ದು ಕುಳಿತಿದ್ದೆವು. ಆದರೆ, ಜಿಲ್ಲಾಧಿಕಾರಿ ಅವರು ನಮಗೆ ಸೌಜನ್ಯಕ್ಕಾದರೂ ಭೇಟಿಗೆ ಅವಕಾಶ ನೀಡಲಿಲ್ಲ. ಹಾಗಾಗಿ, ನಾವು ಪ್ರತಿಭಟನೆ ಹಾದಿ ಹಿಡಿಯಬೇಕಾಯಿತು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನಗರ ಸಭಾ ಸದಸ್ಯರಾದ ಚಿನ್ನಸ್ವಾಮಿ, ಬಂಗಾರು, ಇಮ್ರಾನ್ ಹಾಜರಿದ್ದರು.

ಚಾಮರಾಜನಗರ ನಗರಸಭೆಯಲ್ಲಿ ಕೋಟಿಗಟ್ಟಲೆ ಅವ್ಯವಹಾರ ನಡೆದಿದೆ ಎಂದು ಅಧ್ಯಕ್ಷರು ಹಾಗೂ ಸದಸ್ಯರು ಆರೋಪ ಮಾಡಿರುವುದರಿಂದ ಅವ್ಯವಹಾರದ ಬಗ್ಗೆ ಅವರಿಗೆ ತಿಳಿದಿರಬೇಕು. ಹಾಗಾಗಿ, ಈ ಕುರಿತು ಕೂಲಂಕುಷ ವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳ ಲಾಗುವುದು. ಪ್ರಭಾರ ಪೌರಾಯುಕ್ತರಾಗಿ ಉಪವಿಭಾಗಾಧಿಕಾರಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಆಡಳಿತಾವಧಿ ಯಲ್ಲಿ ಅವ್ಯವಹಾರ ನಡೆದಿಲ್ಲ. ನನ್ನನ್ನು ಭೇಟಿ ಮಾಡಲು ನಗರಸಭೆ ಅಧ್ಯಕ್ಷರು ಹಾಗೂ ಸದಸ್ಯರು ಬಂದಿದ್ದ ವೇಳೆ ನಾನು ಸಭೆಯೊಂದರಲ್ಲಿ ಪಾಲ್ಗೊಂಡಿದೆ. ಸಭೆ ಮುಗಿದ ಬಳಿಕ ಭೇಟಿ ಮಾಡಲು ಹೋದಾಗ ಅವರು ಅಲ್ಲಿ ಇರಲಿಲ್ಲ. ನನ್ನ ಮೇಲೆ ಸುಮ್ಮನೆ ಆರೋಪ ಮಾಡಲಾಗಿದೆ.
-ಬಿ.ಬಿ.ಕಾವೇರಿ, ಜಿಲ್ಲಾಧಿಕಾರಿ

Translate »