ಮೈಸೂರು,ಫೆ.8-ಎಲ್ಲರಿಗೂ ಗ್ರಂಥಾ ಲಯ ಸೌಲಭ್ಯ ಸಿಗಬೇಕೆಂಬುದು ಸರ್ಕಾ ರದ ಆಶಯ. ಈ ಕೊರತೆಯನ್ನು ನೀಗಿ ಸಲು ಮೈಸೂರಿನಲ್ಲಿ ಸಂಚಾರಿ ಗ್ರಂಥಾ ಲಯ ವ್ಯವಸ್ಥೆ ಕಲ್ಪಿಸಲಾಗಿದೆ.
ಬುಕ್‍ಮೊಬೈಲ್, ಮೊಬೈಲ್ ಲೈಬ್ರರಿ ಅಥವಾ ಸಂಚಾರಿ ಗ್ರಂಥಾಲಯ ಎನ್ನು ವುದು ಗ್ರಂಥಾಲಯವಾಗಿ ಬಳಸಲು ವಿನ್ಯಾಸಗೊಳಿಸಲಾದ ಒಂದು ವಿಶಿಷ್ಟ ವಾಹನ. ಗ್ರಂಥಾಲಯಗಳು ಇಲ್ಲದಿ ರುವ ಪ್ರದೇಶಗಳಲ್ಲಿ ಈ ಸಂಚಾರಿ ಗ್ರಂಥಾಲಯದ ಮೂಲಕ ಸಾಕ್ಷರತೆ ಜೊತೆಗೆ ಜ್ಞಾನ ಪ್ರಸಾರದ ಉದ್ದೇಶ.
ಮೈಸೂರು ನಗರ ಗ್ರಂಥಾಲಯದ ಶತಮಾನೋತ್ಸವದ ಅಂಗವಾಗಿ 2016ರ ಜನವರಿ 8ರಂದು ಕುವೆಂಪು ಸಂಚಾರಿ ಗ್ರಂಥಾಲಯ ವಾಹನವು ಮೈಸೂರಿನಲ್ಲಿ ಪ್ರಾರಂಭವಾಯಿತು. ನಗರದ ವಿವಿಧ ವಾರ್ಡ್‍ಗಳ ಸಾರ್ವಜನಿಕರ ಉಪಯೋಗ ಕ್ಕಾಗಿ ಈ ನೂತನ ಮಾದರಿಯ ಸಂಚಾರಿ ಗ್ರಂಥಾಲಯದಲ್ಲಿ ಕತೆ-ಕಾದಂಬರಿ, ಸಾಹಿತ್ಯ, ಸಾಮಾನ್ಯ ಜ್ಞಾನ, ಆಧ್ಯಾತ್ಮ, ಪ್ರಚಲಿತ ವಿದ್ಯಮಾನದ ಪುಸ್ತಕಗಳು, ಮಕ್ಕಳ ಹಾಗೂ ಇತರೆ ಪುಸ್ತಕಗಳು ಸೇರಿದಂತೆ ಗಣಕೀಕೃತಗೊಂಡ ಸುಮಾರು 7,000 ಪುಸ್ತಕಗಳು ಇಲ್ಲಿ ಲಭ್ಯ ಇವೆ.
ಈ ಗ್ರಂಥಾಲಯ ವಾಹನದಲ್ಲಿ ಆಡಿಯೋ ಮತ್ತು ವೀಡಿಯೋ, ಲೈಟಿಂಗ್, ಫ್ಯಾನ್ ಹಾಗೂ ಸಾರ್ವಜನಿಕ ಓದುಗರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ಸೌಕರ್ಯ ಕೂಡ ಕಲ್ಪಿಸಲಾಗಿದ್ದು, ಜಿಪಿಎಸ್ ಟ್ರ್ಯಾಕಿಂಗ್ ಸೌಲಭ್ಯವನ್ನು ಅಳವಡಿಸಲಾ ಗಿದೆ. ಹಿರಿಯ ನಾಗರಿಕರು, ಮಹಿಳೆ ಯರು, ಮಕ್ಕಳು ಇಲ್ಲಿ ಲಭ್ಯವಿರುವ ಕನ್ನಡ, ಇಂಗ್ಲಿಷ್, ಹಿಂದಿ ಹಾಗೂ ಉರ್ದು ಭಾಷೆಯ ಪುಸ್ತಕಗಳನ್ನು ಎರವಲು ಪಡೆದು ಕೊಳ್ಳುವಂತೆ ಲೋ ಫುಟ್ ಬೋರ್ಡ್ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಸಂಚಾರಿ ಗ್ರಂಥಾ ಲಯ ಸೋಮವಾರ ಹೊರತುಪಡಿಸಿ ವಾರದ ಉಳಿದ 6 ದಿನಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಗ್ರಂಥಾ ಲಯ ಇಲ್ಲದಿರುವ 40 ವಾರ್ಡ್‍ಗಳಲ್ಲಿ ವಾರಕ್ಕೊಮ್ಮೆ ನಿಗದಿತ ಸ್ಥಳದಲ್ಲಿ ಪ್ರತಿ ಸ್ಟಾಪ್‍ನಲ್ಲಿ ಸುಮಾರು 40 ನಿಮಿಷಗಳ ಕಾಲ ಸಾರ್ವಜನಿಕರಿಗೆ ಸೇವೆಯನ್ನು ಒದ ಗಿಸುತ್ತಿದೆ. ಪುಸ್ತಕಗಳನ್ನು ಎರವಲು ಪಡೆ ಯಲಿಚ್ಛಿಸುವವರು 230 ರೂ.ಗಳನ್ನು ನೀಡಿ ಸದಸ್ಯತ್ವ ಕಾರ್ಡ್ ಪಡೆದು ಒಮ್ಮೆಗೆ 3 ಪುಸ್ತಕಗಳನ್ನು ಪಡೆಯಬಹುದು. 2 ವಾರ ಗಳ ಕಾಲ ತಮ್ಮ ಬಳಿಯೇ ಪುಸ್ತಕಗಳನ್ನು ಇಟ್ಟುಕೊಳ್ಳಬಹುದಾಗಿದ್ದು, ದಿನಾಂಕ ಮೀರಿದರೆ ದಂಡ ಕಟ್ಟಬೇಕಾಗುವುದು.