ಸಂಗೀತ ವಿದ್ವಾನ್ ಡಾ. ರಾ.ಸತ್ಯನಾರಾಯಣರಿಗೆ ಮೈಸೂರಲ್ಲಿ ಭಾವಪೂರ್ಣ ಶ್ರದ್ಧಾಂಜಲಿ
ಮೈಸೂರು

ಸಂಗೀತ ವಿದ್ವಾನ್ ಡಾ. ರಾ.ಸತ್ಯನಾರಾಯಣರಿಗೆ ಮೈಸೂರಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

February 9, 2020

ಮೈಸೂರು, ಫೆ.8(ಎಂಕೆ)- ಸಂಗೀತ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ ವಿರಳಾತಿ ವಿರಳರಲ್ಲಿ ವಿದ್ವಾಂಸ ಡಾ.ರಾ. ಸತ್ಯನಾರಾಯಣ ಒಬ್ಬರಾಗಿದ್ದು, ಅದ್ಭುತ ಬರವಣಿಗೆ ಮೂಲಕ ಸಾಹಿತ್ಯ, ಸಂಗೀತ ಪ್ರಿಯರ ಮನದಲ್ಲಿ ಅಚ್ಚಳಿಯದೆ ಉಳಿದಿ ದ್ದಾರೆ ಎಂದು ಸಂಸ್ಕøತಿ ಚಿಂತಕ ಡಾ. ಹೆಚ್.ವಿ.ನಾಗರಾಜರಾವ್ ಹೇಳಿದರು.

ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ರಾ.ಸ.ಶ್ರದ್ಧಾಂಜಲಿ ಸಮರ್ಪಣಾ ಒಕ್ಕೂಟ ಆಯೋಜಿಸಿದ್ದ ಪದ್ಮಶ್ರೀ ಪುರಸ್ಕøತ ಡಾ. ರಾ.ಸತ್ಯನಾರಾಯಣ ಅವರಿಗೆ ಭಾವ ಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದ ವ್ಯಕ್ತಿಗಳಲ್ಲಿ ರಾ.ಸತ್ಯನಾರಾಯಣರು ಮೊದ ಲಿಗರಾಗಿದ್ದು, ಅವರ ಅಪಾರ ಜ್ಞಾನ-ಪಾಂಡಿತ್ಯ ಇತರರಿಗೆ ಮಾದರಿಯಾಗಿದೆ. ಇಂತಹವರಿಂದಲೇ ಭೂಮಿ ಶ್ರೀಮಂತ ವಾಗಿರುವುದು ಅನಿಸುತ್ತದೆ. ವೃತ್ತಿಯಲ್ಲಿ ರಾಸಾಯನಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಅವರು, ಪ್ರವೃತ್ತಿಯಲ್ಲಿ ಸಂಗೀತ ಸಾಧಕ ರಾಗಿದ್ದಾರೆ. ಅವರೊಂದಿಗೆ ಕೆಲವು ವೇದಿಕೆಗಳನ್ನು ಹಂಚಿಕೊಳ್ಳುವ ಭಾಗ್ಯ ನನ್ನದಾಗಿತ್ತು ಎಂದು ಸ್ಮರಿಸಿದರು.

ಅಖಿಲ ಭಾರತ ಮಟ್ಟದಲ್ಲಿ ಶ್ರೇಷ್ಠ ಸಾಧನೆ ಮಾಡಿರುವ ರಾ.ಸ ಅವರು, ಮಹಾನ್ ಗ್ರಂಥಗಳನ್ನು ಕನ್ನಡ ಮತ್ತು ಸಂಸ್ಕøತದಲ್ಲಿ ಬರೆದಿದ್ದು, ಒಂದೊಂದು ಪದದಲ್ಲಿಯೂ ಅವರ ಪಾಂಡಿತ್ಯದ ದರ್ಶನವಿದೆ. ಆದರ್ಶ ಜೀವಿಯಾಗಿದ್ದ ಅವರು, ಸ್ವರ್ಗದಲ್ಲಿ ಶಾಶ್ವತ ವಾಗಿ ನೆಲೆಸುತ್ತಾರೆ ಎಂದು ಬಣ್ಣಿಸಿದರು.

ವಿದುಷಿ ಜ್ಯೋತಿ ಪಟ್ಟಾಭಿರಾಮ್ ಮಾತ ನಾಡಿ, ಭಗವಂತನಿಗಿಂತ ಗುರುವೇ ಮೊದಲು ಎಂಬುದು ರಾ.ಸ. ಅವರಿಂದ ಕಲಿತ ಶಿಷ್ಯರ ಮಾತಾಗಿದೆ. ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದ ಅವರು, ದೇಶ-ವಿದೇಶಗಳಲ್ಲಿ ಅಪಾರ ಶಿಷ್ಯ ಬಳಗವನ್ನು ಹೊಂದಿದ್ದಾರೆ. ಅವರ ಜನ್ಮದಿನ ಆಚರಣೆ ಸರ್ಕಾರದ ಮಟ್ಟದಲ್ಲಿ ಆಗಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ವೀಣಾ ವಿದ್ವಾಂಸ ಡಾ.ರಾ. ವಿಶ್ವೇಶ್ವರಪ್ಪ, ಸಂಗೀತ ವಿದ್ವಾಂಸ ರಾ.ಸ. ನಂದಕುಮಾರ್, ರಾಧಿಕಾ ನಂದಕುಮಾರ್, ಪಿಟೀಲು ವಿದ್ವಾನ್ ನರಸಿಂಹಮೂರ್ತಿ, ಪದ್ಮನಾಭ, ಡಾ.ಜ್ಯೋತಿ ಶಂಕರ್, ಸಂದೇಶ್ ಭಾರ್ಗವ್, ಗಾಯಕ ಹರ್ಷ ಮತ್ತಿತರರು ಉಪಸ್ಥಿತರಿದ್ದರು.

 

Translate »