ಅಂಚೆ ನೌಕರರ ಮುಷ್ಕರಕ್ಕೆ ಜೆಡಿಎಸ್-ಬಿಎಸ್‍ಪಿ ಬೆಂಬಲ
ಚಾಮರಾಜನಗರ

ಅಂಚೆ ನೌಕರರ ಮುಷ್ಕರಕ್ಕೆ ಜೆಡಿಎಸ್-ಬಿಎಸ್‍ಪಿ ಬೆಂಬಲ

June 3, 2018

ಚಾಮರಾಜನಗರ: ಶ್ರೀಕಮಲೇಶ ಚಂದ್ರ ಸಮಿತಿ ವರದಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ನಗರದ ಮುಖ್ಯ ಅಂಚೆ ಕಚೇರಿಯ ಆವರಣದಲ್ಲಿ ಗ್ರಾಮೀಣ ಅಂಚೆ ನೌಕರರು ನಡೆಸುತ್ತಿರುವ ಅನಿರ್ಧಿಷ್ಠಾವಧಿ ಮುಷ್ಕರಕ್ಕೆ ಶನಿವಾರ ಜೆಡಿಎಸ್ ಹಾಗೂ ಬಿಎಸ್‍ಪಿ ಮುಖಂಡರು ಬೆಂಬಲ ಸೂಚಿಸಿ ಪ್ರತಿ ಭಟನೆಯಲ್ಲಿ ಪಾಲ್ಗೊಂಡರು.

ಜೆಡಿಎಸ್ ರಾಜ್ಯ ಕಾರ್ಯಕಾರಿಣ ಸದಸ್ಯ ಸಿ.ಎಂ.ಕೃಷ್ಣಮೂರ್ತಿ ಮಾತನಾಡಿ, ಗ್ರಾಮೀಣ ಅಂಚೆ ನೌಕರರು ಬಿಸಿಲು, ಮಳೆ ಲೆಕ್ಕಿಸದೆ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಕೇಂದ್ರ ಸರ್ಕಾರ ಸೇವಾ ಭದ್ರತೆ ಒದಗಿಸದೆ ಇರು ವುದು ನಾಚಿಕೆಗೇಡಿನ ಸಂಗತಿಯಾಗಿದೆ. ದೇಶ ವನ್ನು ಅಭಿವೃದ್ದಿಪಡಿಸುತ್ತೇನೆ ಎಂದು ವಿದೇಶ ಪ್ರವಾಸದಲ್ಲಿ ಕಾಲಕಳೆಯುತ್ತಿರುವ ಪ್ರಧಾನಿ ನರೇಂದ್ರಮೋದಿ ಅವರು ದೇಶದ ಬಡವರು, ನೌಕರರ ಸಮಸ್ಯೆ ಬಗೆಹರಿಸಲು ವಿಫಲರಾಗಿ ದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್‍ನ ತಾಲೂಕು ಘಟಕದ ಅಧ್ಯಕ್ಷ ಆಲೂರುಮಲ್ಲು ಮಾತನಾಡಿ, ಭಾರತೀಯ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿ ರುವ ಗ್ರಾಮೀಣ ಅಂಚೆ ನೌಕರರ ಬೇಡಿಕೆ ಯನ್ನು ಕೇಂದ್ರ ಸರ್ಕಾರ ಈಡೇರಿಸದೆ ಇರು ವುದು ಖಂಡನೀಯ. ಅವರು ಹಲವು ಕಠಿಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನೌಕರರ ಹಿತದೃಷ್ಠಿಯಿಂದ ಕೂಡಲೇ ಕೇಂದ್ರ ಸರ್ಕಾರ ಶ್ರೀಕಮಲೇಶಚಂದ್ರ ಸಮಿತಿಯ ವರದಿ ಜಾರಿಗೊಳಿಸಬೇಕು ಎಂದರು.

ಪ್ರತಿಭಟನೆಯಲ್ಲಿ ಜೆಡಿಎಸ್ ತಾಲೂಕು ಪ್ರಧಾನ ಕಾರ್ಯದರ್ಶಿ ವರದರಾಜು, ಮುಖಂ ಡರಾದ ಬ್ಯಾಡಮೂಡ್ಲು ಬಸವಣ್ಣ, ಹಂಡ್ರ ಕಳ್ಳಿ ಬಸವರಾಜು, ವಿಭಾಗೀಯ ಕಾರ್ಯ ದರ್ಶಿಗಳಾದ ಎ.ಮಹೇಶ್, ಮಲ್ಲಿಕಾರ್ಜುನ, ಎಂ.ಡಿ.ಶಿವಣ್ಣ, ಸುಬ್ಬಣ್ಣ, ಶಾಂತೇಶ್, ಚಿಕ್ಕ ಲಿಂಗಪ್ಪ, ಕೋಡಿಮೋಳೆ ಗೋವಿಂದಶೆಟ್ಟಿ, ನಾಗೇಂದ್ರ, ಶಿವಣ್ಣ, ಮಹದೇವಯ್ಯ, ನಾಗರಾಜು, ಸಿದ್ದರಾಜು, ಚಿಕ್ಕಸ್ವಾಮಿ, ನಿಜಲಿಂಗಮೂರ್ತಿ ಇದ್ದರು.

Translate »