ಬೈಕ್‍ಗೆ ಪೊಲೀಸ್ ಜೀಪ್ ಡಿಕ್ಕಿ, ಯುವಕ ಸಾವು
ಚಾಮರಾಜನಗರ

ಬೈಕ್‍ಗೆ ಪೊಲೀಸ್ ಜೀಪ್ ಡಿಕ್ಕಿ, ಯುವಕ ಸಾವು

May 5, 2018

ಚಾಮರಾಜನಗರ: ಬೈಕ್ ಗೆ ಪೊಲೀಸ್ ಜೀಪ್ ಡಿಕ್ಕಿಯಾಗಿ ತೀವ್ರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ತಾಲೂಕು ಬಸವಟ್ಟಿ ಗ್ರಾಮದಲ್ಲಿ ನಡೆದಿದೆ.

ಸಂತೇಮರಹಳ್ಳಿ ಮೈಸೂರು ರಸ್ತೆಯ ಬಸವಟ್ಟಿ ಗೇಟ್ ಸಮೀಪ ಬೈಕ್‍ನಲ್ಲಿ ಬರುತ್ತಿದ್ದ ಶಂಭುಲಿಂಗಪ್ಪ (ಚಿಕ್ಕಣ್ಣ) ಅವರ ವಾಹನಕ್ಕೆ ಡಿವೈಎಸ್‍ಪಿ ಜಯಕುಮಾರ್ ಪ್ರಯಾಣ ಸುತ್ತಿದ್ದ ಪೆÇಲೀಸ್ ಜೀಪ್ ಡಿಕ್ಕಿಯಾಗಿದೆ. ಶುಕ್ರವಾರ ನಡೆದ ಘಟನೆಯಲ್ಲಿ ಶಂಭುಲಿಂಗಪ್ಪ ಅವರ ತಲೆಗೆ ಗಂಭೀರ ಗಾಯಗಳಾಗಿದ್ದವು. ಸ್ಥಳೀಯರೆಲ್ಲ ಸೇರಿ ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದರು. ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲ ನೀಡದ ಕಾರಣ ಅವರು ಮೃತಪಟ್ಟಿದ್ದಾರೆ.

ಘಟನೆ ವೇಳೆ ಪೊಲೀಸ್ ಜೀಪ್ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದ ಹೊಲಕ್ಕೆ ನುಗ್ಗಿತ್ತು. ಆದರೆ ಅಪಘಾತಕ್ಕೆ ಕಾರಣವಾದ ಪೊಲೀಸ್ ಜೀಪಿನಲ್ಲಿದ್ದ ಹಿರಿಯ ಅಧಿಕಾರಿ ಸೇರಿದಂತೆ ನಾಲ್ಕೈದು ಪೆÇಲೀಸ್ ಸಿಬ್ಬಂದಿ ತಕ್ಷಣ ವಾಹನದಿಂದಿಳಿದರಲ್ಲದೆ ರಸ್ತೆಗೆ ಓಡಿ ಬಸ್ ಹತ್ತಿ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಇದಕ್ಕೂ ಮುನ್ನ ಪೆÇಲೀಸರ ವಿರುದ್ಧ ತೀವ್ರ ಆಕ್ರೋಶಗೊಂಡ ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ಪರಿಸ್ಥಿತಿ ತಿಳಿಗೊಳಿಸುವುದಕ್ಕಾಗಿ  ಪೆÇೀಲೀಅರು ಲಘು ಲಾಠಿ ಪ್ರಹಾರ ನಡೆಸಿದರೆಂದು ಹೇಳಲಾಗಿದೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಚಾ.ನಗರ-ತಿ.ನರಸೀಪುರ ರಸ್ತೆ ತಡೆದು ಪ್ರತಿಭಟನೆ ಆರಂಭಿಸಿದರು. ಇದರಿಂದ ಹಲವು ತಾಸುಗಳ ಕಾಲ ಹೆದ್ದಾರಿ ಬಂದ್ ಆಗಿ ವಾಹನಗಳು ಕಿಲೋ ಮೀಟರ್‍ಗಟ್ಟಲೆ ಸಾಲುಗಟ್ಟಿ ನಿಂತಿದ್ದು ಪ್ರಯಾಣ ಕರು ಪರದಾಡುವಂತಾಯಿತು. ಸ್ಥಳಕ್ಕೆ ಬಂದ ಪೊಲೀಸರಿಗೆ ಹಿರಿಯ ಅಧಿಕಾರಿಗಳೊಂದಿಗೆ ಗ್ರಾಮಸ್ಥರು ಮಾತಿನ ಚಕಮಕಿ ನಡೆಸಿದ ಪ್ರಸಂಗವೂ ನಡೆಯಿತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Translate »