ಸದೃಢ ರಾಷ್ಟ್ರಕ್ಕೆ ಬಲಿಷ್ಠ, ಸ್ವತಂತ್ರ ನ್ಯಾಯಾಂಗ ಅವಶ್ಯ
ಮೈಸೂರು

ಸದೃಢ ರಾಷ್ಟ್ರಕ್ಕೆ ಬಲಿಷ್ಠ, ಸ್ವತಂತ್ರ ನ್ಯಾಯಾಂಗ ಅವಶ್ಯ

February 9, 2020

ಮೈಸೂರು, ಫೆ.8(ಎಸ್‍ಬಿಡಿ)- ಸದೃಢ ರಾಷ್ಟ್ರಕ್ಕೆ ಬಲಿಷ್ಠ ಹಾಗೂ ಸ್ವತಂತ್ರ ನ್ಯಾಯಾಂಗ ಅಗತ್ಯ ಎಂದು ರಾಜ್ಯ ಹೈಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರು ಅಭಿಪ್ರಾಯಿಸಿದರು.

ಮೈಸೂರಿನ ಜೆಎಸ್‍ಎಸ್ ಕಾನೂನು ಕಾಲೇಜಿನಲ್ಲಿ ಶನಿವಾರ ನಡೆದ 18ನೇ ಸುರಾನಾ ಮತ್ತು ಸುರಾನ ನ್ಯಾಷನಲ್ ಕಾರ್ಪೊರೇಟ್ ಮೂಟ್ ಕಾಂಪಿಟೇಷನ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಾನೂನು ಇಲ್ಲದೆ ಯಾವುದೇ ದೇಶದಲ್ಲಿ ವ್ಯವಸ್ಥಿತ ಆಡಳಿತ ಕಾಣಲು ಸಾಧ್ಯವಿಲ್ಲ. ಹೀಗೆ ಕಾನೂನು ನಿಯಮವನ್ನು ಹೊಂದಬೇಕಾದರೆ ಬಲಿಷ್ಠ ಹಾಗೂ ಸ್ವತಂತ್ರ ನ್ಯಾಯಾಂಗ ಇರಬೇಕು ಎಂದರು.

ನ್ಯಾಯ ಕ್ಷೇತ್ರದಲ್ಲಿ, ನ್ಯಾಯವನ್ನು ತಲುಪಿಸುವಲ್ಲಿ ನ್ಯಾಯಾಧೀಶರು ಪ್ರಮುಖರಾಗಿದ್ದಾರೆ. ನ್ಯಾಯಾಂಗದ ಬಾರ್‍ನಿಂದ ದೊರೆತ ಮಾರ್ಗದರ್ಶನದಿಂದ ನ್ಯಾಯಾಧೀಶರು ದಕ್ಷರಾಗುತ್ತಾರೆ. ಹಾಗೆಯೇ ಕಾನೂನು ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಉತ್ತಮವಾಗಿದ್ದು, ಯುವ ವಕೀಲರು, ಹಿರಿಯ ವಕೀಲರೊಂದಿಗೆ ಉತ್ತಮವಾಗಿ ಸ್ಪರ್ಧಿಸಲು ಸಮರ್ಥರಾಗಿದ್ದಾರೆ ಎಂದು ಹೇಳಿದರು.

ಹುಬ್ಬಳ್ಳಿಯ ಕೆಎಸ್‍ಎಲ್‍ಯು ಉಪಕುಲಪತಿ ಡಾ.ಪಿ. ಈಶ್ವರ ಭಟ್, ಜೆಎಸ್‍ಎಸ್ ಮಹಾವಿದ್ಯಾಪೀಠ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ್, ಸುರಾನಾ ಮತ್ತು ಸುರಾನಾ ಅಂತಾರಾಷ್ಟ್ರೀಯ ವಕೀಲರ ಸಿಇಒ ವಿನೋದ್ ಸುರಾನಾ ಮತ್ತಿತರರು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.

Translate »