ಬಿಜೆಪಿ ಅಭ್ಯರ್ಥಿ ನಿರಂಜನಮೂರ್ತಿ ಗೆಲ್ಲಿಸಲು ಮನವಿ
ಚಾಮರಾಜನಗರ

ಬಿಜೆಪಿ ಅಭ್ಯರ್ಥಿ ನಿರಂಜನಮೂರ್ತಿ ಗೆಲ್ಲಿಸಲು ಮನವಿ

June 3, 2018

ಚಾಮರಾಜನಗರ:  ‘ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ದಲ್ಲಿದ್ದಾಗ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಅಭಿ ವೃದ್ಧಿ ಕೆಲಸಗಳನ್ನು ಮಾಡಲಾಗಿತ್ತು. ಇದನ್ನು ಗಮನಿಸಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತ ದಾರರು ಬಿಜೆಪಿ ಅಭ್ಯರ್ಥಿ ನಿರಂಜನ ಮೂರ್ತಿ ಅವರನ್ನು ಗೆಲ್ಲಿಸಬೇಕು’ ಎಂದು ವಿಧಾನಪರಿಷತ್ ಸದಸ್ಯ ಅರುಣ್ ಶಹಾ ಪೂರ ಮನವಿ ಮಾಡಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರಿಗೆ ವೇತನ ಅನುದಾನ ನೀಡಲಾಯಿತು. 1,737 ಅನುದಾನ ರಹಿತ ಶಾಲಾ- ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಲಾಯಿತು. ಅನುದಾನಿತ ಶಾಲಾ ಕಾಲೇಜುಗಳಿಗೆ ಶೇ.80ರಷ್ಟಿದ್ದ ಸರ್ಕಾರದ ಅನುದಾನವನ್ನು ಶೇ.100ಕ್ಕೆ ಹೆಚ್ಚಿಸಲಾ ಯಿತು. ಹಲವು ಪ್ರಾಥಮಿಕ, ಪ್ರೌಢ, ಪದವಿ ಕಾಲೇಜುಗಳನ್ನು ಆರಂಭಿಸ ಲಾಯಿತು. ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಯಿತು ಎಂದರು.

ಐದು ವರ್ಷದÀಲ್ಲಿ ಕಾಂಗ್ರೆಸ್ ಸರ್ಕಾರ ಶಿಕ್ಷಕರ ಕ್ಷೇತ್ರವನ್ನು ಕಡೆಗಣ ಸಿದೆ. ಮೂಲ ಸೌಕರ್ಯದ ನೆಪವೊಡ್ಡಿ ಅನುದಾನ ವಾಪಸ್ ಪಡೆಯುವ ಕೆಲಸ ಮಾಡಿದೆ. ಯಾವ ಶಾಲಾ-ಕಾಲೇಜುಗಳಿಗೂ ಅನುದಾನ ದೊರಕದ ರೀತಿ ನೀತಿ, ನಿಯಮಗಳನ್ನು ಮಾಡಲಾಗಿದೆ. ಇದರಿಂದ ಶೈಕ್ಷಣ ಕ ಸಂಸ್ಥೆ ಗಳು ತೊಂದರೆಗೆ ಸಿಲುಕಿವೆ. ಕಾಂಗ್ರೆಸ್ ಸರ್ಕಾರ ಶಿಕ್ಷಕರ ವರ್ಗಾವಣೆ ಬಗ್ಗೆ ಚಕಾರ ಎತ್ತಲಿಲ್ಲ. ಸರ್ವಶಿಕ್ಷಣ ಅಭಿ ಯಾನದ ಶಿಕ್ಷಕರಿಗೆ 3-4 ತಿಂಗಳಿಗೊಮ್ಮೆ ಸಂಬಳವಾಗುತ್ತಿದೆ. ಡಿಎಡ್ ಫಲಿತಾಂಶ ಬರುತ್ತಿಲ್ಲ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿಯವರು ರೈತರ ಸಾಲ ಮನ್ನಾ ಮಾಡಲು ಮುಂದಾ ಗಿದ್ದಾರೆ. ಇದಕ್ಕಾಗಿ ಹಲವಾರು ಇಲಾಖೆ ಗಳ ಅನುದಾನವನ್ನು ಕಡಿತಗೊಳಿಸುವ ಯತ್ನ ನಡೆದಿದೆ. ಶಿಕ್ಷಣ ಇಲಾಖೆಯ ಅನುದಾನವನ್ನೂ ಕಡಿತಗೊಳಿಸಲಾಗುತ್ತಿದೆ. 6ನೇ ವೇತನ ಆಯೋಗಕ್ಕಾಗಿ ಎದುರು ನೋಡುತ್ತಿದ್ದಾರೆ. ಇದರಿಂದ ಶಿಕ್ಷಕರು ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಬಿಜೆಪಿ ಪರ ಒಲವು ತೋರಿಸುತ್ತಿದ್ದಾರೆ. ಹಾಗಾಗಿ, ಪಕ್ಷದ ಅಭ್ಯರ್ಥಿ ನಿರಂಜನಮೂರ್ತಿ ಜಯಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಆರ್. ಮಲ್ಲಿಕಾರ್ಜುನಪ್ಪ, ಮಂಡಲ ಅಧ್ಯಕ್ಷ ಸುಂದರಪ್ಪ, ನಗರ ಘಟಕ ಆಧ್ಯಕ್ಷ ಸುಂದರರಾಜು ಹಾಜರಿದ್ದರು.

Translate »