ಬಿವಿಬಿ ಸಂಸ್ಥಾಪಕ ಡಾ.ಕೆ.ಎಂ.ಮುನ್ಷಿ ಸ್ಮರಣೆ
ಮೈಸೂರು

ಬಿವಿಬಿ ಸಂಸ್ಥಾಪಕ ಡಾ.ಕೆ.ಎಂ.ಮುನ್ಷಿ ಸ್ಮರಣೆ

February 9, 2020

ಮನುಷ್ಯನ ಒತ್ತಡಕ್ಕೆ ಸಂಗೀತವೇ ಮದ್ದು: ವಿದುಷಿ ಆರ್.ಎನ್. ಶ್ರೀಲತಾ ಅಭಿಮತ
ಮೈಸೂರು,ಫೆ.8(ವೈಡಿಎಸ್)-ಭಾರ ತೀಯ ವಿದ್ಯಾಭವನ(ಬಿವಿಬಿ) ಸಂಸ್ಥಾಪಕ ರಾದ ಡಾ.ಕೆ.ಎಂ.ಮುನ್ಷಿ ಅವರು ಎಲ್ಲರೂ ಸಂಗೀತ, ನೃತ್ಯ ಕಲೆಗಳನ್ನು ಕಲಿಯಬೇಕು. ಸದ್ಭಾವನೆ ಮೂಡಬೇಕೆಂಬ ಆಶಯದಲ್ಲಿ ಕಲಾ ಭಾರತಿ ವಿಭಾಗ ತೆರೆದರು ಎಂದು ವಿದುಷಿ ಆರ್.ಎನ್.ಶ್ರೀಲತಾ ಅಭಿಪ್ರಾಯಪಟ್ಟರು.

ಮೈಸೂರು ವಿಜಯನಗರ ಮೊದಲ ಹಂತದಲ್ಲಿರುವ ಭಾರತೀಯ ವಿದ್ಯಾಭವ ನದ ಕಲಾಭಾರತಿ ವಿಭಾಗದ ವತಿಯಿಂದ ಭಾರತೀಯ ವಿದ್ಯಾ ಭವನದ ಸಂಸ್ಥಾಪಕ ರಾದ ಕುಲಪತಿ ಡಾ.ಕೆ.ಎಂ.ಮುನ್ಷಿ ಅವರ 132ನೇ ಜನ್ಮೋತ್ಸವದ ಅಂಗವಾಗಿ ಶನಿ ವಾರ ಆಯೋಜಿಸಿದ್ದ `ಭವನೋತ್ಸವ’ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ವಿದ್ಯಾ ಭವನವನ್ನು ಬಹಳ ಕಷ್ಟದಿಂದ ಸ್ಥಾಪಿಸಿದ ಡಾ.ಕೆ.ಎಂ.ಮುನ್ಷಿ ಅವರ ಸ್ಮರಣೆ ಮಾಡಲು ನನಗೊಂದು ಅವಕಾಶವಾಯಿತು. ಪ್ರದರ್ಶಕ ಕಲೆಗಳಿಗೆ ಹೆಚ್ಚು ಒತ್ತಾಸೆಯಾಗಿದ್ದ ಮುನ್ಷಿ ಅವರು, ಎಲ್ಲರೂ ನೃತ್ಯ, ಸಂಗೀತ ಕಲೆಗಳನ್ನು ಕಲಿಯ ಬೇಕು. ಸದ್ಭಾವನೆ ಮೂಡಬೇಕೆಂಬ ಆಶಯ ದಲ್ಲಿ ಕಲಾಭಾರತಿ ವಿಭಾಗ ತೆರೆದರು. ಪ್ರಪಂಚ ದಾದ್ಯಂತ ಭಾರತೀಯ ವಿದ್ಯಾಭವನ ಕೇಂದ್ರಗಳಿದ್ದು, ಈ ಎಲ್ಲಾ ಕೇಂದ್ರಗಳಲ್ಲೂ ಸಂಗೀತ, ನೃತ್ಯ ವಿಭಾಗಗಳಿವೆ. ಉತ್ತಮ ಶಿಕ್ಷಕರಿದ್ದು, ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.

ಸಂಗೀತ ಎಲ್ಲೂ ಮರೆಯಾಗಿಲ್ಲ. ಪೋಷ ಕರು, ಮಕ್ಕಳನ್ನು ಸಂಗೀತ ಕಲಿಯಲು ಕಳು ಹಿಸುವ ಮೂಲಕ ಅದನ್ನು ಬೆಳೆಸುತ್ತಿದ್ದಾರೆ. ಇಂದಿನ ಭವನೋತ್ಸವದಲ್ಲಿ ಮಕ್ಕಳು ಪಾಲ್ಗೊಂಡು ಹಬ್ಬದ ರೀತಿಯಲ್ಲಿ ಕಾರ್ಯ ಕ್ರಮ ನಡೆಸುತ್ತಿರುವುದು ಸಂತೋಷದ ವಿಷಯ. ಈ ಭವನೋತ್ಸವದ ನೇತೃತ್ವ ವಹಿಸಿ ರುವ ತುಳಸಿ ರಾಮಚಂದ್ರರವರು ಉತ್ತಮ ನೃತ್ಯ ಶಿಕ್ಷಕಿಯಾಗಿದ್ದು, ಅವರ ಗರಡಿಯಲ್ಲಿ ಪಳಗಿದ ಶಿಷ್ಯರು ನೃತ್ಯ ಕಚೇರಿ ನೀಡುತ್ತಿ ದ್ದಾರೆ. ಜತೆಗೆ ಪತಿ ರಾಮಚಂದ್ರರವರು ಗಮಕದಲ್ಲಿ ಬಹಳ ಪರಿಣತರು. ಹೀಗೆ ಕಲಾ ಕುಟುಂಬದಿಂದ ಬಂದ ತುಳಸಿ ಅವರು, ಕಲಾ ಭಾರತಿ ವಿಭಾಗದ ನೇತೃತ್ವ ವಹಿಸಿ ನಡೆಸಿಕೊಂಡು ಬರುತ್ತಿರುವುದು ಸಂತೋಷದ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮೆಲ್ಲಾ ಒತ್ತಡಗಳನ್ನು ಕಡಿಮೆ ಮಾಡುವ ಶಕ್ತಿ ಸಂಗೀತಕ್ಕಿದೆ. ಮಕ್ಕಳು ಸಂಗೀತ, ನೃತ್ಯ ಏನೇ ಕಲಿತರು ಅದನ್ನು ನಿಲ್ಲಿಸದೆ ಜೀವನ ದುದ್ದಕ್ಕೂ ಬೆಳೆಸಿ, ಪೋಷಿಸಬೇಕು. ಆ ಮೂಲಕ ಮುಂದಿನ ಪೀಳಿಗೆಗೂ ಅದು ಪಸರಿಸಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಬಿವಿಬಿಯ ನಿವೃತ್ತ ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಎಸ್.ಸಿ. ಬಾಲಸುಬ್ರಹ್ಮಣ್ಯಂ ದಂಪತಿಯನ್ನು ಸನ್ಮಾನಿ ಸಲಾಯಿತು. ಬಿವಿಬಿ ಬೆಂಗಳೂರು ಅಧ್ಯಕ್ಷ ಎನ್.ರಾಮಾನುಜ, ಬಿವಿಬಿ ಮೈಸೂರು ಕೇಂದ್ರದ ಅಧ್ಯಕ್ಷ ಪೆÇ್ರ.ಎ.ವಿ.ನರಸಿಂಹ ಮೂರ್ತಿ, ಖಜಾಂಚಿ ಡಾ.ಎ.ಟಿ.ಭಾಷ್ಯಂ, ಕಾರ್ಯಕ್ರಮ ಸಂಚಾಲಕರಾದ ಡಾ. ತುಳಸಿ ರಾಮಚಂದ್ರ ಉಪಸ್ಥಿತರಿದ್ದರು.

ನಂತರ ಸಂಗೀತ ವಿಭಾಗದ ವಿದ್ಯಾರ್ಥಿ ಗಳು ವಿ.ಸುಮಾ ಹರಿನಾಥ್ ನಿರ್ದೇಶ ನದ ಪ್ರಾರ್ಥನಾ ಗೀತೆ ನಡೆಸಿಕೊಟ್ಟರೆ, ವೀಣಾ ವಿಭಾಗದ ವಿದ್ಯಾರ್ಥಿಗಳು ವಿದುಷಿ ರಮಾಮಣಿ ನಿರ್ದೇಶನದ ವೀಣಾ ವಾದನ, ತಬಲಾ ವಿಭಾಗದ ವಿದ್ಯಾರ್ಥಿಗಳು ವಿದ್ವಾನ್ ರಮೇಶ್ ಧನ್ನೂರ್ ನಿರ್ದೇಶನದ ತಬಲಾ ವಾದನ, ಹಿಂದೂಸ್ತಾನಿ ವಿಭಾಗದ ವಿದ್ಯಾರ್ಥಿಗಳು ವಿದ್ವಾನ್ ಪ್ರಭುರಾವ್ ನಿರ್ದೆಶನದ ಹಿಂದುಸ್ತಾನಿ ಗಾಯನ, ವಿದ್ವಾನ್ ಆದರ್ಶ ಶೆಣೈ ತಬಲಾ ವಾದನ ನಡೆಸಿಕೊಟ್ಟರು. ನೃತ್ಯ ವಿಭಾಗದ ವಿದ್ಯಾರ್ಥಿಗಳು ವಿದುಷಿ ಅನನ್ಯ ಮತ್ತು ಬಿಂದು ನಿರ್ದೇಶನದ ಭರತನಾಟ್ಯ ಪ್ರದ ರ್ಶಿಸಿ, ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದರು.

Translate »